ಗಲ್ಫ್

ಕರ್ನಾಟಕ ಸಂಘ ಶಾರ್ಜಾ ವತಿಯಿಂದ ಬೃಹತ್ ರಕ್ತದಾನ ಶಿಬಿರ

Pinterest LinkedIn Tumblr

ದುಬೈ: ಕಳೆದ ಸುಮಾರು ಎರಡು ದಶಕಗಳಿಂದ ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕೊಲ್ಲಿ ನಾಡಿನ ಅನಿವಾಸಿ ಕನ್ನಡಿಗ ಕನ್ನಡೇತರ ಬಾಂಧವರಿಗೆ ಪರಿಚಯಿಸುವ, ಆ ಮೂಲಕ ಹೊರನಾಡುಗಳಲ್ಲಿ ಕನ್ನಡದ ಕಂಪು ಇಂಪನ್ನು ಉಳಿಸಿ ಬೆಳೆಸುವ ಮತ್ತು ಇತರ ತರಹೇವಾರು ಮಾನವೀಯ ಸೇವೆಯನ್ನು ಮಾಡುತ್ತಿರುವ, ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಯುಎಇಯಲ್ಲಿ ಅತೀ ಜನಪ್ರಿಯವಾಗಿರುವ ಕರ್ನಾಟಕ ಸಂಘ ಶಾರ್ಜಾ ಇದರ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ದುಬೈಯ ಲತೀಫಾ ಹಾಸ್ಪಿಟಲ್ ನಲ್ಲಿ ಬ್ರಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು.

ಕನ್ನಡಿಗರು ಮಾತ್ರವಲ್ಲದೆ ಕನ್ನಡೇತರ, ಪಂಜಾಬ್, ಮಹಾರಾಷ್ಟ್ರ ಮೊದಲಾದ ರಾಜ್ಯಗಳ UAE ಸ್ಥಿತ ಅನಿವಾಸಿ ಭಾರತೀಯರೂ, ಎಲ್ಲಾ, ಜಾತಿ ಪಂಗಡ, ವರ್ಗದ ಭಾರತೀಯರು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಭಾರತದ ಅಖಂಡತೆಯ, ವಿವಿಧತೆಯಲ್ಲಿ ಏಕತೆಯ ಮತ್ತು ಏಕತೆಯ ಪ್ರದರ್ಶಿನಕ್ಕೆ ಸಾಕ್ಷಿಯಾದದ್ದು ಈ ರಕ್ತದಾನ ಶಿಬಿರದ ಹೆಗ್ಗಳಿಕೆಯಾಗಿತ್ತು. ಬೆಳಿಗ್ಗೆ ಸುಮಾರು 10 ಘಂಟೆಗೆ ಮಧ್ಯಾಹ್ನ 12 ಘಂಟೆಯ ವರೆಗೆ ನಿಗದಿಯಾಗಿದ್ದ ಕಾರ್ಯಕ್ರಮವು ರಕ್ತದಾನ ಮಾಡಲು ಆಸಕ್ತಿ ತೋರಿದವರ ಸಂಖ್ಯೆ ನಿರೀಕ್ಷೆಗೂ ಮೀರಿದುದರಿಂದಾಗಿ ಕಾರ್ಯಕ್ರದ ನಿಗದಿತ ಸಮಯದ ನಂತರವೂ ಅಂದರೆ ಸುಮಾರು ಮಧ್ಯಾಹ್ನ 2 ಘಂಟೆಯ ವರೆಗೆ ಮುಂದುವರಿಸ ಬೇಕಾಯಿತು. ಆದರೂ ಸುಮಾರು 20 – 25 ರಷ್ಟು ರಕ್ತದಾನಾಂಕ್ಷಿಗಳು ಅನಿವಾರ್ಯವಾಗಿ ರಕ್ತದಾನ ಮಾಡದೆ ಹಿಂತಿರುಗಿ ಹೋಗ ಬೇಕಾಯಿತು.

