
ಮಂಗಳೂರು : ಮಂಗಳೂರಿನ ತಜ್ಞ ವೈದ್ಯರಾದ ಡಾ.ಶ್ರೀನಿವಾಸ ಕಕ್ಕಿಲ್ಲಾಯರ ಪ್ರಕರಣದ ಬಗ್ಗೆ ಕದ್ರಿ ಪೋಲಿಸ್ ಠಾಣೆಯ ಅಧಿಕಾರಿಗಳು ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಬಗ್ಗೆ ದ.ಕ.ಜಿಲ್ಲೆಯ ಯುವಜನ -ಕಾರ್ಮಿಕ ಸಂಘಟನೆಗಳು ಸೇರಿದಂತೆ ಎಡಪಕ್ಷಗಳ ಉನ್ನತ ಮಟ್ಟದ ನಿಯೋಗವು ಮಂಗಳೂರು ನಗರ ಪೋಲಿಸ್ ಆಯುಕ್ತರನ್ನು ಭೇಟಿಯಾಗಿ ಕೂಡಲೇ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಸರಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳಲ್ಲಿ ಪ್ರಮುಖ ಅಂಶವಾದ ಮಾಸ್ಕ್ ಧರಿಸದೆ ನಗರದ ಸೂಪರ್ ಮಾರ್ಕೆಟ್‌ನೊಳಗೆ ತೆರಳಿ ಅಲ್ಲಿಯ ಸಿಬ್ಬಂದಿ ಮಾಸ್ಕ್ ಧರಿಸಲು ಹೇಳಿದಾಗ ನಿರಾಕರಿಸಿ ವಾಗ್ವಾದ ನಡೆಸಿದ ಕಾರಣಕ್ಕೆ ನಗರದ ಖ್ಯಾತ ವೈದ್ಯ, ಕೊರೊನಾ ಬಗ್ಗೆ ನಿಖರ ಹಾಗೂ ಸ್ಪಷ್ಟವಾಗಿ ವಿಶ್ಲೇಷಿಸಬಲ್ಲ ವೈರಲಾಜಿಸ್ಟ್ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ ವಿರುದ್ಧ ಕದ್ರಿ ಠಾಣೆಯಲ್ಲಿ ದೂರು ದಾಖಲಾತ್ತು.

ಡಾ. ಶ್ರೀನಿವಾಸ ಕಕ್ಕಿಲ್ಲಾಯ
ಮೇ 19ರಂದು ಕದ್ರಿಯ ಜಿಮ್ಮಿ ಸೂಪರ್ ಮಾರ್ಕೆಟ್‌ಗೆ ತೆರಳಿದ್ದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಾಸ್ಕ್ ಧರಿಸಿರಲಿಲ್ಲ. ಮಾತ್ರವಲ್ಲದೇ ಮಾಸ್ಕ್ ಧರಿಸಿ ಒಳ ಬರುವಂತೆ ಮಾರ್ಕೇಟ್ ಸಿಬ್ಬಂದಿಗಳು ತಿಳಿಸಿದಾಗ ತಾನು ಮಾಸ್ಕ್ ಧರಿಸುವುದಿಲ್ಲ ಎಂದು ವಾಗ್ವಾದಕ್ಕೆ ಇಳಿದಿದ್ದರು ಎಂದು ಕದ್ರಿಯ ಜಿಮ್ಮಿ ಸೂಪರ್ ಮಾರ್ಕೆಟ್ ಪಾಲುದಾರ ರೇನ್ ರೊಸಾರಿಯೋ ಅಂದು ಕದ್ರಿ ಠಾಣೆಗೆ ದೂರು ನೀಡಿದ್ದರು.
ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ಸರಕಾರ ಮಾರ್ಗಸೂಚಿಯನ್ನು ಡಾ. ಕಕ್ಕಿಲ್ಲಾಯ ಅವರು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅವರು ದೂರಿನಲ್ಲಿ ತಿಳಿಸಿದ್ದರು ಎನ್ನಲಾಗಿದೆ.
ಮಾಸ್ಕ್ ಧರಿಸದೆ ಸರಕಾರ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಡಾ. ಕಕ್ಕಿಲ್ಲಾಯ ಅವರಿಗೆ ವಿಚಾರಣೆಗೆ ಹಾಜಾರಾಗುವಂತೆ ಪೊಲೀಸರು ಅಂದೇ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅದೇ ದಿನ ಸಂಜೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಾಸ್ಕ್ ಧರಿಸಿಕೊಂಡು ಕದ್ರಿ ಠಾಣೆಗೆ ಹಾಜಾರಾಗಿದ್ದರು.
ಪ್ರಕರಣಕ್ಕೆ ಟ್ವಿಸ್ಟ್ :
ಆದರೆ ಸುಪರ್ ಮಾರ್ಕೇಟ್ ನಲ್ಲಿ ನಡೆದ ಮಾತುಕತೆಯ ಸಿಸಿ ಟಿವಿಯ ತುಣುಕನ್ನು ಜಿಮ್ಮಿ ಸೂಪರ್ ಮಾರ್ಕೆಟ್ ನ ಮಾಲ್ಹಕರು ಜಲತಾಣಗಳಲ್ಲಿ ಹರಿಯಬಿಟ್ಟು ಓರ್ವ ಖ್ಯಾತ ವೈದ್ಯರ ತೇಜೋವಧೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕಒಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.
ಆದರೆ ಈ ಪ್ರಕರಣದ ಬಗ್ಗೆ ಕದ್ರಿ ಪೋಲಿಸ್ ಠಾಣೆಯ ಅಧಿಕಾರಿಗಳು ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೋಲಿಸ್ ಆಯುಕ್ತರನ್ನು ಭೇಟಿಯಾಗಿರುವ ನೊಯೋಗವು ಕೂಡಲೇ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದೆ.
Comments are closed.