ಕರಾವಳಿ

ಉದ್ಯಾನವನದಲ್ಲಿ ನಡಿಗೆ ಮತ್ತು ಜಾಗಿಂಗ್‍ಗೆ ಮಾತ್ರ ಅವಕಾಶ: ದ.ಕ.ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು, ಜೂನ್ 24 : ಕೋವಿಡ್-19 ಸಂಬಂಧಿಸಿದಂತೆ ಜೂನ್ 22ರಂದು ಜಿಲ್ಲಾಧಿಕಾರಿ ಕಚೇರಿ ಆದೇಶ ಸಂಖ್ಯೆ: ಎಂಎಜಿ(2)ಸಿಆರ್156/2021/133465/ಸಿ4/18 ಅನುಮತಿ ನೀಡಲಾದ ಹೆಚ್ಚುವರಿ ಚಟುವಟಿಕೆ 2 ರಲ್ಲಿ ಕೋವಿಡ್ ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಬೆಳಿಗ್ಗೆ 7 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ನಡಿಗೆ ಮತ್ತು ಜಾಗಿಂಗ್ ಉದ್ದೇಶಕ್ಕೆ ಮಾತ್ರವೇ ಉದ್ಯಾನವನಗಳನ್ನು ತೆರೆಯಲು ಅನುಮತಿಸಿದೆ.

ಯಾವುದೇ ಗುಂಪು ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.