ಕರ್ನಾಟಕ ಸಂಘ ಶಾರ್ಜಾಇದರ ಅಧ್ಯಕ್ಷರಾದ ಶ್ರೀ ಎಂ ಈ ಮೂಳೂರು ರವರ ಮುಂದಾಳತ್ವದಲ್ಲಿ ಸಂಘದ ಪ್ರಧಾನ ಸಲಹೆಗಾರರೂ, KNRI ಅಧ್ಯಕ್ಷರೂ, ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ ಇದರ ಮಾಲಕರಾದ ಪ್ರವೀಣ್ ಶೆಟ್ಟಿ, ಆಕ್ಮೆ ಸಂಸ್ಥೆಯ‌ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಕನ್ನಡಿಗ ವರ್ಲ್ಡ್ ಡಾಟ್ ಕಾಮ್ ಮಾಲಕರಾದ ಹರೀಶ್ ಶೇರಿಗಾರ್, ಕೆ.ಎನ್.ಆರ್.ಐ ಉಪಾಧ್ಯಕ್ಷ ನಾವೆಲ್ ಅಲ್ಮೇಡಾ, ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ, ಸಲಹೆಗಾರರಾದ ಗಣೇಶ್ ರೈ, ಸುಗಂದ್ ರಾಜ್ ಬೇಕಲ್, ಆನಂದ ಬೈಲೂರು , ಸತೀಶ್ ಪೂಜಾರಿ, ಪ್ರಭಾಕರ್ ಅಂಬಲ್ತೆರೆ, ಶಾಂತಾರಾಮ ಆಚಾರ್, ಕೋಶಾಧಿಕಾರಿ ಅಬ್ರಾರ್ ಅಹ್ಮದ್ , ಉಪ ಕಾರ್ಯದರ್ಶಿ ಅಮರ್ ನಂತೂರ್, ಜೀವನ್ ಕುಕ್ಯಾನ್ ಮೊದಲ್ಗೊಂಡು ಸಂಸ್ಥೆಯ ಎಲ್ಲ ನಾಯಕರ ಮತ್ತು ವಿಶೇಷವಾಗಿ ರಕ್ತದಾನದ ಕ್ಷೇತ್ರದಲ್ಲಿ ಚಿರಪರಿಚಿತರಾದ ಸಮಾಜ ಸೇವಾ ಧುರೀಣ ಬಾಲ ಸಾಲಿಯಾನ್ ಎರ್ಮಾಳ್ ವಿಜ್ಞೇಶ್ ಹಾಗೂ ಇತರರ ಸಂಯೋಜಿತ ಪ್ರಯತ್ನದ ಫಲವಾಗಿ ಕಾರ್ಯಕ್ರಮವು ನಡೆಯಿತು.

