ಕರಾವಳಿ

ಕೆಲಸವೂ ಇಲ್ಲ.. ಆದಾಯವೂ ಇಲ್ಲ.. : ಯುವ ಕಾಂಗ್ರೆಸ್‌ನಿಂದ ಬಡ ಕಾರ್ಮಿಕರಿಗೆ ರೇಷನ್ ಕಿಟ್‌ಗಳ ವಿತರಣೆ.

Pinterest LinkedIn Tumblr

ಮಂಗಳೂರು : ಯುವ ಕಾಂಗ್ರೆಸ್ ವತಿಯಿಂದ ನಗರದ ಹೊಯಿಗೆ ಬಜಾರ್‌ನಲ್ಲಿ ವಾಸಿಸುತ್ತಿರುವ ಬಡ ಕಾರ್ಮಿಕ ವರ್ಗದ ಜನರಿಗೆ ರೇಷನ್ ಕಿಟ್ ಗಳನ್ನು ವಿತರಿಸಲಾಯಿತು.

ಯುವ ಕಾಂಗ್ರೆಸ್ ಮಂಗಳೂರು ದಕ್ಷಿಣ ಕ್ಷೇತ್ರ ಉಪಾಧ್ಯಕ್ಷ ಎಸ್.ಕೆ. ಸವಾನ್ ಜೆಪ್ಪು ಇವರ ಸಹಕಾರದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಮಾತನಾಡುತ್ತಾ, ಕೋವಿಡ್ ಲಾಕ್ ಡೌನ್ ನಿಂದ ಕಾರ್ಮಿಕರಿಗೆ ಕೆಲಸ ಇಲ್ಲ. ಆದಾಯವೂ ಇಲ್ಲ. ಇಂತಹ ಸಂದಿಗ್ದ ಸಮಯದಲ್ಲಿ ಜೀವನ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಬಡವರ ಪರವಾಗಿ ಕೆಲಸ ಮಾಡುತ್ತದೆ.

ಮದ್ಯಾಹ್ನದ ವೇಳೆಯಲ್ಲಿ ನಿರ್ಗತಿಕರಿಗೆ, ನಿರಾಶ್ರಿತರಿಗೆ ಭೋಜನ ವ್ಯವಸ್ಥೆಯನ್ನು ಕಾಂಗ್ರೆಸ್ ಪಕ್ಷ ಮಾಡುತ್ತಾ ಬಂದಿದೆ. ಅದಲ್ಲದೇ ಬಡವರಿಗೆ ದಿನ ಸಾಮಗ್ರಿಗಳ ಕಿಟ್ ಗಳನ್ನು ನೀಡಿದೆ. ಇದರಿಂದ ಉತ್ತೇಜನರಾದ ಯುವ ಕಾಂಗ್ರೆಸ್ ಮುಖಂಡರಾದ ಎಸ್. ಕೆ. ಸವಾನ್ ರವರು ರೇಷನ್ ಕಿಟ್ ಗಳನ್ನು ಒದಗಿಸುವಂತಹ ಮಹಾನ್ ಕಾರ್ಯವನ್ನು ಕೈಗೊಂಡಿದ್ದಾರೆ. ಅವರು ಮಾಡುತ್ತಿರುವ ಸಮಾಜ ಸೇವೆ ಇತರ ಯುವಕರಿಗೆ ಸ್ಫೂರ್ತಿಯಾಗಲಿ ಎಂದರು.

ಕಾರ್ಯಕ್ರಮ ಆಯೋಜಿಸಿದ ಎಸ್. ಕೆ. ಸವಾನ್ ಮಾತನಾಡಿ, ಕೋವಿಡ್ ಸಂದಿಗ್ದ ಸಂದರ್ಭದಲ್ಲಿ ಜನರು ಬಹಳಷ್ಟು ನೊಂದಿದ್ದಾರೆ. ಅವರಿಗೆ ಕಿಂಚಿತ್ ಸಹಾಯ ಮಾಡಬೇಕೆಂಬ ಇರಾದೆ ನನಗಿದೆ. ಕಾರ್ಮಿಕರು ಶ್ರಮಜೀವಿಗಳು. ಅವರ ಕಷ್ಟ ನನಗೆ ಗೊತ್ತಿದೆ. ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರ ಜನಸೇವೆಯೇ ನನಗೆ ಸ್ಫೂರ್ತಿ ಎಂದರು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ಹೊನ್ನಯ್ಯ, ಟಿ. ಕೆ. ಸುಧೀರ್, ನೀರಜ್ ಪಾಲ್, ರಮಾನಂದ ಪೂಜಾರಿ,ದುರ್ಗಾಪ್ರಸಾದ್, ಉದಯ್ ಕುಂದರ್, ಆಸೀಫ್ ಜೆಪ್ಪು, ಸಾಜಿದ್, ಯಾಸ್ವಂತ್ ಪ್ರಭು, ಕೌಶಿಕ್, ನೌಫಾಲ್, ಹುಕ್ಕಾಸ್ ಮೊದಲಾದವರು ಉಪಸ್ಥಿತರಿದ್ದರು.

Comments are closed.