
ಮಂಗಳೂರು: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ಮೂರುವರೆದಶಕಗಳಿಂದ (೩೭ವರ್ಷ) ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರೀಯ ಮಕ್ಕಳ ಉತ್ಸವ-ಶ್ರೀ ಕೃಷ್ಣ ವೇಷ ಸ್ಪರ್ಧೆ” ಯನ್ನು ಈ ಬಾರಿ ‘ಕೊರೊನಾ’ ಹಾವಳಿಯ ಪರಿಣಾಮ, ಆಗಸ್ಟ್ ೩೦, ಸೋಮವಾರದಂದು Online ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸ್ಪರ್ಧಾಳುಗಳು ವಿಡಿಯೋ ಕಳುಹಿಸುವ ಮೊದಲೇ https://kalkurakrishnavesha.onlineರಲ್ಲಿ ಪ್ರವೇಶ ನೋಂದಾಯಿಸಬೇಕು. (ನೋಂದಾವಣಿ ಕಡ್ಡಾಯ). ಸ್ಪರ್ಧಾಳು ಮಕ್ಕಳ 2 ನಿಮಿಷಗಳ ಅವಧಿಯ ((MP4 format) ವಿಡಿಯೋ ಚಿತ್ರೀಕರಣಗೊಳಿಸಿ ದಿನಾಂಕ 28.08.2021 ಶನಿವಾರದ ಒಳಗಾಗಿ ಇಮೇಲ್ ಮೂಲಕ ಕಳುಹಿಸುವಂತೆ ಕೋರಲಾಗಿದೆ.

ಒಟ್ಟು 36 ವಿಭಾಗಳಲ್ಲಿ ವಿವಿಧ ವಯೋಮಾನಗಳ ಮಕ್ಕಳ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಯಾಯ ವಿಭಾಗಕ್ಕೆ ಪ್ರತ್ಯೇಕ ಪ್ರತ್ಯೇಕ ಇಮೇಲ್ ಐಡಿಗಳನ್ನು ನೀಡಲಾಗಿದ್ದು ತಮ್ಮದೇ ವಿಭಾಗದ ಇಮೇಲ್ ಗಳಿಗೆ ಮಾತ್ರ ವಿಡಿಯೋಗಳನ್ನು ಕಳುಹಿಸಿಕೊಡಬೇಕಾಗಿ ವಿನಂತಿಸಲಾಗಿದೆ. ಸ್ಪರ್ಧೆಯ ಸಂಪೂರ್ಣ ವಿವರಗಳಿಗಾಗಿ ಲಿಂಕನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ವಿವಿಧ ಸ್ಪರ್ಧಾ ವಿಭಾಗಗಳು ಹಾಗೂ ಇಮೇಲ್ (email Id) ಗಳ ವಿವರ
ತೊಟ್ಟಿಲ ಕೃಷ್ಣ : ಕೌಟುಂಬಿಕ ಸನ್ನಿವೇಶದೊಂದಿಗೆ ತೊಟ್ಟಿಲಲ್ಲಿ ಕೃಷ್ಣ (ವಯೋಮಿತಿಯ ನಿರ್ಬಂಧವಿರುವುದಿಲ) Email : kalkurathottilukrishna2021@gmail.com ಸಂಪರ್ಕ: ಉಮೇಶ್ ಕೆ. ಆರ್.9844173362 – ವಿದ್ವತ್ ಶೆಟ್ಟಿ 6360397511
ವೃಕ್ಷ ಕೃಷ್ಣ : ಕೃಷ್ಣ ವೇಷಧಾರಿಯಾಗಿ ಗಿಡ ನೆಡುವ ಸನ್ನಿವೇಶ (ವಯೋಮಿತಿಯ ನಿರ್ಬಂಧವಿಲ್ಲ) Email : kalkuravrikshakrishna2021@gmail.com ಸಂಪರ್ಕ: ಸುಜಾತ ಅಶೋಕ್ 9341150655
ಕಂದ ಕೃಷ್ಣ : 1 ವರ್ಷದ ಕೆಳಗಿನ ಪುಟಾಣಿ ಕಂದಮ್ಮಗಳಿಗಾಗಿ Email : kalkurakandakrishna2021@gmail.com ಸಂಪರ್ಕ: ಮಂಜುಳಾ ಶೆಟ್ಟಿ 9591469555
