ಉಡುಪಿ: ಹಂಸಲೇಖ ಅವರ ಟೀಕೆಗಳಿಗೆ ನಾವು ಪ್ರತಿಭಟನೆ ಮಾಡಲು ಹೋಗುವುದಿಲ್ಲ, ಶ್ರೀಕೃಷ್ಣನೇ ಪ್ರತೀಕಾರ ಮಾಡುತ್ತಾನೆ ಎಂದು ಪೇಜಾವರ ಮಠದ ಯತಿಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಸೋಮವಾರ ಹೇಳಿಕೆ ನೀಡಿದ್ದಾರೆ.

‘ದಲಿತರ ಕೇರಿಯಲ್ಲಿ ಪೇಜಾವರ ಶ್ರೀಗಳು ಕುರಿ, ಕೋಳಿ ಮಾಂಸ ಕೊಟ್ಟರೆ ತಿನ್ನುತ್ತಿದ್ದರೆ’ ಎಂಬ ಹಂಸಲೇಖ ಅವರ ಟೀಕೆಗೆ ಮಾಧ್ಯಮಗಳಿಗೆ ಶ್ರೀ ವಿಶ್ವ ಪ್ರಸನ್ನ ತೀರ್ಥರು ಪ್ರತಿಕ್ರಿಯೆ ನೀಡಿದ್ದಾರೆ.
‘ಹಂಸಲೇಖ ಅವರಿಗೆ ಇಂತಹ ಹೇಳಿಕೆಯಿಂದ ಪ್ರಚಾರ ಬೇಕಿರಲಿಲ್ಲ. ಇಂತಹ ಮಾತುಗಳು ಅವರ ಬಾಯಿಯಿಂದ ಬರಬಾರದಿತ್ತು. ಗುರುಗಳಾದ ವಿಶ್ವೇಶ ತೀರ್ಥ ಶ್ರೀಪಾದರು ಎಂದೂ ಪ್ರಚಾರಕ್ಕಾಗಿ ಕೆಲಸ ಮಾಡಿದವರಲ್ಲ. ಕೇವಲ ವಿಗ್ರಹದಲ್ಲಿ ಮಾತ್ರವಲ್ಲ, ಎಲ್ಲರ ಹೃದಯದಲ್ಲಿ ಅವರು ಕೃಷ್ಣನನ್ನು ಕಂಡಿದ್ದರು. ಅವರು ಪ್ರಚಾರಕ್ಕಾಗಿ ದಲಿತರ ಮನೆಗಳಿಗೆ ಹೋಗಿರಲಿಲ್ಲ’ ಎಂದರು.
‘ಕೃಷ್ಣನಿಗೆ ಅಗ್ರಪೂಜೆ ಮಾಡುವ ವೇಳೆಯಲ್ಲಿ ಶಿಶುಪಾಲ ಟೀಕಿಸಿದ್ದ, ಅವನಿಗೆ ಕೃಷ್ಣನೇ ತಕ್ಕ ಶಾಸ್ತಿ ಮಾಡಿದ್ದ, ಅದೇ ರೀತಿಯಲ್ಲಿ ಈ ವಿಚಾರದಲ್ಲೂ ಶ್ರೀಕೃಷ್ಣನೇ ಪ್ರತೀಕಾರ ಮಾಡುತ್ತಾನೆ’ ಎಂದರು.
Comments are closed.