ಕರಾವಳಿ

ಡಾ.ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್‌ನಿಂದ 3 ಸಾವಿರ ಕುಟುಂಬಗಳಿಗೆ ಅಕ್ಕಿ ವಿತರಣೆ

Pinterest LinkedIn Tumblr

ಮಂಗಳೂರು / ಉಳ್ಳಾಲ : ಲೋಕದಲ್ಲಿ ಜೀವಿಸುವ ಮನುಷ್ಯರ ಸಹಿತ ಪ್ರತಿ ಜೀವಿಯ ಮೇಲೆ‌ ಕರುಣೆ ತೋರಿ ಎನ್ನುವ ಪ್ರವಾದಿ(ಸ.ಅ)ರ ಸಂದೇಶ ಪಾಲನೆ ಮುಸ್ಲಿಮನ ಜವಾಬ್ದಾರಿಯಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದ ಸನ್ನಿವೇಶದಲ್ಲಿ ಜೀವ ಉಳಿಸಲು ಅಕ್ಕಿ ಕಿಟ್ ಸಷ್ಣದೊಂದದು ಕೊಡುಗೆ ಎಂದು ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ರಹ್ಮಾನ್ ದಾರಿಮಿ ಅಭಿಪ್ರಾಯಪಟ್ಟರು.

ಡಾ.ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇರಳಕಟ್ಟೆ ಸರ್ಕಾರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮೂರು ಸಾವಿರ ಕುಟುಂಬಗಳಿಗೆ ಅಕ್ಕಿ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ದೇಶದಲ್ಲಿ 130 ಕೋಟಿ‌ ಜನಸಂಖ್ಯೆ ಇದ್ದು ಎಲ್ಲರಿಗೂ ಸಹಾಯ ಮಾಡುವು ಸರ್ಕಾರಕ್ಕೆ ಸುಲಭದ ಮಾತಲ್ಲ. ಇಂತಹ ಸನ್ನಿವೇಶದಲ್ಲಿ ದಾನಿಗಳು, ಸಂಘ-ಸಂಸ್ಥೆಗಳು ಜನರ ನೆರವಿಗೆ ಮುಂದಾಗುವ ಜೊತೆ ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಹೇಳಿದರು‌.

ಬೋಳಾ ನರಿಂಗಾನ ಚಚ್೯ ಧರ್ಮಗುರು ಫಾದರ್ ಮೈಕಲ್ ಮಾತನಾಡಿ,‌ ಕರೊನಾ ಶರೀರಕ್ಕೆ ದಾಳಿ ಮಾಡದರೂ ಮನುಷ್ಯತ್ವದ ಮೇಲೆ ದಾಳಿ ಮಾಡಬಾರದು ಎಂದರು.

ರಾಜ್ಯ ಅಲೆಮಾರಿ-ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕೊಣಾಜೆ ಪೋಲಿಸ್ ಠಾಣೆಯ ನಿರೀಕ್ಷಕ ಮಲ್ಲಿಕಾರ್ಜುನ, ರೆಂಜಾಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಸಮಿತಿ ಅಧ್ಯಕ್ಷ ಜಗದೀಶ್ ರೈ, ಬೆಳ್ಮ ಗ್ರಾ.ಪಂ ಆಧ್ಯಕ್ಷ ಬಿ.ಎಂ
ಅಬ್ದುಲ್‌ ಸತ್ತಾರ್, ಎಸ್ ಕೆಎಸ್ಸೆಸ್ಸಫ್ ಉಳ್ಳಾಲ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ದಾರಿಮಿ, ದೇರಳಕಟ್ಟೆ ಬದ್ರಿಯ ಜುಮಾ‌ ಮಸೀದಿಯ ಅಧ್ಯಕ್ಷ ಅಬೂಬಕ್ಕರ್, ಕಾರ್ಯದರ್ಶಿ ಆರ್.ಅಹ್ಮದ್ ಶೇಟ್, ಗ್ರಾ.ಪಂ. ಸದಸ್ಯರಾದ ಎಂ.ಎ. ಅಬ್ದುಲ್ಲಾ ರೆಂಜಾಡಿ, ಇಬ್ರಾಹಿಂ ಬದ್ಯಾರ್, ಹನೀಫ್ ಬದ್ಯಾರ್, ಸತ್ತಾರ್ ರೆಂಜಾಡಿ, ಇಕ್ಬಾಲ್ ಎಚ್.ಆರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯೀಲ್ ಪನೀರ್, ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಪುಷ್ಟಿ ಡಿ.ಎಂ.ಮುಹಮ್ಮದ್, ಹಿದಾಯಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಶ್ರಫ್ ಡಿ.ಎಂ., ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಬ್ದುಲ್ ಖಾದರ್ ಐ, ಹಮೀದ್ ಮೂನ್ನೂರು, ರವಿರಾಜ್ ಶೆಟ್ಟಿ, ರಮೀಝ್ ಮೀಝಾ, ಹರ್ಷದ್ ಮಂಗಳಪೇಟೆ ಮೊದಲಾದವರು ಉಪಸ್ಥಿತರಿದರು.

ಇಕ್ಬಾಲ್ ಎಚ್.ಆರ್ ಸ್ವಾಗತಿದರು. ನೌಫಲ್ ಬಿ ವಂದಿಸಿದರು. ಶಫೀರ್ ಕಾರ್ಯಕ್ರಮ ನಿರೂಪಿಸಿದರು‌.

Comments are closed.