ಮುದ್ದು ಕೃಷ್ಣ : 1 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 2 ವರ್ಷಕ್ಕಿಂತ ಕೆಳಗಿನ ಕಂದಮ್ಮಗಳಿಗಾಗಿ Email : kalkuramuddukrishna2021@gmail.com ಸಂಪರ್ಕ: ಪೂರ್ಣಿಮಾ ಶಾಸ್ತ್ರಿ 9880881471
ತುಂಟ ಕೃಷ್ಣ : 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 3 ವರ್ಷಕ್ಕಿಂತ ಕೆಳಗಿನ ಪುಟಾಣಿಗಳಿಗಾಗಿ Email : kalkuratuntakrishna2021@gmail.com ಸಂಪರ್ಕ: ಸುಮಾ ಮಾನ್ವಿ 9482969468
ಬಾಲಕೃಷ್ಣ : ಬಾಲವಾಡಿ, ಅಂಗನವಾಡಿ, ಎಲ್.ಕೆ.ಜಿ ಪುಟಾಣಿಗಳಿಗಾಗಿ Email : kalkurabalakrishna2021@gmail.com ಸಂಪರ್ಕ: ಡಾ. ಮನಸ್ವಿತಾ ಜೈನ್ 7760675582 – ವೀಣಾ ಭಟ್ 9449331115
ಕಿಶೋರ ಕೃಷ್ಣ : ಯು.ಕೆ.ಜಿ. ಮತ್ತು 1ನೇ ತರಗತಿ ಪುಟಾಣಿಗಳಿಗಾಗಿ Email kalkurakishorakrishna2021@gmail.com ಸಂಪರ್ಕ: ಫೂರ್ಣಿಮಾರಾವ್ ಪೇಜಾವರ9900788229/ 9448932080
ಶ್ರೀ ಕೃಷ್ಣ : 2, 3, 4ನೇ ತರಗತಿಯ ವಿದ್ಯಾರ್ಥಿಗಳಿಗಾಗಿ Email : kalkurasrikrishna2021@gmail.com
ಸಂಪರ್ಕ: ಸಚಿತಾ ನಂದಗೋಪಾಲ 9844277475
ಗೀತಾ ಕೃಷ್ಣ : ವೇಷಭೂಷಣದೊಂದಿಗೆಗೀತೋಪದೇಶದಚಿತ್ರಣಗೀತೆಯಾವುದಾದರೂ ಶ್ಲೋಕದ ಪಠನದೊಂದಿಗೆ೭ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ Email : kalkurageethakrishna2021@gmail.com ಸಂಪರ್ಕ: ಗೀತಾ ಆಚಾರ್ 9448177311
ಶಂಖನಾದ : (ಸಾಂಪ್ರದಾಯಿಕಉಡುಗೆಯೊಂದಿಗೆ) :- 7ನೇ ತರಗತಿವರೆಗಿನ ಮಕ್ಕಳಿಗಾಗಿ Email : kalkurashankhanadha2021@gmail.com ಸಂಪರ್ಕ: ಅಶ್ವತ್ಥಾಮರಾವ್ 8217202642
ಶಂಖಉದ್ಘೋಷ : (ಸಾಂಪ್ರದಾಯಿಕಉಡುಗೆಯೊಂದಿಗೆ) :-7ನೇ ತರಗತಿ ಮೇಲ್ಪಟ್ಟುಹಾಗೂ ಮುಕ್ತ ವಿಭಾಗ Email : kalkurashankhanadha2021@gmail.com ಸಂಪರ್ಕ: ಅಶ್ವತ್ಥಾಮರಾವ್ 8217202642
