ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ: ವೀಕೆಂಡ್ ಕರ್ಫ್ಯೂನಲ್ಲೂ ಕೆಲವು ಬದಲಾವಣೆ

Pinterest LinkedIn Tumblr

ಮಂಗಳೂರು, ಜುಲೈ.01: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನನ್ನು ಇನ್ನಷ್ಟು ಸಡಿಲಿಸಲಾಗಿದ್ದು, ಈಗ ಇರುವ ಬೆಳಿಗ್ಗೆ 7ರಿಂದ ಮಧ್ಯಾಹ್ನದ 2 ಗಂಟೆಯವರೆಗೆ ಬದಲಾಗಿ ಸಂಜೆ 5 ರವರೆಗೆ ಎಲ್ಲಾ ತರಹದ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ ಸಂಜೆ 5ರ ತನಕ ಅನ್ ಲಾಕ್ ಮಾಡಲಾಗಿದೆ. ಬಸ್ ಸಂಚಾರವನ್ನು ಮಧ್ಯಾಹ್ನ 1.30ರ ಬಳಿಕ ನಿಲ್ಲಿಸಲಾಗಿತ್ತು. ಆದರೆ ನಾಳೆಯಿಂದ ಸಂಜೆ 5ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಆದರೆ ವೀಕೆಂಡ್ ಕರ್ಫ್ಯೂ ಅನ್ನು ಕೆಲವೊಂದು ಬದಲಾವಣೆಯೊಂದಿಗೆ ಮುಂದುವರಿಸಲಾಗಿದ್ದು, ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರ ವರಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಆದರೆ ಮಧ್ಯಾಹ್ನ 2ರ ವರೆಗೆ ಹಾಲು, ಮೆಡಿಕಲ್, ದಿನಸಿ, ತರಕಾರಿ, ಹಣ್ಣು ಹಂಪಲು, ಮೀನು – ಮಾಂಸದ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ.

ಈ ಸಂದರ್ಭ ಜನರು ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ತಿಳಿಸಿದೆ. ಈ ಆದೇಶ ಜುಲೈ 5ರವರೆಗೆ ಮಾತ್ರ ಇರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Comments are closed.