ಕರಾವಳಿ

ಮಂಗಳೂರು : ಶುಶ್ರೂಷಕಿ ಮತ್ತು ಗ್ರೂಪ್ ಡಿ ಹುದ್ದೆಗಳ ತಾತ್ಕಾಲಿಕ ನೇಮಕ – ಮೇ 6ರಂದು ನೇರ ಸಂದರ್ಶನ

Pinterest LinkedIn Tumblr

ಮಂಗಳೂರು, ಮೇ 04 : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ DCH (Dedicated Covid Hospital) ಆಗಿ ಕಾರ್ಯನಿರ್ವಹಿಸುತ್ತಿರುವ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಗೆ ಹಾಗೂ DCHC (Dedicated Covid Health Centre) ಆಗಿ ಕಾರ್ಯನಿರ್ವಹಿಸುತ್ತಿರುವ ತಾಲೂಕು ಆಸ್ಪತ್ರೆಗಳಿಗೆ ಶುಶ್ರೂಷಕಿ ಮತ್ತು ಗ್ರೂಪ್ ಡಿ ಹುದ್ದೆಗಳನ್ನು ಪ್ರಸ್ತುತ ಸಾಲಿನ ಸೆಪ್ಟೆಂಬರ್ 30ರ ವರೆಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಮೇ 6ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿಯಲ್ಲಿ ನೇರ ಸಂದರ್ಶನ ಕರೆಯಲಾಗಿದೆ.

ತಾತ್ಕಾಲಿಕ ಹುದ್ದೆಗಳ ವಿವರ:

ಶುಶ್ರೂಷಕಿ ಡಿ.ಸಿ.ಹೆಚ್ ಹುದ್ದೆಗಳ ಸಂಖ್ಯೆ-19 ಡಿಪ್ಲೋಮ ಇನ್ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೊಂದಣಿ ಯಾಗಿರಬೇಕು, ಗ್ರೂಪ್ ‘ಡಿ’ ಡಿ.ಸಿ.ಹೆಚ್ ಹುದ್ದೆಗಳ ಸಂಖ್ಯೆ-46, ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು,

ಶುಶ್ರೂಷಕಿ ಡಿ.ಸಿ.ಹೆಚ್.ಸಿ ಹುದ್ದೆಗಳ ಸಂಖ್ಯೆ-5, ಡಿಪ್ಲೋಮ ಇನ್ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೊಂದಣಿಯಾಗಿರಬೇಕು, ಗ್ರೂಪ್ ‘ಡಿ’ ಡಿ.ಸಿ.ಹೆಚ್.ಸಿ ಹುದ್ದೆಗಳ ಸಂಖ್ಯೆ -4, ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು.

ಅಭ್ಯರ್ಥಿಗಳು ವಿದ್ಯಾರ್ಹತೆಯ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಡೀಕೃತ ನಕಲು ಪ್ರತಿಗಳು, ಅನುಭವಕ್ಕೆ ಆದ್ಯತೆ ನೀಡಲಾಗುವುದು. ಆದ್ದರಿಂದ ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

(ಈಗಾಗಲೇ ಈ ಕಚೇರಿಗೆ ಅರ್ಜಿಯನ್ನು ಸಲ್ಲಿಸಿದವರು ನೇರ ಸಂದರ್ಶನಕ್ಕೆ ಎಲ್ಲಾ ದಾಖಲಾತಿಗಳೊಂದಿಗೆ ಹಾಜರಾಗುವುದು) .

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿ ದೂ.ಸಂ:0824-2423672 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.

Comments are closed.