ಕರಾವಳಿ

ದ.ಕ.ಜಿಲ್ಲೆಗೆ ನಿಯಮಿತ ಕೋವ್ಯಾಕ್ಸಿನ್ ಆಗಮನ : ಫಲಾನುಭವಿಗಳು 2ನೇ ಡೋಸ್ ಪಡೆಯಲು ಸೂಚನೆ

Pinterest LinkedIn Tumblr

ಮಂಗಳೂರು, ಮೇ 21 : ಜಿಲ್ಲೆಗೆ ನಿಯಮಿತವಾಗಿ ಕೋವ್ಯಾಕ್ಸಿನ್ ಸರಬರಾಜು ಆಗಿದ್ದು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಆಯ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿತರಿಸಲಾಗಿದೆ.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಸಂದೇಶ ಸಿಕ್ಕಿದ ಫಲಾನುಭವಿಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಪಡೀಲ್, ಬಿಜೈ, ಜೆಪ್ಪು, ಸುರತ್ಕಲ್, ಕುಳಾಯಿ, ಕುಂಜತ್ತ್‍ಬೈಲ್ ಗಳಲ್ಲಿ ದೂರವಾಣಿ ಮೂಲಕ ಕರೆ ಮಾಡಿದ ಫಲಾನುಭವಿಗಳು ಹಾಗೂ ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಪ್ರಥಮ ಡೋಸ್ ಪಡೆದುಕೊಂಡ ಫಲಾನುಭವಿಗಳು 2ನೇ ಡೋಸ್ ಪಡೆಯಲು ಅರ್ಹರಿದ್ದಲ್ಲಿ ತಮ್ಮ ಹತ್ತಿರದ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.