
ಬಿಲ್ಲವರ ಎಸೋಸಿಯೇಷನ್ ಮುಂಬಯಿ ವತಿಯಿಂದ ಜೋಗೇಶ್ವರಿ ಕಚೇರಿಯಲ್ಲಿ ಕಿಟ್ ವಿತರಣೆ
ಮುಂಬಯಿ : ಬಿಲ್ಲವರ ಅಶೋಸಿಯೇಶನ್ ಮುಂಬಯಿ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರ ನೇತೃತ್ವದಲ್ಲಿ ಸಮಾಜದ ದಾನಿಗಳ ಸಹಾಯದಿಂದ ಎಸೋಸಿಯೇಷನ್ ಸ್ಥಳೀಯ ಕಚೇರಿಯಲ್ಲಿ ಸಮಾಜದ ಅಸಾಯಕ ಕುಟುಂಬಗಳಿಗೆ ಅಹಾರ ಕಿಟ್ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಬಿಲ್ಲವರ ಎಸೋಸಿಯೇಷನ್ ಜೋಗೇಶ್ವರಿ ಸ್ಥಳೀಯ ಕಚೇರಿಯ ಕಾರ್ಯಾಲಯದಲ್ಲಿ ಸಮಾಜದ ಬಂಧುಗಳಿಗೆ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಮಾಜದ ಅರ್ಹ ಕುಟುಂಬಗಳಿಗೆ ಕಿಟ್ ವಿತರಿಸುತ್ತಾ ಎಸೋಸಿಯೇಷನ್ ಉಪಾಧ್ಯಕ್ಷ ಶಂಕರ್ ಡಿ. ಪೂಜಾರಿಯವರು ಮಾತನಾಡುತ್ತಾ, ಹಿಂದಿನಿಂದ ಪ್ರತಿ ಸ್ಥಳೀಯ ಕಚೇರಿಯಲ್ಲಿ ಕಿಟ್ ವಿತರಣಾ ಕಾರ್ಯಕ್ರಮವು ನಡೆಯುತ್ತಿದ್ದು ಸದ್ಯದಲ್ಲೇ ಎಲ್ಲಾ ಸ್ಥಳೀಯ ಕಚೇರಿಗಳಲ್ಲಿ ಈ ಯೋಜನೆ ತಲುಪಲಿದ್ದು . ಯಾರಿಗೆ ಅಗತ್ಯವಿದೆ ಅವರು ಪಡೆದುಕೊಳ್ಳಬೇಕು.
ಸಂಕಷ್ಟದ ಸಮಯದಲ್ಲಿ ಎಸೋಸಿಯೇಷನ್ ವತಿಯಿಂದ ನೀಡುತ್ತಿರುವ ಈ ಸಹಾಯವನ್ನು ಸಮಾಜ ಬಾಂಧವರು ಸಂತೋಷದಿಂದ ಸ್ವೀಕರಿಸಬೇಕು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಸಾದವೆಂದು ಸ್ವೀಕರಿಸಿ ಗುರುಗಳ ತತ್ವ-ಆದರ್ಶಗಳನ್ನು ಪಾಲಿಸುತ್ತಾ ಅಸೋಸಿಯೇಷನ್ ಕಾರ್ಯನಿರ್ವಹಿಸುತ್ತಿದೆ.
ಲಾಕ್ಡೌನ್ ಸಂದರ್ಭದಲ್ಲಿ ಬಾಳಷ್ಟು ಬಡತನದ ಕುಟುಂಬಗಳನ್ನು ನಾವು ಭೇಟಿಯಾಗಿದ್ದೇವೆ ಅವರ ಕಷ್ಟಗಳನ್ನು ಅರಿತುಕೊಂಡು ಎಸೋಸಿಯೇಷನ್ ವಿವಿಧ ರೀತಿಯಲ್ಲಿ ಅವರಿಗೆ ಸಹಕಾರವನ್ನು ನೀಡಿದ್ದೇವೆ . ಕೇಂದ್ರ ಕಾರ್ಯಾಲಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಅಸಕ್ತ ಕುಟುಂಬಗಳಿಗೆ ನೆರವು ನೀಡುತ್ತಾ ಬಂದಿದ್ದೇವೆ . ಪ್ರತಿ ಸ್ಥಳೀಯ ಕಚೇರಿಯ ಸದಸ್ಯರು ಕಷ್ಟದಲ್ಲಿದ್ದಾರೆ ಅವರ ಕಣ್ಣೀರು ಒರೆಸುವ ಸೇವೆಯಲ್ಲಿ ದಾನಿಗಳು ಸಹಕಾರಿಯಾಗಬೇಕು ಎಂದು ನುಡಿದರು.

