ಕರಾವಳಿ

ಸ್ತ್ರೀ ಶಕ್ತಿಯ ಜಾಗೃತಿಯು ಇಂದಿನ ಅನಿವಾರ್ಯ : ದಯಾನಂದ ಕತ್ತಲ್ ಸಾರ್

Pinterest LinkedIn Tumblr

ಮಂಗಳೂರು : ಸಮಾಜದ ಪ್ರಸ್ತುತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಸ್ತ್ರೀಯರು ಸ್ವಯಂ ರಕ್ಷಣೆಗಾಗಿ ಜಾಗೃತರಾಗುವ ಮೂಲಕ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಬಂದೊದಗಿದೆ ಎಂಬುದಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ನುಡಿದರು.

ಉಳ್ಳಾಲದ ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವದ ಸಮಾರೋಪ ಸಮಾರಂಭದ ಅತಿಥಿಗಳಾಗಿ ಅವರು ಮಾತನಾಡಿದರು.

ಯುವ ಪೀಳಿಗೆಯಲ್ಲಿ ರಾಷ್ಟ್ರ ಭಕ್ತಿ, ಧಾರ್ಮಿಕ ಚಿಂತನೆ , ಸತ್ ಸಂಸ್ಕಾರಗಳು ಉದ್ದೀಪನಗೊಳ್ಳಬೇಕಿದ್ದರೆ ಮಹಿಳೆಯರ ಪಾತ್ರ ಮಹತ್ತರದ್ದಾಗಿದೆ, ಯುವ ತರುಣರೂ ಕೂಡ ಸ್ತ್ರೀ ರಕ್ಷಣೆ, ಗೋರಕ್ಷಣೆ, ದೇಶ ರಕ್ಷಣೆಗೆ ಕಟಿಬದ್ಧರಾಗಬೇಕೆಂದು ಕರೆಯಿತ್ತರು.

ಶಾರದಾ ಉತ್ಸವದ ಮೂಲ ಮಂತ್ತವೇ ಶಕ್ತಿಯ ಆರಾಧನೆ, ಯುವ ಸಮುದಾಯವು ಮಾದಕವ್ಯಸನಗಳಿಗೆ ಬಲಿಯಾಗದೆ ಸಾಮಾಜಿಕ ಸಂಘಟನೆಯೊಂದಿಗೆ ರಾಷ್ಟ್ರೀಯ ಚಿಂತನೆಯಲ್ಲಿ ತೊಡಗಲು ಇಂತಹ ಸಾರ್ವಜನಿಕ ಉತ್ಸವಗಳು ಪ್ರೇರಣೆ ನೀಡಲೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉತ್ಸವ ಸಮಿತಿಯ ಅಧ್ಯಕ್ಷ ಶ್ರೀಕರ ಕಿಣಿ, ಪದಾಧಿಕಾರಿಗಳಾದ ವಿಜಯ ಪಂಡಿತ್, ಸುದೇಶ್ ಮರೋಳಿ, ಭರತ್ ಕುಮಾರ್, ಲಕ್ಷ್ಮಣ್ ಟೈಲರ್, ಎಂ.ವಾಸುದೇವ ರಾವ್, ಯಶವಂತ ಅಮೀನ್, ವಿಶ್ವನಾಥ ನಾಯಕ್ , ಶಾರದಾ ಮಹಿಳಾ ಸಮಿತಿಯ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪಶುಪತಿ ಉಳ್ಳಾಲ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.

Comments are closed.