ಕರಾವಳಿ

ಹೆಲ್ತ್‌ಕೇರ್ ವಲಯದಲ್ಲಿ ಉದ್ಯೋಗಾಧಾರಿತ ಉಚಿತ ಕೌಶಲ್ಯ ತರಬೇತಿ

Pinterest LinkedIn Tumblr

ಮಂಗಳೂರು, ಜೂನ್ 14 : ಕೇಂದ್ರ ಸರಕಾರದಿಂದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಮಂತ್ರಾಲಯದ ಮುಖಾಂತರ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (NSDC)ದಿಂದ ಕೋವಿಡ್ – 19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಆರೋಗ್ಯ ವಲಯದಲ್ಲಿ ಕೊರತೆಯಿರುವ ಕುಶಲತಾ ತಂತ್ರಜ್ಞತೆಯಿಂದ ಕೂಡಿದ ಸಿಬ್ಬಂದಿಗಳನ್ನು ಪೂರೈಸಲು ಅನುಕೂಲವಾಗುವಂತೆ ಆರು ಜಾಬ್‍ರೋಲ್‍ಗಳಾದ ಎಮೆರ್ಜೆನ್ಸಿ ಮೆಡಿಕಲ್ ಟೆಕ್ನೀಷಿಯನ್, ಮೆಡಿಕಲ್ ಎಕ್ವಿಪ್‍ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್, ಜನರಲ್ ಡ್ಯೂಟಿ ಅಸಿಸ್ಟೆಂಟ್, ಜನರಲ್ ಡ್ಯೂಟಿ ಅಸಿಸ್ಟೆಂಟ್ ಕ್ರಿಟಿಕಲ್, ಹೋಮ್ ಹೆಲ್ತ್ ಏಡ್ ಮತ್ತು ಫ್ಲೆಬೆಟೋಮಿಸ್ಟ್ ಅಲ್ಪಾವಧಿ ಕೌಶಲ್ಯ ತರಬೇತಿ ಜಾಬ್‍ರೋಲ್‍ಗಳನ್ನು ಅಭಿವೃದ್ಧಿ ಪಡಿಸಿದ್ದು, ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖಾ ಮೂಲಕ ರಾಜ್ಯಾದ್ಯಂತ ಉದ್ಯೋಗಾಧಾರಿತ ತರಬೇತಿ ನೀಡಿ ಆರೋಗ್ಯ ವಲಯದಲ್ಲಿ ಪ್ರಸ್ತುತ ಎದುರಿಸುತ್ತಿರುವ ಹೆಲ್ತ್‍ಕೇರ್ ಸಿಬ್ಬಂದಿ ಕೊರತೆಯನ್ನು ನೀಗಿಸುವ ಜೊತೆಗೆ ನಿರಂತರವಾಗಿ ಹೆಲ್ತ್‍ಕೇರ್ ಸೆಂಟರ್‍ಗಳಲ್ಲಿ ತಂತ್ರಜ್ಞರನ್ನು ಪೂರೈಸಲು ಜಿಲ್ಲಾಡಳಿತದಿಂದ ಜಿಲ್ಲಾ ಕೌಶಲ್ಯ ಮಿಷನ್ ಮೂಲಕ ಅಭಿವೃದ್ಧಿ ಪಡಿಸಲು ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿರುತ್ತದೆ.

ಜಿಲ್ಲೆಯಲ್ಲಿ ಸೂಚಿತ ಕೌಶಲ್ಯ ತರಬೇತಿಯನ್ನು ಪರಿಣಾಮಕಾರಿಯಾಗಿ ನಡೆಸುವ ಕುರಿತು ಜೂನ್ 8 ರಂದು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮೆಡಿಕಲ್ ಆಫಿಸರ್ ಕಾರ್ಯಾಲಯದಲ್ಲಿ ಸಭೆ ನಡೆಸಲಾಗಿದ್ದು, ತರಬೇತಿಯನ್ನು ಆರೋಗ್ಯ ಇಲಾಖಾ ಅಧೀನದ ಜಿಲ್ಲಾ ತರಬೇತಿ ಸಂಸ್ಥೆ ಮತ್ತು ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಸಲಾಗುವುದು.

ಯಶಸ್ವಿಯಾಗಿ ತರಬೇತಿ ಪೂರೈಸಿದ ಅಭ್ಯರ್ಥಿಗಳನ್ನು ಬೇಡಿಕೆಗೆ ತಕ್ಕಂತೆ ಜಿಲ್ಲಾ ಅಥವಾ ತಾಲೂಕು ಆಸ್ಪತ್ರೆಗಳಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಲಾಗುವುದು. ಮಾಸಿಕ ವೇತನವನ್ನು ಅಭ್ಯರ್ಥಿಯು ಪಡೆದಿರುವ ತರಬೇತಿ ಹಾಗೂ ಮೂಲ ವಿದ್ಯಾರ್ಹತೆಯನ್ನು ಆಧರಿಸಿ ನಿಗದಿಪಡಿಸಲಾಗುವುದು.

ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಯು ಕನಿಷ್ಟ ಎರಡು ವರ್ಷ ಜಿಲ್ಲಾಸ್ಪತ್ರೆಯಲ್ಲಿ ಅಥವಾ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಒಪ್ಪಿಗೆ ಪತ್ರವನ್ನು ನೀಡುವುದು ಅವಶ್ಯವಾಗಿರುತ್ತದೆ.

ಅಲ್ಪಾವಧಿ ತರಬೇತಿಯು ಸುಮಾರು ನಾಲ್ಕು ತಿಂಗಳ ಅವಧಿಯಾಗಿದ್ದು, ಆರೋಗ್ಯ ವಲಯದಲ್ಲಿ ಗುರುತಿಸಿರುವ ಸರಕಾರಿ/ಖಾಸಗಿ ಆಸ್ಪತ್ರೆಗಳಲ್ಲಿ ಮೂರು ತಿಂಗಳ ಕಾಲ ಆನ್ ಜಾಬ್ ಟ್ರೈನಿಂಗ್‍ನಿಂದ ಒಳಗೊಂಡಿರುತ್ತದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಗೂಗಲ್ ಲಿಂಕ್ https://forms.gle/7bVf5WffDSZsqAgv8 ಅಥವಾ ಕ್ಯೂ ಆರ್
ಕೋಡ್ ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಆಕ್ಸಿಜನ್ ಪ್ಲ್ಯಾಂಟ್ ನಿರ್ವಹಣೆ ಬಗ್ಗೆ ಬೇಕಾದ ಟೆಕ್ನೀಷಿಯನ್‍ರವರಿಗೆ ಸೂಕ್ತ ತರಬೇತಿ ನೀಡುವ ಕುರಿತಂತೆಯೂ ಚರ್ಚಿಸಲಾಗಿರುತ್ತದೆ. ಈ ಬಗ್ಗೆ ಸ್ಥಳೀಯ ಕೈಗಾರಿಕಾ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯವರನ್ನು ಗುರುತಿಸಿ ನೇಮಿಸಲಾಗುವುದು ಎಂದರು.

Comments are closed.