ಕರಾವಳಿ

ಜೂ.22ರಿಂದ ನಿಟ್ಟೆಯಲ್ಲಿ ವಿಶಿಷ್ಟ “ಟಾಯ್‍ಕಥಾನ್” ಸ್ಪರ್ಧೆ

Pinterest LinkedIn Tumblr

ಮಂಗಳೂರು: ಭಾರತೀಯ ಸಂಸ್ಕೃತಿ, ಇತಿಹಾಸ, ಕಲೆಗಳನ್ನು ಆಧರಿಸಿದ ಆಟಿಕೆ ಮತ್ತು ಅವುಗಳ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಟಾಯ್‍ಕಥಾನ್-2021’ ಸ್ಪರ್ಧೆಯ ಡಿಜಿಟಲ್ ಅವೃತ್ತಿಯನ್ನು ಆಯೋಜಿಸಲು ನಿಟ್ಟೆಯ ಎನ್‍ಎಂಎಎಂ ಇನ್‍ಸ್ಟಿಟ್ಯುಟ್ ಆಫ್ ಟೆಕ್ನಾಲಜಿ ನೋಡಲ್ ಸೆಂಟರ್ ಆಗಿ ಆಯ್ಕೆಗೊಂಡಿದೆ.

ಆತ್ಮನಿರ್ಭರ್ ಭಾರತ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಇನ್ನೊವೇಶನ್ ಕೌನ್ಸಿಲ್, ವಿವಿಧ ಸಚಿವಾಲಯಗಳ ಸಹಯೋಗದಲ್ಲಿ ಆಯೋಜಿಸುತ್ತಿರುವ ಈ ವಿಶಿಷ್ಟ ಸ್ಪರ್ಧೆಯು ಜೂ.22 ರಿಂದ 24ರವರೆಗೆ ದೇಶದ ಕೆಲವಾರು ನೋಡಲ್ ಸೆಂಟರ್ ಗಳಲ್ಲಿ ನಡೆಯಲಿದ್ದು ನಿಟ್ಟೆಯ ನೋಡಲ್ ಸೆಂಟರ್ ನಲ್ಲಿ 24 ತಂಡಗಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿವೆ.

ಈ ಹ್ಯಾಕಥಾನ್ ಅವಧಿಯಲ್ಲಿ ತಂಡಗಳು ಆಯಾ ಕ್ಷೇತ್ರದ ತಜ್ಞರ ಮಾರ್ಗದರ್ಶನದಲ್ಲಿ ತಮ್ಮ ವಿಶಿಷ್ಟ ಆಟಿಕೆ ಅಥವಾ ಡಿಜಿಟಲ್ ಅಪ್ಲಿಕೇಶನ್‍ಗಳನ್ನು ಅಭಿವೃದ್ಧಿಪಡಿಬೇಕಾಗುತ್ತದೆ ಎಂದು ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

Comments are closed.