ಕರಾವಳಿ

ಭಾರೀ ಮಳೆಯಿಂದ ನಗರದ ಹಲವೆಡೆ ಮನೆ ಕುಸಿತ: ಸ್ಥಳಕ್ಕೆ ಮೇಯರ್ ಭೇಟಿ- ಪರಿಶೀಲನೆ

Pinterest LinkedIn Tumblr

ಮಂಗಳೂರು : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಕರಾವಳಿ ಭಾಗದಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದು ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ನಿರಂತರ ಸುರಿದ ನಗರದ ಮಳೆಯಿಂದ ಹಲವೆಡೆಗಳಲ್ಲಿ ಹಾನಿಯುಂಟಾಗಿದೆ.

ಮಂಕಿಸ್ಟ್ಯಾಂಡ್, ಪಡೀಲ್, ಬಜಾಲು ಕಾವುಬೈಲ್ ಪ್ರಗತಿನಗರ ಮತ್ತು ಇನ್ನಿತರ ಸ್ಥಳಗಳಲ್ಲಿ ಭೂಕುಸಿತ ಉಂಟಾಗಿ ಹಲವು ಮನೆಗಳಿಗೆ ಹಾನಿ ಹಾಗೂ ತಡೆಗೋಡೆ ಕುಸಿತ ಉಂಟಾಗಿದೆ.

ಮಳೆಯಿಂದ ಸಾವ೯ಜನಿಕರ ಮನೆಗಳಿಗೆ ಹಾನಿಯಾಗಿರುವುದನ್ನು ಮೇಯರ್ ಪ್ರೇಮಾನಂದ ಶೆಟ್ಟಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಾಲಿಕೆಯ ಸದಸ್ಯರಾದ ರೂಪಶ್ರೀ ಪೂಜಾರಿ, ಶೋಭಾ ಪೂಜಾರಿ, ಚಂದ್ರಾವತಿ, ಕಾಯ೯ಪಾಲಕ ಅಭಿಯಂತರರಾದ ರವಿಶಂಕರ್ ಉಪಸ್ಥಿತರಿದ್ದರು.

Comments are closed.