ಕರಾವಳಿ

ಮಲಾಡ್ ಪೂರ್ವದ ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಶ್ರೀದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಸ

Pinterest LinkedIn Tumblr

ಪರಿಸರದ ಅಭಿವೃದ್ಧಿಗೆ ಮುಕಾಂಬಿಕೆ ಅನುಗ್ರಹಿಸಲಿ – ಸಂಸದ ಗೋಪಾಲ ಶೆಟ್ಟಿ

ಮುಂಬಯಿ : ಮಲಾಡ್ ಪರಿಸರದಲ್ಲಿ ಬಹಳಷ್ಟು ತುಳು ಕನ್ನಡಿಗರು ಧಾರ್ಮಿಕ ಹಾಗೂ ಸಮಾಜಿಕ ಸೇವೆಯಲ್ಲಿ ತೊಡಗಿರುದನ್ನು ಅರಿತಿರುವೆನು. ಹಿಂದೂ ಧರ್ಮದ ಪುನರುದ್ದಾರಕ್ಕೆ ದೇವಸ್ಥಾನಗಳು ಅಗತ್ಯ. ಇಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳಿಂದ ಕುರಾರ್ ವಿಲೇಜ್ ಪರಿಸರವು ಇನ್ನೂ ಅಭಿವೃದ್ದಿಗೊಳ್ಳಲಿ. ಜನ ಸಮಾನ್ಯರ ಕಷ್ಟ ದುಖಗಳು ದೂರವಾಗಲಿ. ಕೊರೋನಾ ಮಹಾಮಾರಿಯು ಧಾರ್ಮಿಕ ಸೇವೆಗಳಿಂದ ದೂರವಾಗಲಿ. ಇಲ್ಲಿನ ಎಲ್ಲಾ ಸೇವೆಗಳಿಗೆ ನನ್ನ ಪೂರ್ಣ ಬೆಂಬಲವಿದೆ ಎಂದು ಬೋರಿವಲಿಯ ಸಂಸದರಾದ ಗೋಪಾಲ ಶೆಟ್ಟಿಯವರು ನುಡಿದರು.

ಸುಮಾರು 60ವರ್ಷಗಳ ಹಿಂದೆ ಮಲಾಡ್ ಕುರಾರ್ ವಿಲೇಜಿನ ಅದರ್ಶ್ ನಗರದ ಸಣ್ಣ ಚಾಲನ್ ಒಂದರಲ್ಲಿ ಕೈವಲ್ಯ ಶ್ರೀ ಪ್ರೇಮಾನಂದ ಸ್ವಾಮೀಜಿ ಸ್ಥಾಪಿಸಿರುವ ಶ್ರೀ ಮೂಕಾಂಬಿಕಾ ದೇವಸ್ಥಾನ ಇದೀಗ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಂಡಿದ್ದು ಜೂನ್ 13ರಿಂದ 17ರವರೆಗೆ ಬ್ರಹ್ಮಕಲಶೋತ್ಸವದ ಪ್ರಯುಕ್ತ ವಿವಿಧ ಪೂಜಾ ಕಾರ್ಯಗಳು ನಡೆದಿದ್ದು ಜೂನ್18 ರಂದು ಬೆಳಿಗ್ಗೆ ನೂತನವಾಗಿ ನಿರ್ಮಾಣಗೊಂಡ ಗರ್ಭಗುಡಿಯಲ್ಲಿ ಶ್ರೀ ಮೂಕಾಂಬಿಕೆ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸ್ಥಳೀಯ ಸಂಸದರಾದ ಗೋಪಾಲ ಶೆಟ್ಟಿಯವರು ಆಗಮಿಸಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ದೇವಸ್ಥಾನದ ಬಗ್ಗೆ ವಿವರವನ್ನು ನೀಡಿದ ದೇವಸ್ಥಾನದ ಧರ್ಮದರ್ಶಿ ವೇದಾ ನಂದ ಸ್ವಾಮೀಜಿಯವರು ಸಂಸದರನ್ನು ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು.

6 ದಿನಗಳ ಕಾಲ ನಡೆದ ಎಲ್ಲ ಪೂಜಾವಿಧಿಗಳನ್ನು ಶ್ರೀ ವೇದಾ ನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕೇರಳದ ಪ್ರಸಿದ್ಧ ಪುರೋಹಿತರಾದ ಪ್ರದೀಶ ತಂತ್ರಿ ಪೂಜಾ ಕಾರ್ಯಗಳು ನೆರವೇರಿಸಿದರು.

ಕುರಾರ್ ವಿಲೇಜಿನಲ್ಲಿ ಪ್ರಪ್ರಥಮವಾಗಿ ಪ್ರಾರಂಭಗೊಂಡ ಕ್ಷೇತ್ರ ಮೂಕಾಂಬಿಕಾ ಕ್ಷೇತ್ರ. ಈ ಮಂದಿರದಲ್ಲಿ ನಡೆಯುವ ಭಜನೆ ಪೂಜೆಗಳಿಗೆ ಮುಂಬೈ ಹಾಗೂ ಉಪ ನಗರಗಳಿಂದಲೂ ಭಕ್ತರು ಅಪಾರ ಸಂಖ್ಯೆಯಲ್ಲಿ ಬರುತ್ತಿದ್ದರು.

