ಕರಾವಳಿ

ಬ್ರಹ್ಮಾವರದಲ್ಲಿ ವಿಶಾಲ ಗಾಣಿಗ ಮರ್ಡರ್ ಕೇಸ್ ತನಿಖೆ: ಉಡುಪಿ‌ ಜಿಲ್ಲಾ ಪೊಲೀಸರ ತಂಡಕ್ಕೆ ನಗದು ಪುರಸ್ಕಾರ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು.

ಜುಲೈ 12 ರಂದು ವಿಶಾಲಗಾಣಿಗ ಅವರನ್ನು ಉಪ್ಪಿನಕೋಟೆಯ ಮಿಲನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ ಅವರ ವಾಸದ ಫ್ಲ್ಯಾಟ್‌ನಲ್ಲಿಯೇ ಸುಫಾರಿ ಕಿಲ್ಲರುಗಳು ಹತ್ಯೆ ಮಾಡಿದ್ದರು. ಆರೋಪಿ ತುಂಬಾ ಚಾಕಚತ್ಯೆಯನ್ನು ಉಪಯೋಗಿಸಿ ಕೊಲೆ ಮಾಡಿದ್ದರಿಂದ ಪ್ರಕರಣವನ್ನು ಭೇದಿಸುವುದು ಕ್ಲಿಷ್ಟಕರವಾಗಿ, ಸಾರ್ವಜನಿಕರ ವಲಯದಲ್ಲಿ ಸಂಚಲನ ಉಂಟು ಮಾಡಿತ್ತು.

ಉಡುಪಿ ಜಿಲ್ಲಾ ಎಸ್.ಪಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡದ ಸದಸ್ಯರು ಉತ್ತರ ಪ್ರದೇಶದ ಗೋರಕಪುರದಲ್ಲಿ ಸ್ವಾಮಿನಾಥನ್ ನಿಶಾದ್ ನನ್ನು ಬಂಧಿಸಿದ ನಂತರ, ವಿಶಾಲ ಗಾಣಿಗರವರ ಪತಿ ರಾಮಕೃಷ್ಣ ಗಾಣಿಗನೇ ಈ ಕೊಲೆ ಮಾಡಲು ಸುಫಾರಿ ನೀಡಿದ್ದರೆಂದು ತನಿಖೆ ನಡೆಸಿ ಆತನನ್ನು ಕೂಡ ಬಂಧಿಸಿದ್ದರು.

ಈ ಪ್ರಕರಣವನ್ನು ಭೇದಿಸಿದ ಅಧಿಕಾರಿ ಸಿಬ್ಬಂದಿಗಳ ತಂಡಕ್ಕೆ ಕರ್ನಾಟಕ ರಾಜ್ಯ ಡಿ.ಜಿ & ಐ.ಜಿ.ಪಿ ಪ್ರವೀಣ್ ಸೂದ್ ಅವರು 50 ಸಾವಿರ ನಗದು ಪುರಸ್ಕಾರ ಘೋಷಿಸಿದ್ದರು. ಇಂದು ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿದ ಪಶ್ಚಿಮ ವಲಯದ ಐ.ಜಿ.ಪಿ ದೇವಜ್ಯೋತಿ ರೇ ಪೊಲೀಸ್ ತಂಡದ ಸದಸ್ಯರಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಿದ್ದಾರೆ.

ಈ ಸಂದರ್ಭ ಉಡುಪಿ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಸುಧಾಕರ ನಾಯಕ್, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಮಣಿಪಾಲ ಇನ್ಸ್‌ಪೆಕ್ಟರ್ ಮಂಜುನಾಥ ಗೌಡ, ಮಲ್ಪೆ ಸಿಪಿಐ ಶರಣ್ ಗೌಡ, ಕಾರ್ಕಳ ಸಿಪಿಐ ಸಂಪತ್ ಕುಮಾರ್, ಪಿ.ಎಸ್.ಐ.ಗಳಾದ ರಾಜಶೇಖರ ವಂದಲಿ, ಗುರುನಾಥ ಹಾದಿಮನಿ, ಮಧು, ಶ್ರೀಧರ ನಾಯಕ್, ರಾಘವೇಂದ್ರ, ಸಿ.ಡಿ.ಆರ್ ವಿಭಾಗದ ಸಿಬ್ಬಂದಿಗಳಾದ ಶಿವಾನಂದ, ದಿನೇಶ್, ನಿತಿನ್ ಅವರನ್ನು ಅಭಿನಂದಿಸಿದರು.

Comments are closed.