ಕರಾವಳಿ

ಮಂಗಳೂರಿನ ಆಸ್ಪತ್ರೆಯೊಂದರ 2ನೇ ಮಹಡಿಯಿಂದ ಕೆಳಗೆ ಹಾರಿದ ಕೋವಿಡ್ ಸೋಂಕಿತ!

Pinterest LinkedIn Tumblr

ಮಂಗಳೂರು, ಮೇ.03: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೋಂಕಿತ ಯುವಕನೋರ್ವ ಆಸ್ಪತ್ರೆಯ ಕಟ್ಟಡದಿಂದ ಕೆಳಕ್ಕೆ ಹಾರಿದ ಘಟನೆ ಸೋಮವಾರ ನಡೆದಿದ್ದು, ಅದೃಷ್ಟವಶತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಲಮುಂಡ್ಕೂರ್ ಗ್ರಾಮದ ಬಾನಂಗಡಿ ನಿವಾಸಿ 30 ವರ್ಷ ಪ್ರಾಯದ ಹರೀಶ್ ಎಂಬತಾ ವೆನ್ಲಾಕ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು ಮಧ್ಯಾಹ್ನ ವಾರ್ಡ್‌ನ ಕಿಟಿಕಿಯ ಮೂಲಕ ಹೊರ ಬಂದು ಆಸ್ಪತ್ರೆಯ ಎರಡನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾನೆ.

ಘಟನೆಯಿಂದ ಯುವಕಸಣ್ಣ ಪುಟ್ಟ ಗಾಯಗಳೊಂದಿಗೆ, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ. ಸೋಂಕಿತ ವ್ಯಕ್ತಿಯು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ ಖಿನ್ನತೆಗೊಳಗಾಗಿ ಈ ಕೃತ್ಯ ಎಸೆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

Comments are closed.