ಅಪಾರ ಸಂಖ್ಯೆಯಲ್ಲಿ ಕನ್ನಡ ಪರ ಸೇವಾ ಸಂಸ್ತೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕ NRI ಫೋರಮ್, ಅಬುಧಾಬಿ ಕರ್ನಾಟಕ ಸಂಘ, ಬಿಲ್ಲವಾಸ್ ದುಬೈ, ಕನ್ನಡಿಗರು ದುಬೈ, ಕನ್ನಡ ಪಾಠಶಾಲೆ, ಅಂತರ್ರಾಷ್ಟ್ರೀಯ ಕನ್ನಡ ಫೆಡರೇಶನ್, ಬ್ಯಾರೀಸ್ ಕಲ್ಚರಲ್ ಫೋರಮ್, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್, KCF ., ಮಾರ್ಗದೀಪ ಸೇವಾ ಸಂಸ್ಥೆ, ಬಂಟ್ಸ್ ಅಸೋಸಿಯೇಷನ್, ಮೂಳೂರು ವೆಲ್ಫೇರ್ ಫೋರಮ್, ಅಲ್ ಕಮರ್ ಟ್ರಸ್ಟ್, ಮೊಗವೀರ್ಸ್ ದುಬೈ, ಅಲ್ ಇಸ್ಲಾಮೀಯ ಯೂಥ್ ಫೆಡರೇಶನ್ , ತವಕ್ಕಲ್ ಓವರ್ಸೀಸ್ ಮೊದಲಾದ ಸಂಸ್ಥೆಗಳ ಪ್ರತಿನಿಧಿಗಳು, ಸದಸ್ಯರು ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಯೂನಿಕ್ಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಇಹಸಾನ್ ಶೇಕ್, ಸರ್ವೋತಮ ಶೆಟ್ಟಿ, ಅಲ್ ಹಾಜ್ ತಾಹಾ ಬಾಫಖಿ ತಂಗಳ್ , ವಾಸು ಶೆಟ್ಟಿ , ಡಾಕ್ಟರ್ ಕಾಪು ಮೊಹಮ್ಮದ್ , ಹಿದಾಯತ್ ಅಡ್ಡೂರು, ಅಬ್ದುಲ್ ಲತೀಫ್ ಮುಲ್ಕಿ, ಹರೀಶ್ ಕೊಡಿ ಮೊದಲಾದ ಗಣ್ಯರು ಭಾಗವಹಿಸಿದರು.

ರಕ್ತದಾನಾಕಾಂಕ್ಷಿಗಳು ಸುಮಾರು 200 ಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದರು ಹಾಗೂ ಗಣನೀಯ ಸಂಖ್ಯೆಯಲ್ಲಿ ಎಲಿಜಿಬಿಲಿಟಿ ಆಗದೆ ದಾನ ಮಾಡಲಾಗದವರು ಮತ್ತು ಮದ್ಯಾಹ್ನ ಟೋಕನ್ ಸಿಕ್ಕಿಯೂ ಎರಡು ಘಂಟೆಯ ನಂತರವೂ ಕಾಯ ಬೇಕಾಗಿ ಬಂದುದರಿಂದ ಡ್ಯೂಟಿ ಗೆ ಹಾಜರಾಗಬೇಕಾಗಿದ್ದ ಹಲವಾರು ಮಂದಿ ರಕ್ತದಾನ ಮಾಡದೆ ಹಿಂದಿರುಗಿದರು. ಸುಮಾರು 100 ರಷ್ಟು ಜನರು ರಕ್ತದಾನ ಮಾಡಿದರು.

ರಕ್ತದಾನಕ್ಕೆ ಮೊದಲು ನಡೆದ ಕ್ಷಿಪ್ರ ಸಭಾ ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಅಧ್ಯಕ್ಷ ಎಂ ಈ ಮೂಳೂರು ರವರು ಕರ್ನಾಟಕ ಸಂಘ ಶಾರ್ಜಾದ ಸಂಕ್ಷಿಪ್ತ ಪರಿಚಯ ನೀಡುತ್ತಾ ನಾವೆಲ್ಲ ಕನ್ನಡಿಗರು ಎಂಬ ನೆಲೆಯಲ್ಲಿ ಸೇವೆ ಸಲ್ಲಿಸುತ್ತಾ ಸಾಮಾಜಿಕ ಹಾಗು ಧಾರ್ಮಿಕ ಸೌಹಾರ್ದತೆ ಮತ್ತು ಸಹೋದರತೆಯ ಮಹತ್ವವನ್ನು ಎತ್ತಿ ಹಿಡಿಯುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿವೆ ಎಂದರು.

