
ಮಂಗಳೂರು : ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮೊದಲ ಸಭೆ ಬುಧವಾರ ದೇವಸ್ಥಾನದ ಕಾರ್ಯಾಲಯದಲ್ಲಿ ನಡೆಯಿತು.
ವ್ಯವಸ್ಥಾಪನ ಸಮಿತಿ ನೂತನ ಸದಸ್ಯರಾದ ಡಾ. ಎ. ಜೆ. ಶೆಟ್ಟಿ, ರಾಘವೇಂದ್ರ ಅಡಿಗ, ಕೆ. ದೇವದಾಸ್ ಕುಮಾರ್, ಎಚ್. ಕೆ. ಪುರುಷೋತ್ತಮ ಜೋಗಿ, ಎಚ್. ಕುಸುಮಾ ದೇವಾಡಿಗ, ನಿವೇದಿತಾ ಎನ್. ಶೆಟ್ಟಿ, ಕೆ. ರಾಜೇಶ್, ಮನೋಹರ್ ಸುವರ್ಣ, ನಾರಾಯಣ ಕೋಟ್ಯಾನ್, ಮನಪಾ ಸದಸ್ಯರಾದ ಮನೋಹರ ಶೆಟ್ಟಿ, ಶಶಿಕಲಾ ಕಾವ, ದಕ್ಷಿಣ ಕನ್ನಡ ಧಾರ್ಮಿಕ ದತ್ತಿ ಇಲಾಖೆ ಪದನಿಮಿತ್ತ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರಾಜು, ಸಹಾಯಕ ಆಯುಕ್ತ ಹಾಗೂ ಆಡಳಿತ ಅಧಿಕಾರಿಯಾದ ಸಣ್ಣ ರಂಗಯ್ಯ ಉಪಸ್ಥಿತರಿದ್ದರು.

ಅಧ್ಯಕ್ಷರ ಆಯ್ಕೆ :
ಸಭೆಯಲ್ಲಿ ವ್ಯವಸ್ಥಾಪನ ಸಮಿತಿ ಅಧಕ್ಷರನ್ನಾಗಿ ಉದ್ಯಮಿ ಡಾ. ಎ. ಜೆ. ಶೆಟ್ಟಿವರನ್ನು ಆಯ್ಕೆ ಮಾಡುವಂತೆ ಸಮಿತಿ ಸದಸ್ಯ ಕೆ. ದೇವದಾಸ್ ಕುಮಾರ್ ಸೂಚಿಸಿದರೆ, ಸಮಿತಿ ಸದಸ್ಯೆಯಾದ ನಿವೇದಿತಾ ಎನ್. ಶೆಟ್ಟಿ ಅವರು ಅನುಮೋದಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಡಾ. ಎ. ಜೆ. ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಆಡಳಿತಾಕಾರಿ ಶ್ರೀ ಕ್ಷೇತ್ರದ ಆಡಳಿತವನ್ನು ಹೊಸ ಸಮಿತಿಗೆ ಹಸ್ತಾಂತರಿಸಿದರು.
ಬಳಿಕ ಶ್ರೀ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಚರ್ಚೆ ನಡೆಯಿತು. ನೂತನ ಸಮಿತಿ ಸದಸ್ಯರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕ್ಷೇತ್ರದ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಬಳಿಕ ದೇವಸ್ಥಾನದ ಸಂಪ್ರದಾಯದಂತೆ ವಿಶೇಷ ಪ್ರಾರ್ಥನೆಯೊಂದಿಗೆ ಮೊಗವೀರ ಬಂಧುಗಗಳಿಂದ ಊರವರ ಸಹಕಾರದೊಂದಿಗೆ ದೇವಸ್ಥಾನದ ಕೊಡಿಮರವನ್ನು ಸಾಂಪ್ರದಾಯಿಕವಾಗಿ ಕೆಳಗಿಳಿಸಲಾಯಿತು.
Comments are closed.