ಕರಾವಳಿ

ದ.ಕ. ಜಿಲ್ಲೆಯಲ್ಲಿ ನಾಳೆ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾ ಶಿಬಿರವಿಲ್ಲ

Pinterest LinkedIn Tumblr

ಮಂಗಳೂರು, ಜುಲೈ.2: ದ.ಕ. ಜಿಲ್ಲೆಯಲ್ಲಿ ನೀಡಲಾಗುತ್ತಿರುವ ಕೋವಿಡ್ ವ್ಯಾಕ್ಸಿನ್ಗೆ ಸಂಬಂಧಿಸಿದಂತೆ ಜುಲೈ 3ರ ಶನಿವಾರದಂದು ಕಾಲೇಜು ವಿದ್ಯಾರ್ಥಿಗಳ ಲಸಿಕಾ ಶಿಬಿರ ಇರುವುದಿಲ್ಲ.

ಉಳಿದಂತೆ ಕೋವಿಶೀಲ್ಡ್ ಲಸಿಕೆಯು ಮಂಗಳೂರು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಎರಡನೇ ಡೋಸ್ ಲಸಿಕಾ ಫಲಾನುಭವಿಗಳಿಗೆ ಮಾತ್ರ ಲಸಿಕೆ ಪಡೆಯಲು ಅವಕಾಶವಿದೆ.

ಬೆಳ್ತಂಗಡಿ ತಾಲೂಕು ಆಸ್ಪತ್ರೆ ಹಾಗೂ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದ ಫಲಾನುಭವಿಗಳಿಗೆ ಮಾತ್ರ ಲಸಿಕೆ ನೀಡಲಾಗುವುದು.

ಜಿಲ್ಲಾ ವೆನ್ಲಾಕ್ ಆಸತ್ರೆಯಲ್ಲಿ ಕೋವಿಶೀಲ್ಡ್ ನ 2ನೇ ಡೋಸ್, ಕೋವ್ಯಾಕ್ಸಿನ್ ಪ್ರಥಮ ಹಾಗೂ ದ್ವಿತೀಯ ಡೋಸ್ ಹಾಗೂ NRI ಗಳಿಗೆ ಲಸಿಕಾ ಸೌಲಭ್ಯವಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.