ಕರಾವಳಿ

ಅಂಪಾರಿನಲ್ಲಿ ಸುಂಟರಗಾಳಿಯಿಂದ ನಷ್ಟಕ್ಕೊಳಗಾದ ಕೃಷಿಕರಿಗೆ ಧೈರ್ಯ ತುಂಬಿದ ಮಾಜಿ ಶಾಸಕ ಗೋಪಾಲ‌ ಪೂಜಾರಿ

Pinterest LinkedIn Tumblr

ಕುಂದಾಪುರ: ಶಹೀನ್ ಚಂಡಮಾರುತದ ಪರಿಣಾಮದಿಂದ ಮಂಗಳವಾರ ಸಂಜೆ ವೇಳೆಗೆ ಬೀಸಿದ ಭಾರಿ ಸುಂಟರಗಾಳಿಯಿಂದಾಗಿ ಕುಂದಾಪುರ ತಾಲೂಕಿನ ಅಂಪಾರು ಮೂಡುಬಗೆ ಪ್ರದೇಶದಲ್ಲಿ ತೋಟದಲ್ಲಿನ ಸಾವಿರಾರು ಅಡಿಕೆ ಮರಗಳು, ನೂರು ತೆಂಗಿನ ಮರಗಳು ಸಂಪೂರ್ಣ ಧರಾಶಾಹಿಯಾಗಿದ್ದು ಹಲವು ಮನೆಗಳು ಹಾನಿಯಾಗಿದ್ದು ಹಲವರ ಬದುಕು‌ ಮೂರಾಬಟ್ಟೆಯಾಗಿದೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಗೋಪಾಲ ಪೂಜಾರಿ ಭೇಟಿ, ನೀಡಿ ಪರಿಶೀಲಿಸಿ ನೊಂದವರಿಗೆ ಧೈರ್ಯ ತುಂಬಿದರು. ಈ ಸಂದರ್ಭ ತುರ್ತು ಅಗತ್ಯವಿರುವ ಮನೆಗಳಿಗೆ ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ 1200 ಹಂಚುಗಳನ್ನು ವಿತರಿಸಲಾಯಿತು.

ಈ‌ ಸಂದರ್ಭ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಅಂಪಾರು ಗ್ರಾಮ ಪಂಚಾಯತ್ ಸದಸ್ಯ ಕಿರಣ್ ಹೆಗ್ಡೆ ಅಂಪಾರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.

ಅಂಪಾರಿನ ಮೂಡುಬಗೆ ಗ್ರಾಮದಲ್ಲಿ ಮಂಗಳವಾರ ಸಂಜೆ 3 ಗಂಟೆ ಬಳಿಕ ಬೀಸಿದ ಭಾರಿ ಸುಂಟರಗಾಳಿಗೆ 50 ಕ್ಕೂ ಅಧಿಕ ಕುಟುಂಬ ಅಕ್ಷರಶಃ ನಲುಗಿ ಹೋಗಿತ್ತು. ಒಟ್ಟು 6000ಕ್ಕೂ ಅಧಿಕ ಅಡಿಕೆ ಮರ, ನೂರಾರು ತೆಂಗಿನ ಮರಗಳು ಧರೆಗುರುಳಿದೆ. 50ಕ್ಕೂ ಅಧಿಕ ಮನೆಗಳು ಸಂಪೂರ್ಣ‌ ಹಾನಿಯಾಗಿದ್ದು ಜನರು ಸಮಸ್ಯೆಗೀಡಾಗಿದ್ದರು. ಅಡಿಕೆಯನ್ನು ನಂಬಿಕೊಂಡಿರುವ ಈ ಭಾಗದ ಜನರ ಬದುಕಲ್ಲಿ ಬೀಸಿದ ಸುಂಟರಗಾಳಿ ಕೋಲಾಹಲ ಎಬ್ಬಿಸಿತ್ತು. ಹಲವು ವಿದ್ಯುತ್ ಕಂಬಗಳು‌ ಧರೆಗುರುಳಿದ್ದವು.

Comments are closed.