ಕರಾವಳಿ

ನನ್ನ ತಾಯಿ ಕೋವಿಡ್‌ನಿಂದ ತೀರಿಕೊಂಡಿದ್ದಾರೆ : ದಯವಿಟ್ಟು ಅವರ ಮೊಬೈಲ್ ಹುಡುಕಿಕೊಡಿ – ಮಗಳ ಮನಕಲಕುವ ಮನವಿ- ವೈರಲ್

Pinterest LinkedIn Tumblr

ಮಂಗಳೂರು/ ಮಡಿಕೇರಿ : ನಾನು ಹಾಗು ನನ್ನ ತಂದೆ ಕ್ವಾರಂಟೈನ್ ನಲ್ಲಿ ಇದ್ದೆ ಸಮಯ ನನ್ನ ತಾಯಿ ಕೋವಿಡ್ ನಿಂದ ತೀರಿಕೊಂಡಿದ್ದಾರೆ. ಆ ಸಮಯದಲ್ಲಿ ಯಾರೋ ಅವರ ಬಳಿ ಇದ್ದ ಮೊಬೈಲ್ ತೆಗೆದುಕೊಂಡಿದ್ದಾರೆ ಅದರಲ್ಲಿ ನನ್ನ ತಾಯಿಯ ನೆನಪುಗಳಿವೆ ದಯವಿಟ್ಟು ಹುಡುಕಿಕೊಡಿ -ಇಂತಿ ತಾಯಿಯನ್ನು ಕಳೆದುಕೊಂಡ ನತದೃಷ್ಟೆ -ಹೃತಿಕ್ಷ

ಎಂಬ ಕರ್ನಾಟಕ ಡಿಜಿಪಿ ಹಾಗೂ ಮಡಿಕೇರಿ ಜಿಲಾಧಿಕಾರಿ ಮತ್ತು ಶಾಸಕರಿಗೆ ಯುವತಿಯೊಬ್ಬಳು ಬರೆದಿರುವ ಮನಕಲುಕುವ ಪತ್ರವೊಂದು ಜಲತಾಣದಲ್ಲಿ ವೈರಲ್ ಆಗಿದೆ.

ಘಟನೆ ವಿವರ :

ಮೇ16 ರಂದು ಕೋವಿಡ್ ಸೋಂಕಿನಿಂದ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ನಿವಾಸಿ ನವೀನ್ ಅವರ ಪತ್ನಿ ಪ್ರಭಾ(45) ಎಂಬುವವರು ಮಡಿಕೇರಿ ಆಸ್ಪತ್ರೆಯಲ್ಲಿ ಮರಣ ಹೊಂದಿದರು. ಕುಟುಂಬದ ಸದಸ್ಯರಿಗೆ ಆಸ್ಪತ್ರೆ ಮೃತದೇಹವನ್ನು ನೀಡಿತು, ಆದರೆ ಪ್ರಭಾ ಅವರ ಬಳಿ ಇದ್ದ ಮೊಬೈಲ್ ಫೋನ್ ಮಾತ್ರ ನಾಪತ್ತೆಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಸಿಬ್ಬಂದಿಗಳು ನಿರ್ಲಕ್ಷ್ಯದ ಉತ್ತರ ನೀಡುತ್ತಿದ್ದರು ಎನ್ನಲಾಗಿದೆ.

ಆರು ದಿನ ಕಳೆದರೂ ಅಮ್ಮನ ಮೊಬೈಲ್ ಫೋನ್ ಸಿಗದೆ ಮನನೊಂದ ಪುತ್ರಿ, 5ನೇ ತರಗತಿ ವಿದ್ಯಾರ್ಥಿನಿಯಾಗಿರುವ ಹೃತಿಕ್ಷಾ “ಸುಮಾರು 15 ದಿನಗಳ ಹಿಂದೆ ನಾನು ಮತ್ತು ಅಪ್ಪ, ಅಮ್ಮ ಕೋವಿಡ್‍ಗೆ ತುತ್ತಾಗಿದ್ದು, ತಾಯಿಯವರು ಸೋಂಕು ಉಲ್ಬಣಗೊಂಡು ಮಡಿಕೇರಿ ಆಸ್ಪತ್ರೆಗೆ ದಾಖಲಾದರು. ನಾನು ಮತ್ತು ಅಪ್ಪ ಹೋಂ ಕ್ವಾರಂಟೈನ್ ಆಗಿದ್ದು, ಹೊರಗೆ ಬರಲಾಗದ ಪರಿಸ್ಥಿತಿಯಲ್ಲಿದ್ದೆವು. ಅಪ್ಪ ದಿನಗೂಲಿ ನೌಕರರಾಗಿದ್ದು, ಅಕ್ಕಪಕ್ಕದವರ ನೆರವಿನಿಂದ ಈ ದಿನಗಳನ್ನು ಕಳೆದೆವು.

ದಿನಾಂಕ 16/05/21 ರಂದು ತಾಯಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು. ಅವರ ಬಳಿ ಇದ್ದ ಮೊಬೈಲ್ ಫೋನ್‍ನ್ನು ಯಾರೋ ತೆಗೆದುಕೊಂಡಿರುತ್ತಾರೆ. ನಾನು ತಬ್ಬಲಿಯಾಗಿದ್ದು, ನನ್ನ ತಾಯಿಯ ನೆನಪುಗಳು ಆ ಮೊಬೈಲ್‍ನಲ್ಲಿ ಇರುತ್ತದೆ. ಆದ್ದರಿಂದ ಯಾರಾದರು ತೆಗೆದುಕೊಂಡಿದ್ದರೆ ಅಥವಾ ಸಿಕ್ಕಿದ್ದರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲುಪಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇನೆ.

: ತಾಯಿಯನ್ನು ಕಳೆದುಕೊಂಡ ನತದೃಷ್ಟೆ ಹೃತಿಕ್ಷ

ಎಂದು ಕರ್ನಾಟಕ ಡಿಜಿಪಿ ಹಾಗೂ ಮಡಿಕೇರಿ ಜಿಲಾಧಿಕಾರಿ, ಶಾಸಕರಿಗೆ ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಮನಕಲಕುವ ಬಹಿರಂಗ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾಳೆ.

ಮಾತ್ರವಲ್ಲದೇ ಮೊಬೈಲ್ ಫೋನ್‍ನಲ್ಲಿ ತನ್ನ ಆನ್‍ಲೈನ್ ಕ್ಲಾಸ್‍ಗೆ ಸಂಬಂಧಿಸಿದ ಮಾಹಿತಿಗಳಿವೆ ಎಂದು ಮೌಖಿಕವಾಗಿ ತಿಳಿಸಿದ್ದಾಳೆ. ಬಾಲಕಿಯ ಈ ಪತ್ರದಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮೊಬೈಲ್ ಫೋನ್ ಹುಡುಕಿಸಿಕೊಡುವ ಭರವಸೆ ನೀಡಿದೆ ಎಂದು ವರದಿಯಾಗಿದೆ.

Comments are closed.