ಕರಾವಳಿ

ತಂದೆಯ ಹುಟ್ಟುಹಬ್ಬವನ್ನು ಬಡ ಕುಟುಂಬಕ್ಕೆ ದಿನಸಿ ಸಾಮಗ್ರಿ ನೀಡಿ ಆಚರಸಿದ ಉಳ್ಳಾಲದ ರಶ್ಮಿ

Pinterest LinkedIn Tumblr

ಸೇವೆಯಿಂದ ಸಾರ್ಥಕತೆ : ಶ್ರೀ ಸಾಯಿ ಪರಿವಾರ್ ಟ್ರಸ್ಟ್ ತೊಕ್ಕೊಟ್ಟು

ಮಂಗಳೂರು / ಉಳ್ಳಾಲ : ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಪರಿಸರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು, 2021 ರಲ್ಲಿ ಹೃಧಯವಂತ ಪ್ರಶಸ್ತಿ ಪುರಸ್ಕೃತೆ ರಶ್ಮಿ ಉಳ್ಳಾಲ. ಇವರ ತಂದೆ ಯು.ಎ.ಪ್ರೇಮನಾಥ ರವರ ಹುಟ್ಟು ಹಬ್ಬವನ್ನು ಶ್ರೀ ಸಾಯಿ ಪರಿವಾರ್ ಗುರುತಿಸಿದ ಅಶಕ್ತ ಕುಟುಂಬಕ್ಕೆ ದಿನಸಿ ಸಾಮಗ್ರಿ* ನೀಡುವುದರ ಮೂಲಕ ಆಚರಿಸಿ ಮಾದರಿಯಾದಳು.

ಕಳೆದ ವರ್ಷ ಲಾಕ್ ಡೌನ್ ನಲ್ಲಿ ಸಾಯಿ ಪರಿವಾರ್ ನಿರ್ಗತಿಕರ, ಅಶಕ್ತರಿಗೆ ಅನ್ನದಾನದ ಸೇವೆಯಲ್ಲಿ ಪಾಲ್ಗೊಂಡಿರುತ್ತಾರೆ.

ಎಳವೆಯ ಪ್ರಾಯದಲ್ಲಿ ಸಾಯಿ ಪರಿವಾರ್ ನ ಜತೆಗೂಡಿ ಅಶಕ್ತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಾನವೀಯ ಕಳಕಳಿ ಹೃಧಯದ ತಮಗೆ ಇನ್ನಷ್ಟು ದಾನ ಮಾಡುವ ಭಾಗ್ಯ ಬಾಬರು ಕರುಣಿಸಲಿ ಎಂದು ಶ್ರೀ ಸಾಯಿ ಪರಿವಾರ್ ಸಂಘಟಕರು ಹಾರೈಸಿದ್ದಾರೆ.

ಸೇವೆಯಲ್ಲಿ ರಶ್ಮಿ ಉಳ್ಳಾಲ, ಪ್ರವೀಣ್ ಎಸ್ ಕುಂಪಲ, ಪುರುಷೋತ್ತಮ ಕಲ್ಲಾಪು, ದೀಕ್ಷಿತ್ ಪೂಜಾರಿ, ಸೂರ್ಯ ಕುಂಪಲ, ಶವಿತ್ ಉಚ್ಚಿಲ, ಸಾಗರ್ ಪಾವೂರು, ಕೌಶಿಕ್ ಸೇವಂತಿಗುಡ್ಡೆ, ಉದಯ ,ಸಂಪತ್ ದರ್ಮನಗರ ಇದ್ದರು.

Comments are closed.