ಕರಾವಳಿ

ದೂರು ಹಿನ್ನೆಲೆ : ಕೋವಿಡ್ ಲಸಿಕಾ ಕೇಂದ್ರಕ್ಕೆ ಶಾಸಕ ಕಾಮತ್ ನೇತ್ರತ್ವದ ತಂಡ ದಿಢೀರ್ ಭೇಟಿ – ಪರಿಶೀಲನೆ

Pinterest LinkedIn Tumblr

ಮಂಗಳೂರು : ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ವಿವಿಧ ನಗರ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಕುರಿತು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ‌ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಮಾಜಿ ಕಾರ್ಪೋರೇಟರ್ ವಿಜಯ್ ಕುಮಾರ್ ಶೆಟ್ಟಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಕಾಮತ್, ಲಸಿಕಾ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವಿಳಂಬವಾಗುತ್ತಿರುವ ಕುರಿತು ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಯಿತು.

ಈಗಾಗಲೇ ಮೊದಲ ಹಂತದ (first dose) ಪಡೆದಿರುವ 60 ವರ್ಷ,45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಎರಡನೇ ಹಂತದ ಲಸಿಕೆ (2nd dose) ನೀಡಲು ಮೊದಲ ಆದ್ಯತೆ ನೀಡಬೇಕು.

ಆನ್ಲೈನ್ ಮೂಲಕ ಎರಡನೇ ಹಂತದ ಲಸಿಕೆಗಾಗಿ ನೋಂದಾಯಿಸಿರುವ ನಾಗರಿಕರಿಗೆ ಪ್ರಥಮ ಆಧ್ಯತೆ ನೀಡಬೇಕು. ಹಾಗೂ ನೇರವಾಗಿ ವೆನ್ಲಾಕ್ ಅಥವ ಇತರೆ ಆರೋಗ್ಯ ಕೇಂದ್ರಗಳಿಗೆ ಆಗಮಿಸುವ 45 ವರ್ಷ ಮೇಲ್ಪಟ್ಟ/ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಎರಡನೇ ಹಂತದ ಲಸಿಕೆ ನೀಡಬೇಕು.

ಟೋಕನ್ ನೀಡುವ ಕಾರ್ಯ ಆಗಬೇಕು. ಆನ್ಲೈನ್ ನೋಂದಾಯಿತರು ಹಾಗೂ ಎರಡನೇ ಹಂತದ ಲಸಿಕೆಗಾಗಿ ಆರೋಗ್ಯ ಕೇಂದ್ರಗಳಿಗೆ ಆಗಮಿಸುವ ನಾಗರಿಕರಿಗೆ ಎರಡನೇ ಹಂತದ ಲಸಿಕೆ ನೀಡಿದ ಬಳಿಕ ಲಸಿಕೆ ಲಭ್ಯವಾಗಿದ್ದರೆ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಪ್ರಥಮ ಹಂತದ ಲಸಿಕೆ ನೀಡಬಹುದು.

ಬೆಳಗ್ಗೆ ಲಸಿಕೆ ಪಡೆಯಲು ಬರುವ ಸಾರ್ವಜನಿಕರಿಗೆ ಕೂಡಲೇ ಲಸಿಕೆಯ ಲಭ್ಯತೆಯ ಕುರಿತು ಅಥವ ಲಸಿಕೆ ಇಲ್ಲದಿರುವ ಕುರಿತು ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಕಾಯಿಸುವ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದು ಶಾಸಕ ಕಾಮತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಲಸಿಕೆ ಪಡೆಯಲು ಬಂದಿರುವ ಸಾರ್ವಜನಿಕರ ಅಹವಾಲುಗಳನ್ನು ಕೇಳಿ ಸಂಬಂಧ ಪಟ್ಟ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಸದಾಶಿವ ಶಾನುಭೋಗ್, ಸ್ಥಾನೀಯ ವೈಧ್ಯಾಧಿಕಾರಿ,ತಾಲೂಕು ವೈದ್ಯಾಧಿಕಾರಿ ಸುಜಯ್ ಭಂಡಾರಿ,ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ರಮಾಕಾಂತ್, ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹರಿಸಲು‌ ಸೂಚನೆ ನೀಡಿದರು.

Comments are closed.