ಕರಾವಳಿ

ಸರ್ಕಾರದ ಆದೇಶ ಉಲ್ಲಂಘನೆ : ಹಲವೆಡೆಗಳಲ್ಲಿ ಅಂಗಡಿ-ಮಳಿಗೆಗಳ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ಮಂಗಳೂರು, ಮೇ 26 : ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಮಾನ್ಯ ಉಚ್ಛ ನ್ಯಾಯಾಲಯದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಸಲುವಾಗಿ ಜಿಲ್ಲೆಯಾದ್ಯಂತ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದು ಎಂಬ ಆದೇಶವಿದ್ದರೂಕೂಡ ಕೆಲವೊಂದು ಕಡೆಗಳಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದ ಪ್ರಕರಣ ಕಂಡು ಬಂದಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೇ 1 ರಂದುಸಂಜೆ 4.30 ರಲ್ಲಿ ನಗರದ ಅತಿಕಾರಿಬೆಟ್ಟು ಗ್ರಾಮದ ಮೈಲೊಟ್ಟು ಎಂಬಲ್ಲಿ ಪ್ರೇಮಲತಾಎಂಬುವರು ಪ್ರಕೃತಿ ಫ್ಯಾನ್ಸಿ ಸ್ಟೇಷನರಿ ಮತ್ತು ಟೈಲರಿಂಗ್ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುವುದು ಕಂಡುಬಂದಿದ್ದು ಹಾಗೂ ಮೇ 2 ರಂದು ಸಂಜೆ 5.30 ರಲ್ಲಿ ಮಂಗಳೂರು ತಾಲೂಕಿನಕಿಲ್ಪಾಡಿಗ್ರಾಮದಅಂಗರಗುಡ್ಡೆಯಲ್ಲಿ ಶಾಲಿಸಿ ಎಂಬುವರು ದಿನಸಿ ಅಂಗಡಿಯನ್ನುತರೆದು ವ್ಯಾಪಾರ ಮಾಡುತ್ತಿರುವುದುಹಾಗೂ ನಗರದ ಐಕಳ ಗ್ರಾಮದಕಾಂತಾಬಾರೆ ಬೂದಾಬರೆದ್ವಾರದ ಬಳಿ ರಮೇಶ್‍ಅಮೀನ್‍ಎಂಬುವರು ಶ್ರೀ ದೇವಿ ಜನರಲ್ ಸ್ಟೋರ್ ಮತ್ತು ಮೆನ್ನಬೆಟ್ಟುಗ್ರಾಮದಕಮ್ಮಾಜೆ ನೇಕಾರ ಕಾಲನಿ ಎಂಬಲ್ಲಿ ಶ್ರೀ ದುರ್ಗಾಜನರಲ್ ಸ್ಟೋರ್‍ಅಂಗಡಿಯನ್ನುತೆರೆದು ವ್ಯಾಪಾರ ಮಾಡುತ್ತಿದ್ದುಕಂಡುಬಂದಿದ್ದ ಹಿನ್ನೆಲೆ, ಮೇ 4 ರಂದು ಬೆಳಿಗ್ಗೆ 9.15 ಕ್ಕೆ ಮಂಗಳೂರು ತಾಲೂಕಿನ ಬಪ್ಪನಾಡುಗ್ರಾಮದ ಮುಲ್ಕಿ ಬಸ್ ನಿಲ್ದಾಣದ ಬಳಿ ಸುಂದರಮೂರ್ತಿ ಎಂಬುವರುಫುಟ್‍ವೇರ್ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿರುವುದುಕಂಡುಬಂದಿದ್ದು, ಮೇ 5 ರಂದು ಸಂಜೆ 4.15 ಕ್ಕೆ ಮಂಗಳೂರಿನ ಕೂರ್ನಾಡುಗ್ರಾಮದ ಶತಾಬ್ದಿ ಭವನದ ಬಿಲ್ಡಿಂಗ್‍ನಲ್ಲಿರುವಪ್ರದೀಪ್ ಡಿ’ಸೋಜಾಎಂಬುವರುಸೋಜಾಎಲೆಕ್ಟ್ರಿಕಲ್ಸ್ ಎಂಬ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದುಕಂಡುಬಂದ ಹಿನ್ನೆಲೆ,ಮೇ 7 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ಕಾರ್ನಾಡುದರ್ಗಾರೋಡ್ ಬಳಿ ಇರುವ ಸ್ಟಾರ್‍ಚಿಕನ್ ಸ್ಟಾಲ್‍ನ್ನು ಹಮೀದ್‍ಎಂಬುವರು ತೆರೆದು ವ್ಯಾಪಾರ ಮಾಡಿದ ಹಿನ್ನೆಲೆ,ಮೇ 9 ರಂದು ಸುಮಾರು ಬೆಳಿಗ್ಗೆ 10.30 ಕ್ಕೆ ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಬಸ್ಸು ನಿಲ್ದಾಣದ ಬಳಿ ಕೆ. ಎಂ.ಅಷ್ರಫ್‍ಎಂಬುವರುಸೂಪರ್ ಬಜಾರ್‍ಅಂಗಡಿಯನ್ನುತೆರೆದು ವ್ಯಾಪಾರ ವಹಿವಾಟು ನಡೆಸಿದ ಹಿನ್ನೆಲೆ, ಮುಲ್ಕಿ ಪೊಲೀಸ್ ಠಾಣಾಧಿಕಾರಿಗಳು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Comments are closed.