ಕರಾವಳಿ

ಪಶ್ಚಿಮ ಬಂಗಾಳದಲ್ಲಿನ ದೌರ್ಜನ್ಯ ಮತ್ತು ಭೀಕರ ಹಿಂಸಾಚಾರ ಖಂಡಿಸಿ ಬಿಜೆಪಿಯಿಂದ ಮೌನ ಧರಣಿ

Pinterest LinkedIn Tumblr

ಮಂಗಳೂರು, ಮೇ.05: ಪಶ್ಚಿಮ ಬಂಗಾಳದ ಘಟನೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ಬುಧವಾರ ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಪಕ್ಷದ ಕಚೇರಿ ಮುಂಭಾಗ ಮೌನ ಧರಣಿ ಹಮ್ಮಿಕೊಳ್ಳಲಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕಾರ್ಯಕರ್ತರಿಂದ ಮುಂದುವರಿದ ರಾಜಕೀಯ ದ್ವೇಷದ ಫಲಶ್ರುತಿಯಾಗಿ ನಡೆಯುತ್ತಿರುವಂತಹ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಹತ್ಯೆ, ಮಹಿಳಾ ಕಾರ್ಯಕರ್ತೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರದ ಪ್ರಯತ್ನ, ಬಿಜೆಪಿ ಕಾರ್ಯಾಲಯಗಳಿಗೆ ಬೆಂಕಿ ಇಡುವುದು,ಮನೆ ದ್ವಂಸ ಮುಂತಾದಂತಹ ಭೀಕರ ಹಿಂಸಾಚಾರವನ್ನು ಖಂಡಿಸಿ ಮೇ 5 ರಂದು ರಾಷ್ಟ್ರವ್ಯಾಪಿ ಧರಣಿ ಹಮ್ಮಿಕೊಳ್ಳಲಾಗಿದ್ದು , ಇದರ ಅಂಗವಾಗಿ ಇಂದು ಮಂಗಳೂರಿನಲ್ಲಿ ಕೋವಿಡ್ -19 ಶಿಷ್ಟಾಚಾರಗಳನ್ನು ಪಾಲಿಸಿ ಮೌನ ಪ್ರತಿಭಟನೆಯನ್ನು ನಡೆಸಲಾಯಿತು.

ಈ ವೇಳೆ ಘಟನೆಯನ್ನು ಖಂಡಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ.ಯಂ ಇವರು, ಚುನಾವಣೆ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಜಗತ್ತಿನಾದ್ಯಂತ ಕೋವಿಡ್ ನಿಂದ ಜನರು ಸಾವು ನೋವುಗಳಿಂದ ಕಂಗಾಲಾಗಿರುವ ಈ ಕಾಲಘಟ್ಟದಲ್ಲಿ ಮಮತಾ ಬ್ಯಾನರ್ಜಿಯವರು ಟಿ.ಎಂ.ಸಿ ಕಾರ್ಯಕರ್ತರು ಗೂಂಡಾಗಿರಿ ಪ್ರವೃತ್ತಿಯನ್ನು ನಡೆಸುತ್ತಿವುದು ಖಂಡನೀಯ.

ವಿಜಯೋತ್ಸವ ಸಂದರ್ಭದಲ್ಲಿ ಬಿಜೆಪಿಯ ಕಚೇರಿಯನ್ನು ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದು, ಹಲವಾರು ಕಾರ್ಯಕರ್ತರ ಭೀಕರ ಹತ್ಯೆ ನಡೆಸಿದ್ದುಬಿಜೆಪಿ ಮಹಿಳಾ ಕಾರ್ಯಕರ್ತೆಯರ ಮೇಲೆ ಮಾನಭಂಗಕ್ಕೆಯತ್ನ, ಸಾವಿರಾರು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ, 4000ಕ್ಕೂ ಮಿಕ್ಕಿ ಕಾರ್ಯಕರ್ತರ ಬಿಜೆಪಿ ಮತದಾರರ ಮನೆ, ಅಂಗಡಿಗಳಿಗೆ ಹಾನಿಗೊಳಿಸಿದ್ದನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.