ರಾಧಾಕೃಷ್ಣ : 7ನೇ ತರಗತಿಯ ವರೆಗಿನ ಮಕ್ಕಳು(ಜೋಡಿ) Email : kalkuraradhakrishna2021@gmail.com
ಸಂಪರ್ಕ: ವಿನಯಾನಂದ 9980569185
ರಾಧಾ ಮಾಧವ : 7ನೇ ತರಗತಿ ಮೇಲ್ಪಟ್ಟಮಕ್ಕಳು.(ಜೋಡಿ) Email : kalkuraradhamadhava2021@gmail.comಸಂಪರ್ಕ: ಕೃಷ್ಣ ಶೆಟ್ಟಿ ತಾರೆಮಾರ್ 9448356191
ದೇವಕಿ ಕೃಷ್ಣ : ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಮಹಿಳೆ ದೇವಕಿಯಾಗಿ ಯಾವುದೇ ಮಗುಕೃಷ್ಣನಾಗಿ ಅಭಿನಯಪೂರ್ವಕವಾಗಿ ಭಾಗವಹಿಸಬಹುದು. Email : kalkuradevakikrishna2021@gmail.com ಸಂಪರ್ಕ: ವಿಜಯಲಕ್ಷ್ಮೀ ಬಿ. ಶೆಟ್ಟಿ 9448163607
ಯಶೋದ ಕೃಷ್ಣ : ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಮಹಿಳೆ ಯಶೋದೆಯಾಗಿ ಯಾವುದೇ ಮಗುಕೃಷ್ಣನಾಗಿ ಅಭಿನಯಪೂರ್ವಕವಾಗಿ ಭಾಗವಹಿಸಬಹುದು. ಮಹಿಳೆಗೆ ವಯೋಮಿತಿ ನಿರ್ಬಂಧವಿಲ್ಲ. ಮಗು(ಕೃಷ್ಣ) 12 ವರ್ಷದೊಳಗಿನವರಾಗಿರಬೇಕು. Email : kalkurayashodakrishna2021@gmail.com
ಸಂಪರ್ಕ: ಕವಿತಾ ಪಕ್ಕಳ 9900813350
ನಂದಗೋಕುಲ (ಸಮೂಹ ವಿಭಾಗ) : ಸಾಮೂಹಿಕವಾಗಿ ಶ್ರೀ ಕೃಷ್ಣನ ಕಥಾನಕದಯಾವುದೇಸನ್ನಿವೇಶದ ಪ್ರದರ್ಶನವನ್ನು (ಕನಿಷ್ಠ 5 ಜನ) ಗುಂಪಿನಲ್ಲಿ ಸ್ತಬ್ಧ ಚಿತ್ರದೃಶ್ಯ ಸ್ವರೂಪದೊಂದಿಗೆಪ್ರದರ್ಶಿಸುವುದು. ವಯೋಮಿತಿ ನಿರ್ಬಂಧವಿಲ್ಲ.5 ನಿಮಿಷಗಳು Email : kalkuranandagokula2021@gmail.com
ಸಂಪರ್ಕ: ಸುದೇಶ್‌ಜೈನ್ 9620898052
ವಸುದೇವಕೃಷ್ಣ (ಮುಕ್ತ ವಿಭಾಗ) : ಪುರುಷ ವಸುದೇವನಾಗಿ ಮಗುವನ್ನು ಫ್ಲಾಸ್ಟಿಕ್‌ರಹಿತವಾದ ಯಾವುದೇ ಬೆತ್ತಅಥವಾ ಬೀಳು ಇನ್ನಿತರ ಬುಟ್ಟಿಗಳಲ್ಲಿ ತಲೆಯ ಮೇಲೆ ಹೊತ್ತು ಸಾಂಪ್ರಾದಾಯಿಕ ಉಡುಗೆಯೊಂದಿಗೆ ಭಾಗವಹಿಸಬಹುದು. ವಯೋಮಿತಿ ನಿರ್ಬಂಧವಿಲ್ಲ. (ಮಹಿಳೆಯರೂ ಪುರುಷವೇಷದೊಂದಿಗೆ ವಸುದೇವನಾಗಿ ಭಾಗವಹಿಸ ಬಹುದು.) Email : kalkuravasudevakrishna2021@gmail.com
ಸಂಪರ್ಕ: ತಮ್ಮ ಲಕ್ಷ್ಮಣ 9845446414
