ಕರಾವಳಿ

ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ ವಿವಿಧ ಯೋಜನೆಗಳಿಗೆ ವೆರ್ಚುವಲ್ ಮೂಲಕ ಚಾಲನೆ

Pinterest LinkedIn Tumblr

ಮಂಗಳೂರು : ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ ವಿವಿಧ ಯೋಜನೆಗಳಿಗೆ ಮಂಗಳವಾರ ವೆರ್ಚುವಲ್ ಮೂಲಕ ಕೇಂದ್ರ ಪೆಟ್ರೋಲಿಯಂ ಹಾಗೂ ಉಕ್ಕು ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ರವರು ಚಾಲನೆ ನೀಡಿದರು.

ಮಂಗಳೂರಿನ ಎರಡು ಯೋಜನೆಗಳು ಸೇರಿದಂತೆ ಒಟ್ಟು ನಾಲ್ಕು ವಿವಿಧ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದರು.

ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಉಪಸ್ಥಿತರಿದ್ದರು. ನಳಿನ್ ಕುಮಾರ್ ಕಟೀಲ್ ರವರ ಮನವಿಯ ಮೇರೆಗೆ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯು ತನ್ನ ಸಿ.ಎಸ್.ಆರ್. ವತಿಯಿಂದ ಮೂಡಬಿದಿರೆಯ ಸರ್ಕಾರಿ ಆಸ್ಪತ್ರೆಗೆ 50 ಹಾಸಿಗೆಗಳನ್ನು ಒಟ್ಟು ರೂ. 18.00 ಲಕ್ಷ ವೆಚ್ಚದಲ್ಲಿ ನೀಡುವ ಕಾರ್ಯಕ್ರಮ ಹಾಗೂ ಮಂಗಳೂರಿನ ಕೆ.ಐ.ಒ.ಸಿ.ಎಲ್ ಪೆಲೆಟ್ ಪ್ಲಾಂಟ್ ನ ಆಧುನೀಕರಣದ ಅಂಗವಾಗಿ ಸುಮಾರು ರೂ. 17.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬ್ಯಾರೆಲ್ ಟೈಪ್ ಬ್ಲೆಂಡರ್ ರೆಕ್ಲೈಮರ್ (Barrel Type Blender Reclaimer) ನ್ನು ಕೇಂದ್ರ ಸಚಿವರು ಉದ್ಘಾಟಿಸಿದರು.

ಕೋವಿಡ್ 19 ವೈರಾಣು ರೋಗದ ವಿರುದ್ದ ಹೋರಾಡುವ ನಿಟ್ಟಿನಲ್ಲಿ ಮಾನ್ಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರ ಮನವಿಯ ಮೇರೆಗೆ ಕುದುರೆಮುಖ ಕಂಪೆನಿಯು ತನ್ನ ಸಿ.ಎಸ್.ಆರ್. ವತಿಯಿಂದ ಈಗಾಗಲೇ ಜಿಲ್ಲಾಡಳಿತಕ್ಕೆ ಅಂಬುಲೆನ್ಸ್, ವೆಂಟಿಲೇಟರ್ ಸೇರಿದಂತೆ ಉಪ್ಪಿನಂಗಡಿ ಹಾಗೂ ಮೂಡಬಿದಿ ರೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 250LPM (ಲೀಟರ್ ಪರ್ ಮಿನಿಟ್) ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕವನ್ನು ನೀಡುತ್ತಿರುವುದಕ್ಕಾಗಿ ಕೇಂದ್ರ ಪೆಟ್ರೋಲಿಯಂ ಹಾಗೂ ಉಕ್ಕು ಖಾತೆಯ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ರವನ್ನು ಅಭಿನಂದಿಸಿದರು.

ಸಭೆಯಲ್ಲಿ ಪೂಜ್ಯ ಶ್ರೀಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಠ, ರಾಜ್ಯದ ಉಪಮುಖ್ಯಮಂತ್ರಿಯವರಾದ ಡಾ. ಸಿ.ಎನ್. ಆಶ್ವಥ ನಾರಾಯಣ ಸೇರಿದಂತೆ ಇತರೆ ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

Comments are closed.