ಕರಾವಳಿ

ಮಂಗಳೂರು ಕಾರ್‌ಸ್ಟ್ರೀಟ್ ; 99ನೇ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಆರಂಭ

Pinterest LinkedIn Tumblr

ಮಂಗಳೂರು : ಜಿಲ್ಲೆಯ ಹೆಸರಾಂತ ಉತ್ಸವಗಳಲ್ಲಿ ಅತೀ ಪ್ರಸಿದ್ಧವಾದ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವದ 99ನೇ ವರ್ಷದ ಕಾರ್ಯಕ್ರಮಗಳು ಎಂದಿನಂತೆ ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ಆಚಾರ್ಯ ಮಠದ ವಸಂತ ಮಂಟಪದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಆರಂಭಗೊಂಡಿದೆ.

ಶ್ರೀ ಶಾರದಾ ಮಹೋತ್ಸವ ಸಮಿತಿ (ರಿ.), ರಥಬೀದಿ, ಮಂಗಳೂರು. ವತಿಯಿಂದ ಪ್ಲವ ನಾಮ ಸಂವತ್ಸರದ ಆಸ್ವೀಜ ಶುದ್ಧ ಪಂಚಮಿ ತಾ. 10.10.2021 ಆದಿತ್ಯವಾರದಿಂದ ಏಕಾದಶಿ ತಾ. 16.10.2021 ಶನಿವಾರದವರೆಗೆ ಕಾರ್ಯಕ್ರಮಗಳು ನಡೆಯಲಿದೆ.

ತಾ. 10-10-2021 ಆದಿತ್ಯವಾರ ರಾತ್ರಿ ಗಂಟೆ 8.00ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಶ್ರೀ ವೆಂಕಟರಮಣ ದೇವಳದ ರಾಜಾಂಗಣದಿಂದ ಉತ್ಪವಸ್ಥಾನಕ್ಕೆ ಪ್ರತಿಷ್ಠೆಗೆ ತರಲಾಯಿತು.

ತಾ. 11-10-2021 ಸೋಮವಾರ ಮಧ್ಯಾಹ್ನ ಗಂಟೆ 1.00ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಿತು.

ತಾ. 15-10-2021 ಶುಕ್ರವಾರದವರೆಗೆ ದೀಪಾಲಂಕಾರ ಹಾಗೂ ರಾತ್ರಿ ಪೂಜೆ ನಡೆಯಲಿದೆ.

ಈ ವೇಳೆ ಬೆಳಿಗ್ಗೆ ಗಂಟೆ 10,00ರಿಂದ ರಾತ್ರಿ ಪೂಜೆಯವರಿಗೆ ಶ್ರೀ ಶಾರದಾ ಮಾತೆಯ ದರ್ಶನವನ್ನು ಪಡೆಯಬಹುದು.

ತಾ. 15-10-2021ನೇ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ವಿಸರ್ಜನಾ ಪೂಜೆ ನಡೆಯಲಿದೆ.

ಬೆಳಿಗ್ಗೆ 10.00 ಗಂಟೆಯಿಂದ 12.00 ಗಂಟೆಯವರೆಗೆ ವಿದ್ಯಾರಂಭ ಸೇವೆ ಹಾಗೂ ಸಾಯಂಕಾಲ ಗಂಟೆ 6,00ರಿಂದ ವಿಶೇಷ ದೀಪಾಲಂಕಾರ ಸೇವೆ ಜರಗಲಿರುವುದು,

ತಾ. 16-10-2021ನೇ ಶನಿವಾರ ಸಂಜೆ ಗಂಟೆ 5.00ಕ್ಕೆ ಪೂರ್ಣಾಲಂಕಾರಗೊಂಡ ಶ್ರೀ ಶಾರದಾ ಮಾತೆಯ ದರ್ಶನವನ್ನು ಪಡೆಯಬಹುದು.

ಬಳಿಕ ರಾತ್ರಿ ರಥಬೀದಿಯಲ್ಲಿರುವ ಶ್ರೀ ಮಹಾಮಾಯಾ ತೀರ್ಥದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ವಿಸರ್ಜನೆ ಕಾರ್ಯಕ್ರಮ ನೆರವೇರಲಿದೆ.

ಚಿತ್ರ : ಮಂಜು ನಿರೇಶ್ವಾಲ್ಯ

Comments are closed.