ಕರಾವಳಿ

ಹೊರ ರಾಜ್ಯ,ಹೊರ ದೇಶಗಳಿಗೆ ತೆರಳುವ ವಿಧ್ಯಾರ್ಥಿಗಳಿಗೆ ತಕ್ಷಣ ವ್ಯಾಕ್ಸೀನ್ ನೀಡುವಂತೆ ಯುವಮೋರ್ಚಾ ಮನವಿ

Pinterest LinkedIn Tumblr

ಮಂಗಳೂರು, ಜೂನ್.03: ಕಾಲೇಜು ವಿದ್ಯಾರ್ಥಿಗಳು ಹೊರ ರಾಜ್ಯ,ಹೊರ ದೇಶಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕ್ಕಾಗಿ ತೆರಳುವವರು, ಅಥವಾ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಉದ್ಯೋಗ ನಿಮಿತ್ತ ತೆರಳುವವರು,ಸೈನ್ಯದಲ್ಲಿದ್ದು ರಜೆ ಕಳೆದು ಪುನಃ ಕರ್ತವ್ಯಕ್ಕೆ ತೆರಳುವವರು ಇವರುಗಳಿಗೆ ವ್ಯಾಕ್ಸೀನ್ ಮಾಡಿಸಿ ಕೊಳ್ಳದಿದ್ದಲ್ಲಿ ಎಲ್ಲೂ ಹೋಗಲು ಅವಕಾಶ ಇರುವುದಿಲ್ಲ.

ಆದುದರಿಂದ ಅಂತಹವರಿಗೆ ವ್ಯಾಕ್ಸಿನೇಷನ್ ನೀಡುವಾಗ ಆದ್ಯತೆ ನೀಡಿ ಬೇಕಾಗಿರುತ್ತದೆ ಈ ಬಗ್ಗೆ ಕ್ರಮ ಕೈಗೊಂಡಲ್ಲಿ ಅಂತಹವರಿಗೆ ಜೀವನದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲು ಅವಕಾಶ ನೀಡಿದಂತೆ ಆಗುತ್ತದೆ.

ಅದಕ್ಕಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ರಾದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ವಿಶೇಷ ಪ್ರಯತ್ನ ಮಾಡಬೇಕೆಂದು ಆಗ್ರಹಿಸಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ದ ಬಿಜೆಪಿ ಯುವಮೋರ್ಚಾ ತಂಡವು ಮನವಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ರಾಜ್ ರೈ,ಉಪಧ್ಯಕ್ಷ ಮೌನಿಷ್ ಚೌಟ,ಜಯರಾಜ್ ಶೆಟ್ಟಿ,ದೀಕ್ಷಿತ್, ಪ್ರಜಯ್, ಸಚಿನ್ ಬಜ್ಜೋಡಿ ಉಪಸ್ಥಿತರಿದ್ದರು.

Comments are closed.