ಕರಾವಳಿ

ಅಡ್ಯಾರ್ ಗ್ರಾಮ ಪಂಚಾಯತ್‌ನಲ್ಲಿ ಶಾಸಕರ ನೇತೃತ್ವದಲ್ಲಿ ಕೋವಿಡ್ ಕಾರ್ಯಪಡೆ (ಟಾಸ್ಕ್ ಫೋರ್ಸ್)ಸಭೆ

Pinterest LinkedIn Tumblr

ಮಂಗಳೂರು: ಅಡ್ಯಾರ್ ಗ್ರಾಮ ಪಂಚಾಯತ್ ನಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ನೇತೃತ್ವದಲ್ಲಿ ಕಾರ್ಯಪಡೆ ಸಭೆಯನ್ನು ನಡೆಸಲಾಯಿತು. ಕೋವಿಡ್ 19ಗೆ ಸಂಬಂಧಿಸಿದಂತೆ ಕಾರ್ಯಪಡೆಯನ್ನು ರಚಿಸಿ,ಆ ಕಾರ್ಯಪಡೆಯ ಸದಸ್ಯರ ಕೆಲಸ ಮತ್ತು ಜವಾಬ್ದಾರಿಗಳ ಬಗ್ಗೆ ಶಾಸಕರು ಸವಿವರವಾಗಿ ತಿಳಿಸಿದರು.

ಈ ಸಭೆಯಲ್ಲಿ ಸದಸ್ಯರು ಮಾಡಬೇಕಾದ ಕೆಲಸಕಾರ್ಯಗಳಾದ ಕೋವಿಡ್ ರೋಗಿಯ ಮನೆಗಳಿಗೆ ಬೇಟಿ ನೀಡುವುದರೋಂದಿಗೆ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುವುದು, ಕೋವಿಡ್ ಪಾಸಿಟಿವ್ ಆದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಬೇರೆ ಕಡೆಗೆ ಹೋಗದಂತೆ ಮನವೊಲಿಸುವ ಕೆಲಸವನ್ನು ಮಾಡಬೇಕೆಂದು ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಹಾಸಿಗೆಯ ಕೊರತೆ ಇರುವುದಿಲ್ಲ ಹಾಗೂ ಯಾವುದೇ ರೋಗಿಗಳು ಹೆದರುವ ಅವಶ್ಯಕತೆ ಇರುವುದಿಲ್ಲ. ಏನಾದರೂ ಸಮಸ್ಯೆ ಇದ್ದರೆ ಸಾರ್ವಜನಿಕರು ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಸಭೆಯಲ್ಲಿ ಶಾಸಕರು ತಿಳಿಸಿದರು.

ಸಭೆಯಲ್ಲಿ ಶಾಸಕರ‌ ಜೊತೆಗೆ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜೀನತ್, ಉಪಾಧ್ಯಕ್ಷರಾದ ಎಮ್ಲಿಡಾ ಪಿಂಟೊ, ಪಂಚಾಯತ್ ಸದಸ್ಯರುಗಳು, ಪಿಡಿಒ ಕೃಷ್ಣ ನಾಯ್ಕ್, ಆರೋಗ್ಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಉಪಸ್ಥಿತರಿದ್ದರು.

Comments are closed.