ಕರಾವಳಿ

ನಾಗರಪಂಚಮಿ, ಅಷ್ಟಮಿ,ಗಣೇಶ ಚತುರ್ಥಿ ಸೇರಿದಂತೆ ಎಲ್ಲಾ ಹಬ್ಬಗಳ ಆಚರಣೆಗೆ ಮಾರ್ಗಸೂಚಿ ಬಿಡುಗಡೆಗೆ ವಿಎಚ್‌ಪಿ ಮನವಿ

Pinterest LinkedIn Tumblr

ಮಂಗಳೂರು : ದೇವಸ್ಥಾನಗಳಲ್ಲಿ ತಕ್ಷಣ ತೀರ್ಥ ಪ್ರಸಾದ ಮತ್ತು ಪೂಜಾ ಸೇವೆಗಳನ್ನು ಪ್ರಾರಂಭಿಸುವಂತೆ ಮತ್ತು ಕಳೆದ ವರ್ಷದಂತೆ ನಾಗರಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬಗಳ ಆಚರಣೆಗೆ ಧಾರ್ಮಿಕ ವಿಧಿ ವಿಧಾನಗಳಿಗೆ ಚುತಿ ಬಾರದಂತೆ ಮಾರ್ಗದರ್ಶಿ ಸೂತ್ರಗಳನ್ನು ತಕ್ಷಣ ಬಿಡುಗಡೆಗೊಳಿಸಲು ವಿಶ್ವ ಹಿಂದು ಪರಿಷದ್ ಮನವಿ ಮಾಡಿದೆ.

ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿರುವ ವಿಶ್ವಹಿಂದೂ ಪರಿಷದ್ ಪರಿಷತ್ ಮುಖಂಡರು, ದೇವಸ್ಥಾನಗಳಲ್ಲಿ ತಕ್ಷಣ ತೀರ್ಥ ಪ್ರಸಾದ ಮತ್ತು ಪೂಜಾ ಸೇವೆಗಳನ್ನು ಪ್ರಾರಂಭಿಸುವಂತೆ ಮತ್ತು ನಾಗರಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ (ವಿಟ್ಲಾ ಪಿಂಡಿ), ಗಣೇಶ ಚತುರ್ಥಿ ಹಬ್ಬಗಳ ಇತ್ಯಾದಿಯಾಗಿ ದೇವಸ್ಥಾನಗಳಲ್ಲಿ, ಸಾರ್ವಜನಿಕವಾಗಿ ನಡೆಸುವ ಆಚರಣೆಗಳನ್ನು ಕಳೆದ ವರ್ಷದಂತೆ ಧಾರ್ಮಿಕ ವಿಧಿ ವಿಧಾನಗಳಿಗೆ ಚುತಿ ಬಾರದಂತೆ ಆಚರಿಸಲು ತಕ್ಷಣ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ವಿಶ್ವಹಿಂದೂ ಪರಿಷದ್ ಪರಿಷತ್ ಮುಖಂಡರಾದ ಪ್ರೊ ಎಂ ಬಿ ಪುರಾಣಿಕ್, ಗೋಪಾಲ್ ಕುತ್ತಾರ್, ಶರಣ್ ಪಂಪವೆಲ್, ಶಿವಾನಂದ್ ಮೆಂಡನ್ ಹಾಗು ಜಿಲ್ಲಾ ಪ್ರಮುಖರು ಇದ್ದರು

Comments are closed.