ಯಕ್ಷ ಕೃಷ್ಣ : ಜಿಲ್ಲೆಯ ವಿಶೇಷ ಸಾಂಪ್ರದಾಯಿಕ ಶೈಲಿಯಾದಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸುವದೃಷ್ಟಿಯಿಂದಯಕ್ಷ ಕೃಷ್ಣ (ತೆಂಕುಯಾ ಬಡಗು) 10ನೇ ತರಗತಿವರೆಗಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಾಗಿ(ಈ ವಿಭಾಗದಲ್ಲಿ ಭಾಗವಹಿಸುವ ಮಕ್ಕಳು ಸಾಂಪ್ರದಾಯಿಕಯಕ್ಷಗಾನ ವೇಷಭೂಷಣಧರಿಸಬೇಕು 5 ನಿಮಿಷಗಳು Email : kalkurayakshakrishna2021@gmail.com
ಸಂಪರ್ಕ: ಸಂಜಯ್‌ಕುಮಾರ್ 9845687066
ಶ್ರೀಕೃಷ್ಣ ಗಾನ ವೈಭವ : ಮಕ್ಕಳಿಗಾಗಿ ಶ್ರೀಕೃಷ್ಣನಿಗೆ ಸಂಬಂಧಪಟ್ಟ ಸಂಗೀತ ಸ್ಪರ್ಧೆ೪ ವಿಭಾಗಗಳಲ್ಲಿ ನಡೆಯುವುದು (ಶಿಶು, ಬಾಲ, ಕಿಶೋರ, ತರುಣ) Email : kalkurasrikrishnagaana2021@gmail.com
ಸಂಪರ್ಕ: ರಂಜಿತಾ ಎಲ್ಲೂರು 9108080396 ೯ – ಐಶ್ವರ್ಯ ಎ. ರಾವ್ 7204650064
ಛಾಯಾಕೃಷ್ಣ : ಶ್ರೀ ಕೃಷ್ಣ ವೇಷಧಾರಿಯಾಗಿಛಾಯಾಚಿತ್ರಕ್ಕೆಅನುಕೂಲಕರವಾಗಿಆಕರ್ಷಕ ಭಂಗಿಯಲ್ಲಿ ಪಾಲ್ಗೊಳ್ಳುವುದು Email : kalkurachayakrishna2021@gmail.com ಸಂಪರ್ಕ: ಆಶಾಲತ 9880382338
ಅಚ್ಚುತ (ರಸಪ್ರಶ್ನೆ) : ೭ನೇ ತರಗತಿವರೆಗಿನವಿದ್ಯಾರ್ಥಿಗಳಿಗೆ Email : kalkuraachuthaquiz2021@gmail.com
ಸಂಪರ್ಕ: ವಿದುಷಿ ಶ್ರೇಯಾ ಕೆ. 9481764771 – ನಿಶ್ಮಿತಾ 8197139394
ಮಾಧವ (ರಸಪ್ರಶ್ನೆ) : ೭ನೇ ತರಗತಿ ಮೇಲ್ಪಟ್ಟವಿದ್ಯಾರ್ಥಿಗಳಿಗೆ Email : kalkuramadhavaquiz2021@gmail.com ಸಂಪರ್ಕ: ವಿದುಷಿ ಶ್ರೇಯಾ ಕೆ. 9481764771 – ನಿಶ್ಮಿತಾ 8197139394
ರಂಗೋಲಿಯಲ್ಲಿ ಶ್ರೀ ಕೃಷ್ಟ್ಣ : ಮುಕ್ತ ವಿಭಾಗ ರಂಗೋಲಿ ಬಿಡಿಸುವ ಚಿತ್ರಿಕರಣವನ್ನು ಇಮೈಲ್‌ಗೆ ಕಳುಹಿಸಿ (ಸಮಯ: 30.ನಿಮಿಷ) ಇEmail : kalkurarangoli2021@gmail.com ಸಂಪರ್ಕ: ಸುಮಾ ಪ್ರಸಾದ್ 9449242170
