
ಮಂಗಳೂರು: ಅಲ್ಪಕಾಲದ ಅಸೌಖ್ಯದಿಂದ ಜೂನ್ 16ರಂದು ನಿಧನರಾದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷರಾಗಿದ್ದ, ವಿಚಾರವಾದಿ ಸಿ.ಎನ್. ಶೆಟ್ಟಿ (88)ಯವರಿಗೆ ನುಡಿನಮನ ಸಲ್ಲಿಸುವ ವಿಶೇಷ ಆನ್‌ಲೈನ್ ಕಾರ್ಯಕ್ರಮ ನಡೆಯಿತು.
ಉಡುಪಿಯ ಪ್ರೊಟ ಕೆ. ಪಣಿರಾಜ್ ಮಾತನಾಡಿ, ಪ್ರಬಲ ಸಮುದಾಯದಿಂದ ಬಂದು ಕೋಮು ಸೌಹಾರ್ದದ ಚಳುವಳಿಗೆ ನಾಯಕತ್ವ ನೀಡಿದ್ದ ನೆಹರೂವಾದಿ ಸಿ.ಎನ್.ಶೆಟ್ಟಿಯವರ ವಿಚಾರ, ಬದುಕು, ಹೋರಾಟ, ಬರಹ, ಮುಗ್ದತೆ, ಹದಿಹರೆಯದಲ್ಲೂ ತೋರಿದ ಲವಲವಿಕೆ ಎಲ್ಲರಿಗೂ ಮಾದರಿ. ಅವರ ಆಶಯದ ಕನಸುಗಳನ್ನು ನನಸಾಗಿಸುವುದೇ ನಿಜವಾದ ನುಡಿನಮನ ಎಂದರು.
ಸಾಮಾಜಿಕ ಹೋರಾಟಗಾರ ಕೆ.ಎಲ್. ಅಶೋಕ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ, ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ, ಸಾಮಾಜಿಕ ಕಾರ್ಯಕರ್ತರಾದ ಬಿ. ಮುಹಮ್ಮದ್ ಕಕ್ಕಿಂಜೆ, ಮತ್ತು ದಿನಕರ ಎಸ್. ಬೆಂಗ್ರೆ ನುಡಿನಮನ ಸಲ್ಲಿಸಿದರು. ಖ್ಯಾತ ಗಾಯಕ ಬೆಂಗಳೂರಿನ ಚಿಂತನ್ ವಿಕಾಸ್ ಮತ್ತು ಪ್ರಾಧ್ಯಾಪಕ ಡಾ. ಶಶಿಕಾಂತ್ ಕೆ. ಹಾಡುಗಳ ಮೂಲಕ ನಮನ ಸಲ್ಲಿಸಿದರು. ಇಸ್ಮತ್ ಪಜೀರು ಸ್ವಾಗತಿಸಿ, ಉಮರ್ ಯು.ಹೆಚ್. ಕ್ರಾರ್ಯಕ್ರಮ ನಿರೂಪಿಸಿದರು.
ಕುಟುಂಬದ ಪ್ರತಿನಿಧಿಯಾಗಿ ಸಿ.ಎನ್. ಶೆಟ್ಟಿಯವರ ಅಳಿಯ ಸುರೇಶ್ ನಾಯಕ್ ಪಾಲ್ಗೊಂಡಿದ್ದರು. ಸುರೇಶ್ ಭಟ್ ಬಾಕ್ರಬೈಲು, ಶಿವಸುಂದರ್, ಡಾ. ಗಣನಾಥ ಶೆಟ್ಟಿ ಎಕ್ಕಾರು, ಪ್ರವೀಣ್ ಶೆಟ್ಟಿ, ಸಂಜೀವ ಬಾಲ್ಕೂರು, ರಾಘವೇಂದ್ರ ಕೆ., ಜೈರಾಜ್, ತೌಸೀಫ್ ಕೊಪ್ಪ, ಸುಧಾ ಹೆಗ್ಡೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.
Comments are closed.