ಕರಾವಳಿ

ಮಂಗಳೂರು : ಮೇ 15ರ ಒಳಗೆ ಕಡ್ಡಾಯವಾಗಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಆದೇಶ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಘನತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಸಲುವಾಗಿ ಕರ್ನಾಟಕ ಪೌರ ಘನ ತ್ಯಾಜ್ಯ ನಿಯಮವನ್ನು ಅನುಷ್ಠಾನಗೊಳಿಸಲಾಗಿದೆ.

ಈ ನಿಯಮದಂತೆ ಪಾಲಿಕೆ ವ್ಯಾಪ್ತಿಯೊಳಗಿನ ಬೃಹತ್ ತ್ಯಾಜ್ಯ ಉತ್ಪಾದಕರಾದ ಅಪಾರ್ಟ್‍ಮೆಂಟ್ ಅಸೋಸಿಯೇಷನ್‍ಗಳು, ವಿದ್ಯಾರ್ಥಿ ನಿಲಯಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್‍ಗಳು, ಬಾರ್‍ಆಂಡ್ ರೆಸ್ಟೋರೆಂಟ್‍ಗಳು, ಕಲ್ಯಾಣ ಮಂಟಪಗಳು, ಕ್ಯಾಟರಿಂಗ್‍ಗಳು, ಕೋಳಿ ಮಾರಾಟಗಾರರು, ಸಣ್ಣ ಕೈಗಾರಿಕೆಗಳು, ಬಿಲ್ಡರ್‍ಗಳು ಹಾಗೂ ಇತರರಿಗೆ ತ್ಯಾಜ್ಯವನ್ನು ವಿಂಗಡಿಸಿ, ಮೂಲದಲ್ಲಿಯೇ ತ್ಯಾಜ್ಯ ಸಂಸ್ಕರಿಸುವ ವ್ಯವಸ್ಥೆಯನ್ನು ಅನುಷ್ಟಾನಗೊಳಿಸಲು ಸೂಚನೆ ನೀಡಲಾಗಿದ್ದು, ಕೆಲವೊಂದು ಸಂಸ್ಥೆಯವರು ಮಾತ್ರ ಘಟಕವನ್ನು ಸ್ಥಾಪಿಸಿ ತ್ಯಾಜ್ಯ ಸಂಸ್ಕರಣೆ ಗೊಳಿಸುತ್ತಿದ್ದು, ಬೃಹತ್ ತ್ಯಾಜ್ಯ ಉತ್ಪಾದಕರು ಪಾಲಿಕೆಯ ಸೂಚನೆಯನ್ನು ಪಾಲಿಸಲು ವಿಫಲರಾಗಿದ್ದು, ಇವರಿಗೆ ಇನ್ನು ಮುಂದೆ ಯಾವುದೇ ವಿನಾಯಿತಿ ನೀಡದೇ ಮೇ 15 ರಒಳಗೆ ಕಡ್ಡಾಯವಾಗಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಬೇಕು.

ಹಸಿ ಕಸ ಸಂಸ್ಕರಣೆಗೆ ತಂತ್ರಜ್ಞಾನವನ್ನು ಬಳಸಲು ಹಸಿರು ನ್ಯಾಯ ಪೀಠರಾಜ್ಯ ಮಟ್ಟದ ಸಮಿತಿಯವರು ಸರ್ಕಾರೇತರ ಸಂಸ್ಥೆಗಳ, ಸ್ವಯತ್ತ ಸಂಸ್ಥೆಗಳ ಪಟ್ಟಿಯನ್ನು ಒದಗಿಸಿದ್ದು, ಸದ್ರಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವ ಉದ್ದೇಶದಿಂದ ಬೃಹತ್ ತ್ಯಾಜ್ಯ ಉತ್ಪಾದಕರು ಹಾಗೂ ಮನೆಗಳು ಅವಶ್ಯಕತೆಗೆ ಅನುಗುಣವಾಗಿ ತಮ್ಮ ಹಂತದಲ್ಲಿ ಬಳಸಬಹುದಾದ ತಂತ್ರಜ್ಞಾನವನ್ನು ಹೊಂದಿರುವ ಸಂಸ್ಥೆಗಳ ಪಟ್ಟಿಯ ವಿವರವನ್ನು ಪಾಲಿಕೆಯ ವೆಬ್‍ಸೈಟ್ http://www.mangalurucity.mrc.gov.inನಲ್ಲಿ ಪ್ರಕಟಿಸಲಾಗಿರುತ್ತದೆ.

ತ್ಯಾಜ್ಯ ಉತ್ಪಾದಕರು ಹೆಚ್ಚಿನ ಮಾಹಿತಿಗಾಗಿ ಸದ್ರಿ ಸಂಸ್ಥೆಯನ್ನು ಅಥವಾ ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ ದಯಾನಂದ ಪೂಜಾರಿ ಮೊ.ನಂ:7411842856 , ಆರೋಗ್ಯ ವಿಭಾಗದೂ. ಸಂಖ್ಯೆ: 0824-2220313-314 ಅನ್ನು ಸಂಪರ್ಕಿಸುವಂತೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.