ಶ್ರೀಕೃಷ್ಣ ವರ್ಣ ವೈಭವ ಚಿತ್ರಕಲಾ ಸ್ಪರ್ಧೆ :ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, 5 ವಿಭಾಗಗಳಲ್ಲಿ ನಡೆಯುವುದು. 1 ರಿಂದ 3ನೇ ತರಗತಿಯವರೆಗೆ ಶ್ರೀ ಕೃಷ್ಣನ ಯಾವುದೇಚಿತ್ರವನ್ನುಕ್ರಾಯನ್ಸ್ / ಸ್ಕೆಚ್ ಪೆನ್ನ್‌ನಿಂದ. 4 ರಿಂದ 5 ನೇ ತರಗತಿಯವರೆಗೆ ಶ್ರೀ ಕೃಷ್ಣನ ಯಾವುದೇಚಿತ್ರನ್ನುಕ್ರಾಯನ್ಸ್/ ಕಲರ್ ಪೆನ್ಸಿಲ್/ ವಾಟರ್‌ಕಲರ್‌ನಿಂದ 6 ರಿಂದ 8 ನೇ ತರಗತಿಯವರೆಗೆಗೋಪಾಲ ಕೃಷ್ಣನ ಚಿತ್ರವನ್ನು ವಾಟರ್‌ಕಲರ್‍ಸ್ ಜಲ ವರ್ಣದಲ್ಲಿ 9 ರಿಂದ 10 ನೇ ತರಗತಿಯವರೆಗೆಕಾಳಿಂಗ ಮರ್ದನ ಕೃಷ್ಣಚಿತ್ರ ವಾಟರ್‌ಕಲರ್ (ಜಲವರ್ಣ) / ಪೋಸ್ಟರ್‌ಕಲರ್‌ನಲ್ಲಿ ಮುಕ್ತ ವಿಭಾಗಗೋವರ್ಧನಗಿರಿಧಾರಿ ಕೃಷ್ಣಚಿತ್ರವನ್ನು ವಾಟರ್‌ಕಲರ್ (ಜಲವರ್ಣ)ದಲ್ಲಿರಚಿಸುವುದು. 8×11 ಇಂಚು ಅಳತೆಯ ಡ್ರಾಯಿಂಗ್ ಪೇಪರ್‌ನಲ್ಲಿ ರಚಿಸಿದ ಚಿತ್ರವನ್ನು ಆಗಸ್ಟ್ 28 ರೊಳಗಾಗಿ ಜಾನ್‌ಚಂದ್ರನ್ (ಮೊ: 9844284175) kalkuravarnavaibhava2021@gmail.com, / ಶ್ರೀ ಕೃಷ್ಣ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಕೊಡಿಯಾಲ್ ಬೈಲ್, ಮಂಗಳೂರು ಇಲ್ಲಿಗೆ ತಲುಪಿಸುವುದು.
ಬಹುಮಾನಗಳು :ವಿಜೇತರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಭಾಗವಹಿಸುವಎಲ್ಲಾಕೃಷ್ಣ ವೇಷ ಸ್ಪರ್ಧಾಳುಗಳಿಗೆ ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ ಹಾಗೂ ಪ್ರಶಂಸನಾ ಪತ್ರವನ್ನುನೀಡಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಅವರು ವಿವರ ನೀಡಿದರು.
ಈ ಬಾರಿಯ ವಿಶೇಷತೆ:
ಒಟ್ಟು 36 ವಿಭಾಗದಲ್ಲಿOnline ಮೂಲಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. Online ಮೂಲಕ ನೋಂದಾವಣಿ. ನೋಂದಾವಣಿ ಕಡ್ಡಾಯ. ತೊಟ್ಟಿಲಲ್ಲಿ ಕೃಷ್ಣ-ಕೌಟುಂಬಿಕ ಸನ್ನಿವೇಶದೊಂದಿಗೆ ಕೃಷ್ಣವೇಷಧಾರಿ ಮಗುವನ್ನು ತೊಟ್ಟಿಲಲ್ಲಿ ತೂಗುವುದು ವಯೋಮಿತಿಯ ನಿರ್ಬಂಧವಿಲ್ಲ
ವೃಕ್ಷ ಕೃಷ್ಣ _ ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೃಷ್ಣ ವೇಷಧಾರಿ ಮಕ್ಕಳು ಗಿಡ ನೆಡುವ ಸನ್ನಿವೇಶ. Online ಮೂಲಕ ವಿಶ್ವದಾದ್ಯಂತ ಮಕ್ಕಳು ಕೃಷವೇಷಧಾರಿಯಾಗಿ ಭಾಗವಹಿಸಬಹುದು.