ಸಂಘದ ಮುಖ್ಯ ಸಲಹೆಗಾರ ಪ್ರವೀಣ್ ಶೆಟ್ಟಿ ಅವರು ಸಂಸ್ಥೆಯ ಧ್ಯೇಯೋದೇಶಗಳ ಬಗ್ಗೆ ಬೆಳಕು ಚೆಲ್ಲುತ್ತಾ ಸಂಸ್ಥೆಗೆ ಶ್ರೇಯಸ್ಸನ್ನು ಬಯಸಿದರು ಮತ್ತು ಬರುವ ತಿಂಗಳು ಕೆ.ಎನ್.ಆರ್.ಐ ವತಿಯಿಂದ ಅದ್ದೂರಿಯ ಕರ್ನಾಟಕ ರಾಜ್ಯೋತ್ಸವದ ಬಗ್ಗೆ ವಿವರಣೆ ನೀಡಿ ಕನ್ನಡಾಭಿಮಾನಿಗಳ ಸಹಕಾರ ಕೋರಿದರು.
ಸಂಘದ ಇನ್ನೋರ್ವ ಮುಖ್ಯ ಸಲಹೆಗಾರ ಹರೀಶ್ ಶೇರಿಗಾರ್ ಅವರು ಸಂದರ್ಭಯೋಚಿತವಾಗಿ ಮಾತನಾಡಿ, ಸಂಸ್ಥೆಯ ಕಾರ್ಯಕ್ಕೆ ಮೆಚ್ಚಿಗೆ ಸೂಚಿಸುತ್ತಾ ಶುಭ ಹಾರೈಸಿದರು

ಬಿ.ಸಿ.ಎಫ್ ಕಾರ್ಯದರ್ಶಿ ಹಾಗೂ ಲಂಡನ್ ಸಿಟಿ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಡಾ. ಕಾಪು ಮೊಹಮದ್ ರವರು ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು. ಸಲಹೆಗಾರರಾದ ಸುಗಂದ್ ರಾಜ್ ಬೇಕಲ್ ರವರು ಧನ್ಯವಾದವಿತ್ತರು.
ಸೇರಿದ ಎಲ್ಲರಿಗೆ ಜ್ಯೂಸು, ಬಿಸ್ಕಿಟು , ಕೇಕು , ಹಣ್ಣು ಹಂಪಲು ಮೊದಲಾದುವುಗಳನ್ನು ಯುನಿಕ್ ಸಂಸ್ಥೆಯ ತಹಸೀನ್ ಶೇಕ್ ಮತ್ತು ಬ್ರಿಟಾನಿಯ ಸಂಸ್ಥೆಯ ವಾಸು ಶೆಟ್ಟಿ ಯವರ ಪ್ರಾಯೋಜಕತೆಯಲ್ಲಿ ಪೂರೈಸಲಾಯಿತು. ಸರ್ಟಿಫಿಕೇಟ್ ಮತ್ತು ರೋಲ್ ಅಪ್ ಮೊದಲಾದನ್ನು ಉಚಿತವಾಗಿ ಒದಗಿಸುವುದರ ಮೂಲಕ ಡಿಜಿಟಲ್ ವರ್ಲ್ಡ್ ಗ್ರೂಪ್ ಇದರ ಗೋಡ್ವಿನ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಎಲ್ಲ ರಕ್ತದಾನಿಗಳಿಗೆ ರಕ್ತದಾನದ ಸನದನ್ನು ಸಂಘದ ಪರವಾಗಿ ನೀಡಲಾಯಿತು.

ಸಹಕರಿಸಿದ ದುಬೈ ಹೆಲ್ತ್ ಅಥಾರಿಟಿ…
ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರುವಂತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲ ರಕ್ತ ದಾನಿಗಳು, ಕರ್ನಾಟಕ ಸಂಘ ಶಾರ್ಜಾದ ಎಲ್ಲ ಪದಾಧಿಕಾರಿಗಳು, ನಾಯಕರು, ಸದಸ್ಯರು, ಪ್ರಾಯೋಜಕರು, ಎಲ್ಲ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಹಿತ ಚಿಂತಕರಿಗೆ ಕರ್ನಾಟಕ ಸಂಘ ಶಾರ್ಜಾ ಅಭಾರಿಯಾಗಿದೆ ಎಂದು‌ ಪ್ರಕಟಣೆ ತಿಳಿಸಿದೆ.

Comments are closed.