
(ಕಡತ ಚಿತ್ರ)
ಮಂಗಳೂರು, ಜೂನ್ 17 : ಜೂನ್ 17ರಂದು ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ನಗರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ರಾಷ್ಟ್ರೀಯ ಚುಚ್ಚುಮದ್ದು ಕಾರ್ಯಕ್ರಮವಿರುವುದರಿಂದ ಕೋವಿಡ್ ಲಸಿಕಾ ಶಿಬಿರ ಇರುವುದಿಲ್ಲ.
ಕೋವ್ಯಾಕ್ಸಿನ್ ಲಸಿಕೆಯ 1ನೇ ಡೋಸ್ ಪಡೆದು 28 ದಿನ ಪೂರೈಸಿದ (4-6ವಾರ) ಅರ್ಹ ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆಯನ್ನು ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.