ಕರಾವಳಿ

ಸಕ್ರಮದೊಂದಿಗೆ ಮತ್ತೊಂದು ಅಕ್ರಮ ಕೋವಿ ಹೊಂದಿದ್ದ ಆರೋಪಿಯನ್ನು ಬಂಧಿಸಿದ ಬ್ರಹ್ಮಾವರ ಪೊಲೀಸರು

Pinterest LinkedIn Tumblr

ಉಡುಪಿ: ಲೈಸೆನ್ಸ್ ಪಡೆದ ಕೋವಿಯ ಜೊತೆಗೆ ಅನಧೀಕೃತವಾಗಿ ಮತ್ತೊಂದು ಕೋವಿ ಹೊಂದಿದ್ದ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಚೇರ್ಕಾಡಿ ಗ್ರಾಮದ ಬಾಯರ್‌‌ಬೆಟ್ಟು, ಹಲಗೆ ಗುಂಡಿ ಎಂಬಲ್ಲಿನ ಜಯನಾಯ್ಕ ಆರೋಪಿ.

ಘಟನೆ ವಿವರ…
ಸೆ.21 ರಂದು ಬ್ರಹ್ಮಾವರ ಠಾಣಾ ವ್ಯಾಪ್ತಿಯ ಚೇರ್ಕಾಡಿ ಗ್ರಾಮದ ಬೀಟ್‌ ಸಿಬ್ಬಂದಿ ಕೋವಿ ಪರಿಶೀಲನೆಯ ವೇಳೆ ಜಯನಾಯ್ಕ ಎನ್ನುವವರು ಎಸ್.ಬಿ.ಎಂ.ಎಲ್. ಲೈಸನ್ಸ್‌‌ ಹೊಂದಿದ ಆಯುಧದೊಂದಿಗೆ ಅನಧೀಕೃತವಾಗಿ ಇನ್ನೊಂದು ಆಯುಧವನ್ನು ಹೊಂದಿದ ಬಗ್ಗೆ ಮಹತ್ವದ ಮಾಹಿತಿ ಪಡೆದ ಪೊಲೀಸರು ಬ್ರಹ್ಮಾವರ ಪೊಲೀಸ್‌‌ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ಮಾಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್‌ ಠಾಣಾ ಪಿ.ಎಸ್‌.‌ಐ ಗುರುನಾಥ ಹಾದಿಮನಿ ಹಾಗೂ ಸಿಬ್ಬಂದಿಗಳು ಆರೋಪಿ‌ಮನೆಯನ್ನು ಶೋಧಿಸಿದಾಗ ಲೈಸನ್ಸ್‌ ಹೊಂದಿದ SBML ಕೋವಿಯೊಂದಿಗೆ ಅನಧಿಕೃತವಾಗಿ ಇನ್ನೊಂದು ಕೋವಿ ಹೊಂದಿರುವುದು ತಿಳಿದಿದೆ. ಆರೋಪಿಯನ್ನು ವಶಕ್ಕೆ ಪಡೆದು ಆತನ ವಶದಿಂದ ಲೈಸನ್ಸ್‌ ಹೊಂದಿದ SBML ಕೋವಿ ಹಾಗೂ ಅನಧಿಕೃತವಾಗಿ ಇಟ್ಟುಕೊಂಡಿದ್ದ ಇನ್ನೊಂದು ಕೋವಿ, 22 ಸೀಸದ ಬಾಲ್ಸ್‌ , 5 ಕೇಪು, ಚೂಪಾಗಿರುವ 7 ಸೀಸದ ಭಾಗಗಳು, ಒಂದು ಪ್ಲಾಸ್ಟಿಕ್‌ ಬಾಟಲಿಯಲ್ಲಿರುವ ಮಸಿ, ಚೆರಿಯನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಅಂದಾಜು ಮೌಲ್ಯ 30‌ಸಾವಿರ ಎನ್ನಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆ ತಂಡಕ್ಕೆ ಎಸ್ಪಿ‌‌ ಶ್ಲಾಘನೆ..
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌‌ ನಡೆದ ಈ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಜಿಲ್ಲಾ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರ ಕುಮಾರಚಂದ್ರ ಮಾರ್ಗದರ್ಶನದಂತೆ ಉಡುಪಿ ಡಿವೈಎಸ್ಪಿ ಸುಧಾಕರ‌ ನಾಯ್ಕ, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ ನಿರ್ದೇಶನದಂತೆ ಸೆ.21ರಂದು ಬ್ರಹ್ಮಾವರ ಪೊಲೀಸ್‌‌ ಉಪನಿರೀಕ್ಷಕ ಗುರುನಾಥ ಬಿ ಹಾದಿಮನಿ ಅವರ ವಿಶೇಷ ತಂಡ ಪತ್ತೆ ಕಾರ್ಯಾಚರಣೆ ನಡೆಸಿದ್ದು ಜಿಲ್ಲಾ ಪೊಲೀಸ್ ಇಲಾಖೆಯವರು ಇದನ್ನು‌ ಶ್ಲಾಘಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಠಾಣೆಯ ಪೊಲೀಸ್ ಉಪನಿರೀಕ್ಷಕ‌ ಗುರುನಾಥ ಬಿ ಹಾದಿಮನಿ ಅವರೊಂದಿಗೆ ಮಹಿಳಾ‌ ಪಿಎಸ್‌ಐ ಶ್ರೀಮತಿ ಸುನೀತಾ ಕೆ.ಆರ್‌, ಬ್ರಹ್ಮಾವರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಪ್ರವೀಣ್‌ ಶೆಟ್ಟಿಗಾರ್‌, ವೆಂಕಟರಮಣ ದೇವಾಡಿಗ, ಉದಯ ಅಮೀನ್‌‌, ಸಿಬ್ಬಂದಿಗಳಾದ ದಿಲೀಪ್‌‌, ಮಹಿಳಾ‌ ಹೆಡ್ ಕಾನ್ಸ್‌ಟೇಬಲ್ ಸಬಿತ, ಶ್ರೀಮತಿ ಪುಷ್ಪಲತಾ, ಚಾಲಕ ಅಣ್ಣಪ್ಪ ಮತ್ತು ಸಂತೋಷ ಕುಮಾರ್‌‌ ಇದ್ದರು.

Comments are closed.