ಅಂತರಾಷ್ಟ್ರೀಯ

ಬರೋಬ್ಬರಿ 6 ಗಂಟೆ ಬಳಿಕ ವಿಶ್ವಾದ್ಯಂತ ವ್ಯತ್ಯಯವಾಗಿದ್ದ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇವೆ ಪುನರಾರಂಭ

Pinterest LinkedIn Tumblr

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್ ಹಾಗೂ ಇನ್‍ಸ್ಟಾಗ್ರಾಂ ಸೋಮವಾರ ಸಂಜೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದ ಕಾರಣ ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಗ್ರಾಹಕರು ಪರದಾಡುವಂತಾಗಿದ್ದು ಮಂಗಳವಾರ ಮುಂಜಾನೆ ವೇಳೆ ಸಮಸ್ಯೆ ಬಗೆಹರಿದಿದ್ದು ಮತ್ತೆ ಸೇವೆ ಆರಂಭವಾಗಿದೆ.

ತಾಂತ್ರಿಕ ದೋಷದಿಂದಾಗಿ ಈ ಮೂರು ಆ್ಯಪ್ ಗಳು ಕಾರ್ಯನಿರ್ವಹಿಸಿರಲಿಲ್ಲ. ವಾಟ್ಸಾಪ್, ಫೇಸ್ ಬುಕ್ ಹಾಗೂ ಇನ್‍ಸ್ಟಾಗ್ರಾಂ ಆ್ಯಪ್‍ಗಳು ಕೈ ಕೊಟ್ಟಿದ್ದರಿಂದ ಬಳಕೆದಾರರು ಹಲವು ಗಂಟೆ‌ಕಾಲ ಪರದಾಡುವಂತಾಗಿತ್ತು.

ಸಾಮಾಜಿಕ ಜಾಲತಾಣದ ಪ್ರಮುಖ ಮಾಧ್ಯಮಗಳಾದ ಫೇಸ್‌ಬುಕ್ ಹಾಗೂ ಇನ್‍ಸ್ಟಾಗ್ರಾಂ ಕೆಲ ದಿನಗಳ ಕಾಲ ತಾಂತ್ರಿಕ ತೊಂದರೆಯಿಂದಾಗಿ ಬಳಕೆದಾರರಿಗೆ ಸೇವೆ ಸ್ಥಗಿತಗೊಂಡ ಬಗ್ಗೆ ಫೇಸ್‍ಬುಕ್ ಕ್ಷಮೆ ಕೂಡ ಕೇಳಿತ್ತು.

Comments are closed.