ಶ್ರೀ ಪ್ರೇಮಾನಂದ ಸ್ವಾಮೀಜಿ ಆವೇಶದಲ್ಲಿ ನುಡಿದ ಮಾತುಗಳು ನೀಡಿದ ಪ್ರಸಾದಗಳು ವರಪ್ರಸಾದ ವಾದವು. ಇವರಿಂದ ಪ್ರಸಾದವನ್ನು ಪಡೆದ ಭಕ್ತರು ದೇಶ-ವಿದೇಶದಲ್ಲಿ ಯಶಸ್ವಿ ಉದ್ಯಮಿಗಳಾಗಿ. ಧಾರ್ಮಿಕ. ರಾಜಕೀಯ ಮುಖಂಡರು ಗಳಾಗಿದ್ದಾರೆ.

ಸ್ವಾಮೀಜಿಯವರು ತನ್ನ ಹುಟ್ಟೂರಾದ ಕಿನ್ನಿಗೋಳಿಯ ತಾಳಿಪಾಡಿ ಗ್ರಾಮದಲ್ಲಿ ಕೂಡ ಭವ್ಯ ಮೂಕಾಂಬಿಕ ದೇಗುಲವನ್ನು ಸ್ಥಾಪಿಸಿ ಭಕ್ತರಿಗೆ ಸಮರ್ಪಿಸಿ ಕೊಂಡಿದ್ದಾರೆ.

ದೇವಸ್ಥಾನದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ, ದೀಪಕ್ ಶಾನ್ ಬೋಗ್, ಕಾರ್ಯದರ್ಶಿ ವಿಜಯ ಕಸ್ಕಾಡೆ, ಕೋಶಾಧಿಕಾರಿ ರಘು ಶಾನ್ ಬೋಗ್, ಸದಸ್ಯರುಗಳಾದ ಪರೇಶ್ ಮೆಹ್ತಾ, ಪ್ರಶಾಂತ್, ರಾಜೇಂದ್ರ ಸುರ್ವೆ, ಡಾಕ್ಟರ್ ಶ್ರೀಕಾಂತ್ , ಪ್ರಕಾಶ್, ಗಿರೀಶ್ ಸುತಾರ್, ಆಡಳಿತ ಮಂಡಳಿಯ ಯೋಗೀಶ್ ಕೋಟ್ಯಾನ್, ಯದೇಶ್ ಕೋಟ್ಯಾನ್, ಆನಂದ ಪೂಜಾರಿ, ಶ್ರೀ ಕಲಾ ಜಗದೀಶ್ ಅಂಚನ್. ಕರಿಯ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದು ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದರು.

ಜೂನ್ 18ರಂದು ನಡೆದ ಮೂಕಾಂಬಿಕೆಯ ಮೂರ್ತಿ ಪುನರ್ ಪ್ರತಿಷ್ಠಾಪನೆಯ ಬಳಿಕ ನಡೆದ ಶ್ರೀ ವೇದಾ ನಂದ ಸ್ವಾಮೀಜಿ ಅವರ ದರ್ಶನ ಸೇವೆಯಲ್ಲಿ ಹರೀಶ್ ಶಾಂತಿ ಹೆಜಮಾಡಿಯವರು ಮಧ್ಯಸ್ಥಿಕೆಯಲ್ಲಿ ಸಹಕರಿಸಿದರು.

ಪೂಜಾ ಕಾರ್ಯಗಳು ಕೇರಳದ ಪ್ರಸಿದ್ದ ಪುರೋಹಿತರಾದ ಪ್ರದೀಶ್ ತಂತ್ರಿಯವರಿಂದ ನೆರವೇರಿತು. ದೇವಸ್ಥಾನದ ವಿನ್ಯಾಸ, ಕೆತ್ತನೆ ಕೆಲಸಗಳು ಗಿರೀಶ್ ಸುತಾರ್ ಅವರಿಂದ ಆಗಿದೆ.

ಪೂಜಾಕಾರ್ಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ ಶೆಟ್ಟಿ ಕೋಶಧಿಕಾರಿ ಜಗನ್ನಾಥ್ ಮೆಂಡನ್ ಸಾಲಿಗ್ರಾಮ, ಸಂಚಾಲಕ ದಿನೇಶ್ ಬಿ. ಕುಲಾಲ್, ಬಿಲ್ಲವರ ಅಸೋಸಿಯೇಷನ್ ನ ಮಲಾಡ್ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸಂತೋಷ ಪೂಜಾರಿ. ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಆನಂದ ಕೋಟ್ಯಾನ್. ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ರಘು ಗುರುಸ್ವಾಮಿ, ಕಲಾವತಿ ಕೋಟ್ಯಾನ್, ನಲಿನಿ ಕೋಟ್ಯಾನ್, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಸರ್ವ ಸದಸ್ಯರು ಶನಿ ಮಂದಿರದ ಮಹಿಳಾ ವಿಭಾಗದ ಸದಸ್ಯರು ಪಾಲ್ಗೊಂಡು ಅನ್ನ ಮಹಾಪ್ರಸಾದ ಸ್ವೀಕರಿಸಿದರು.

ವರದಿ :ಈಶ್ವರ ಎಂ. ಐಲ್/  ಚಿತ್ರ : ದಿನೇಶ್ ಕುಲಾಲ್

Comments are closed.