ಸುಮಾರು ಮೂರುವರೆ ದಶಕಗಳಿಂದ ವರ್ಷಂಪ್ರತಿ ನಡೆಯುತ್ತಿರುವ ಶ್ರೀ ಕೃಷ್ಣ ವೇಷ ಸ್ಪರ್ಧೆ ಇಂದು ರಾಷ್ಟ್ರೀಯ ಮಕ್ಕಳ ಉತ್ಸವವಾಗಿ ಪರಿವರ್ತಿತವಾಗಿ ಸರ್ವರಿಂದಲೂ ಪ್ರಶಂಸಿಸಲ್ಪಟ್ಟಿದ್ದು ವಿವಿಧ ವಿಭಾಗಗಳಲ್ಲಿ ಸಾಮೂಹಿಕವಾಗಿ ಕೃಷ್ಣ ವೇಷ ಸ್ಪರ್ಧೆಯ ಮುಖೇನ ಮಕ್ಕಳ ಉತ್ಸವವನ್ನುಆಚರಿಸುವ ಪದ್ದತಿ ಇಂದು ಕರಾವಳಿಯ ಜಿಲ್ಲೆಯಾದ್ಯಂತ , ರಾಜ್ಯದಾದ್ಯಂತ ಹಾಗೂ ರಾಷ್ಟ್ರಾದ್ಯಂತ ಇದೇ ಮಾದರಿಯಲ್ಲಿ ನಡೆಯುತ್ತಿರುವುದುಕಲ್ಕೂರ ಪ್ರತಿಷ್ಠಾನಕ್ಕೆ ಅತ್ಯಂತ ಸಂತಸದ ವಿಷಯ.ಪ್ರಸ್ತುತರಾಷ್ಟ್ರೀಯ ಮಕ್ಕಳ ಉತ್ಸವವಾಗಿ ವಿಜೃಂಬಿಸುತ್ತಿದೆ. ಸ್ಪರ್ಧಾಳುಗಳು ಅವರ ಹೆತ್ತವರುಇದರ ಯಶಸ್ವಿಗೆ ಸಹಕರಿಸಬೇಕೆಂದು ವಿನಂತಿಸಲಾಗಿದೆ.
ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕಲ್ಕೂರ ಪ್ರತಿಷ್ಠಾನ, ಶೀ ಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು 0824-2492239, 9845083736. pradeep.kalkura@gmail.com ದಯಾನಂದಕಟೀಲ್, ಶಾರದಾ ವಿದ್ಯಾಲಯ, ಮಂಗಳೂರು ಫೋನ್: 9448545578, ಕದ್ರಿ ನವನೀತ ಶೆಟ್ಟಿ, ಫೋನ್: 9448123061 ಜಾನ್‌ಚಂದ್ರನ್ ೯9844284175,, ಗೋಕುಲ್‌ಕದ್ರಿ: 9448549456 ಸುಧಾಕರರಾವ್ ಪೇಜಾವರ, ಫೋನ್: 9448546051, ಪುನೀತ್ ಬೆಂಗಳೂರು: 8971312622
ಎಸ್. ಪ್ರದೀಪಕುಮಾರಕಲ್ಕೂರ ಅಧ್ಯಕ್ಷರು, ಕಲ್ಕೂರ ಪ್ರತಿಷ್ಠಾನ Mo :9845083736/ 9448125949 Email : pradeep.kalkura@gmail.com
ಈ ರಾಷ್ಟ್ರಮಟ್ಟದ ಮಕ್ಕಳ ಉತ್ಸವದಲ್ಲಿಎಲ್ಲಾ ನಾಗರಿಕ ಬಂಧುಗಳು, ಗಣ್ಯರು, ಆಡ್ಯ ಮಹನೀಯರು ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸಬೇಕೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದಎಸ್. ಪ್ರದೀಪಕುಮಾರಕಲ್ಕೂರ ವಿನಂತಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕದ್ರಿ ನವನೀತ ಶೆಟ್ಟಿ, ದಯಾನಂದ ಕಟೀಲು, ರತ್ನಾಕರ ಜೈನ್, ಕೌಶಿಕ್ ಕಲ್ಲೂರಾಯ, ವಿಜಯಲಕ್ಷ್ಮಿ ಬಿ. ಶೆಟ್ಟಿ, ಸುಧಾಕರರಾವ್ ಪೇಜಾವರ ಮುಂತಾದವರು ಉಪಸ್ಥಿತರಿದ್ದರು.
Comments are closed.