ಈ ಹಿಂದೆ ಅನೇಕ ರಾಜ್ಯಗಳಲ್ಲಿ ಚುನಾವಣೆ ನಡೆದಾಗ ಬಿಜೆಪಿ ಅಧಿಕಾರಕ್ಕೆ ಬಂದು ವಿಜಯೋತ್ಸವದ ಸಂದರ್ಭ ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ದಾಳಿ, ದೌರ್ಜನ್ಯ ನಡೆಸಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇಂದು 77 ಸೀಟುಗಳನ್ನು ಗೆಲ್ಲುವುದರ ಮೂಲ ಪ್ರಭಲ ವಿರೋಧಪಕ್ಷವಾಗಿ ಮೂಡಿಬಂದಿದೆ. ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಏಕೈಕ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಟಿ.ಎಂ.ಸಿ ಯನ್ನು ಬೆಂಬಲಿಸಿದ್ದು ಬಹಿರಂಗಗೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಕೊಲೆಯಾಗಿರುವ ಬಿಜೆಪಿ ಕಾರ್ಯಕರ್ತರ ಕುಟುಂಬಗಳಿಗೆ ಹಾಗೂ ದೌರ್ಜನ್ಯ ಕ್ಕೊಳಗಾದ ಎಲ್ಲರಿಗೂ ಪಶ್ಚಿಮ ಬಂಗಾಳ ಸರಕಾರವು ಸೂಕ್ತ ಪರಿಹಾರವನ್ನು ಒದಗಿಸ ಬೇಕು ಎಂದು ಈ ಮೂಲಕ ಆಗ್ರಹಿಸಿಲಾಗುವುದು ಎಂದು ಸುದರ್ಶನ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಂದ್ರ ಜೆ , ಉಪಾದ್ಯಕ್ಶರಾದ ಶ್ರೀ ರಮೇಶ್ ಕಂಡೆಟ್ಟು, ಮಹಾ ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಶ್ರೀ ದೀಪಕ್ ಪೈ , ಶ್ರೀ ರಮೇಶ್ ಹೆಗ್ಡೆ ,ಶ್ರೀ ಅಜಯ್ ಕುಲಶೇಕರ್ ಮಂಡಲ್ ಕಾರ್ಯದರ್ಶಿಗಳಾದ ಶ್ರೀ ಲಲ್ಲೇಶ್ ಕುಮಾರ್ , ಶ್ರೀ ವಿನೋದ್ ಮೆಂಡನ್ , ಮ ನ ಪಾ ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಪ್ರಕಾಶ್ , ಮ ನ ಪಾ ಸದಸ್ಯರಾದ ಶ್ರೀ ಭಾಸ್ಕರ್ ಚಂದ್ರ ಶೆಟ್ಟಿ, ಶ್ರೀ ಜಗದೀಶ್ ಶೆಟ್ಟಿ, ಶ್ರೀಮತಿ ಪೂರ್ಣಿಮಾ ಎಂ , ಶ್ರೀಮತಿ ಜಯಶ್ರೀ ಕುಡ್ವ, ಎಸ್ ಸಿ ಮೋರ್ಚಾದ ಶ್ರೀ ರಘುವೀರ್ ಸೂಟರ್ ಪೇಟೆ ಮಂಡಲ ಸಾಮಾಜಿಕ ಜಾಲ ತಾಣ ಪ್ರಕೋಷ್ಠದ ಪ್ರಮುಖರಾದ ಶ್ರೀ ಅಶ್ವಿತ್ ಕೊಟ್ಟಾರಿ ,ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಶ್ರೀ ಫೆಡ್ರಿಕ್ , ಯುವ ಮೋರ್ಚಾದ ಶ್ರೀ ಸಚಿನ್ ಶೆಟ್ಟಿ, ಶ್ರೀ ಶುಷಾಂತ್, ಶ್ರೀ ಜೀವನ್ ,ಕಾರ್ಯಾಲಯ ಪ್ರಮುಖ್ ಗುರುಚರಣ್ ಮುಂತಾದವರು ಉಪಸ್ಥಿತರಿದ್ದರು .

Comments are closed.