ಜೋಗೇಶ್ವರಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಚಂದ್ರೇಶ್ ಸುವರ್ಣ ಸ್ವಾಗತಿಸಿ ಎಸೋಸಿಯೇಷನ್ ಹಾಗೂ ಸ್ಥಳೀಯ ಸಮಿತಿಯ ಕಾರ್ಯ ಚಟುವಟಿಕೆಗಳ ಮಾಹಿತಿಯಿತ್ತರು.
ಬಿಲ್ಲವರ ಎಸೋಸಿಯೇಷನ್ ಮುಂಬಯಿ ಜೋಗೇಶ್ವರಿ ಸ್ಥಳೀಯ ಕಚೇರಿ ಗೌರವ ಕಾರ್ಯಧ್ಯಕ್ಷ ಹರ್ಗ ಬಾಬು ಪೂಜಾರಿಯವರು ಮಾತನಾಡುತ್ತಾ, ಬಿಲ್ಲವರ ಎಸೋಸಿಯೇಷನ್ ವತಿಯಿಂದ ನೀಡುತ್ತಿರುವ ಈ ಸಹಾಯವನ್ನು ಅಗತ್ಯವಿದ್ದವರು ಸ್ವೀಕರಿಸಬೇಕು. ಕಷ್ಟ ಎಲ್ಲರಿಗೂ ಇದೆ ಅದು ನಮಗೆಲ್ಲರಿಗೂ ತಿಳಿದಿದೆ ಬಹಳ ತೊಂದರೆಗೆ ಒಳಪಟ್ಟವರು ಕಿಟ್ ಗಳನ್ನು ಪ್ರಸಾದರೂಪದಲ್ಲಿ ಸ್ವೀಕರಿಸಬೇಕು ಎಂದು ಸಮಾಜ ಬಾಂಧವರಲ್ಲಿ ವಿನಂತಿಸಿದರು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ನಾರಾಯಣ ಕೆ ಪೂಜಾರಿಯವರು ಮಾತನಾಡುತ್ತಾ, ಸಮಾಜದಲ್ಲಿನ ಅಗತ್ಯವಿದ್ದವರಿಗೆ ಈ ಸಹಾಯ ದೊರಕುವಂತಾಗಲಿ. ಅಂತವರು ಇದರ ಪ್ರಯೋಜನ ಪಡೆಯಲಿ. ಎಸೋಸಿಯೇಷನ್ ಅಧ್ಯಕ್ಷರಾದ ಹರೀಶ್ ಜಿ ಅಮೀನ ರವರ ನೇತೃತ್ವದಲ್ಲಿ ಪ್ರತಿ ಸ್ಥಳಿಯ ಕಚೇರಿಯಲ್ಲಿ ಬಡವರನ್ನು ಗುರುತಿಸಿ ಅವರಿಗೆ ಸಹಾಯ ನೀಡುವ ಸೇವಾಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡೋಣ ಎಂದರು.
ಸಭೆಯಲ್ಲಿ ಬಿಲ್ಲವರ ಎಸೋಸಿಯೇಷನ್ ನ ಜೊತೆ ಕಾರ್ಯದರ್ಶಿ ಹರೀಷ್ ಬಿ ಸಾಲ್ಯಾನ್, ಸ್ಥಳೀಯ ಕಚೇರಿಯ ಕೋಶಾಧಿಕಾರಿ ಪ್ರಶಾಂತ್ ಸುವರ್ಣ, ಜೊತೆ ಕಾರ್ಯದರ್ಶಿ ಸಂತೋಷ್ ಎಸ್ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷ ಎಂ. ಸಿ. ಸುವರ್ಣ ಹಾಗೂ ವಾರಿಜಾ ಕೋಟ್ಯಾನ್, ಕಲಾವತಿ ಅಮೀನ್, ಸರಸ್ವತಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರೇಶ್ ಸುವರ್ಣ ನಿರೂಪಿಸಿ ವಂದನಾರ್ಪಣೆ ಮಾಡಿದರು.
ಚಿತ್ರ ವರದಿ ದಿನೇಶ್ ಕುಲಾಲ್
Comments are closed.