ಕರಾವಳಿ

ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ನೊಂದವರಿಗೆ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್‌ಗಳ ವಿತರಣೆ

Pinterest LinkedIn Tumblr

ಮಂಗಳೂರು : ಅತ್ತಾವರ ವಾರ್ಡ್ ವ್ಯಾಪ್ತಿಯ ಬಾಬುಗುಡ್ಡೆಯಲ್ಲಿ ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ನೊಂದವರಿಗೆ ಜಿಲ್ಲಾ ಕಾಂಗ್ರೆಸ್ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜೆ. ಆರ್. ಲೋಬೊರವರು ಇಂದು ತಾ 3.6.2021ರಂದು ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಲಾಕ್ ಡೌನ್ ನಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಕೆಲಸವಿಲ್ಲದೇ ತೀವ್ರ ತೊಂದರೆಯನ್ನು ಅನುಭವಿಸಿದ್ದಾರೆ. ಜೀವನವನ್ನು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಇದನ್ನು ಅರಿತು ಕಾಂಗ್ರೆಸ್ ಪಕ್ಷವು ಇಂದು ಜನರ ಸಹಾಯಕ್ಕೆ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ಹೊನ್ನಯ್ಯ, ವಾರ್ಡ್ ಅಧ್ಯಕ್ಷ ಜಯಂತ್ ಪೂಜಾರಿ, ಮಾಜಿ ಕಾರ್ಪೊರೇಟರ್ ಶೈಲಜಾ, ವಿಜಯಲಕ್ಷ್ಮಿ, ಪಕ್ಷದ ಪ್ರಮುಖರಾದ ಟಿ. ಕೆ.ಸುಧೀರ್, ನೀರಜ್ ಪಾಲ್, ಕೀರ್ತಿ ರಾಜ್, ಭಾಸ್ಕರ್, ಚಂದ್ರಶೇಖರ, ಆಸೀಫ್ ಜೆಪ್ಪು, ಉದಯ ಕುಂದರ್, ಕೃತಿನ್ ಕುಮಾರ್, ವಿದ್ಯಾ ಸುನಿಲ್ ಫ್ರಾನ್ಸಿಸ್, ಯಸ್ವಂತ್ ಪ್ರಭು, ಲಕ್ಷ್ಮಣ ಶೆಟ್ಟಿ,ಅಶೋಕ್, ಶಾನ್ ಡಿಸೋಜಾ, ಯೋಗೀಶ್ ನಾಯಕ್, ಅಜಿತ್ ಮೊದಲಾದವರು ಉಪಸ್ಥಿತರಿದ್ದರು.

Comments are closed.