ಕರಾವಳಿ

ಜ್ಯೋತಿಷಿ ದಿ.ನರಸಿಂಹ ಮಯ್ಯ ಅವರ ಧರ್ಮಪತ್ನಿ ವಿಶಾಲಾಕ್ಷೀ ಮಯ್ಯ ವಿಧಿವಶ

Pinterest LinkedIn Tumblr

ಮಂಗಳೂರು / ಪುತ್ತೂರು: ತಿಂಗಳಾಡಿ ಎಲಿಯ ನಿವಾಸಿ ಜ್ಯೋತಿಷಿ, ಶಾಸ್ತ್ರಸಿದ್ಧ ಶ್ರೀಕೃಷ್ಣ ಪಂಚಾಂಗದಲ್ಲಿ ದ್ವಾದಶ ರಾಶಿಯವರ ಗೋಚರಫಲ ಬರೆಯುತ್ತಿದ್ದ ದಿ.ನರಸಿಂಹ ಮಯ್ಯ ಅವರ ಧರ್ಮಪತ್ನಿ ವಿಶಾಲಾಕ್ಷೀ ಮಯ್ಯ (81) ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ಪುತ್ರರಾದ ಪುತ್ತೂರಿನ ಕುಂಬ್ರದ ಪೆಟ್ರೋಲ್ ಪಂಪು ಮಾಲಿಕ ಲಕ್ಷ್ಮೀ ನಾರಾಯಣ ಮಯ್ಯ, ಮಂಗಳೂರಿನ ಸಿವಿಎಲ್ ಎಂಜಿನಿಯರ್, ಮಯ್ಯ ಕನ್‌ಸ್ಟ್ರಕ್ಷನ್‌ನ ವಸಂತ ಮಯ್ಯ, ಪುತ್ರಿಯರಾದ ಪಣಂಬೂರು ನಿವಾಸಿ ಯಶೋಧಾ ಐತಾಳ್, ಮಟ್ಟು ನಿವಾಸಿ ಶ್ಯಾಮಲ ಮತ್ತು ಕಾರ್ಕಳದ ನಿವಾಸಿ ವಸಂತಿ ಅವರನ್ನು ಆಗಲಿದ್ದಾರೆ

Comments are closed.