
ಮಂಗಳೂರು : ಐದು ವರ್ಷಗಳ ಹಿಂದೆ ಯುವತಿಯೊಬ್ಬಳು ತನ್ನ ಮೇಲೆ ನಿರಂತರ ಅತ್ಯಾಚಾರ ನಡೆದಿದೆ ಎಂದು ಸುಳ್ಳು ದೂರು ನೀಡಿರುವ ಪ್ರಕರಣದ ಆರೋಪಿಯನ್ನು ದಿನಾಂಕ 19 -04 -2021 ರಂದು 6 ನೇ ದ.ಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಯುವತಿ ಯುವಕನೊಂದಿಗೆ ಲಿವಿಂಗ್ ರಿಲೆಷನ್ ನಲ್ಲಿದ್ದು, ಬಳಿಕ ಯುವತಿ ತನ್ನ ಮೇಲೆ ಅತ್ಯಾಚಾರ ನಡೆದಿದೆ. ಜೊತೆಗೆ ನನಗೆ ವಂಚನೆ ಮಾಡಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಯುವಕ ಹಾಗೂ ಆತನ ತಂದೆ ತಾಯಿ ವಿರುದ್ಧ ದೂರು ನೀಡಿದ್ದು, ಪ್ರಕರಣದ ಆರೋಪಿ ಅಮಿತ್ ಕುಮಾರ್ ಮೇಲೆಯಿದ್ದ ಭಾರತ ದಂಡ ಸಂಹಿತೆ ರ ಅಡಿಯಲ್ಲಿ ದಾಖಲಾದ ವಂಚಿಸಿದಕ್ಕೆ ದಂಡನೆ, ಬಲವಂತ ಸಂಭೋಗಕ್ಕೆ ದಂಡನೆ, (ಅಪರಾಧಿಕ ಭಯೋತ್ಪಾದನೆಗೆ ದಂಡನೆ , ಆತ್ಮಹತ್ಯೆಗೆ ದುಷ್ಪೇರಣೆ. (ಕಲಂ 417, 376, 506, 306 r /w 34 IPC ) ಆರೋಪವನ್ನು ಮಾನ್ಯ 6 ನೇ ದ.ಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಘಟನೆ ವಿವರ :– ಈ ಪ್ರಕರಣದ ಸಂತ್ರಸ್ತೆಯು ದಿನಾಂಕ 3 -11 -2016 ರಂದು ಕಳೆದ 2013 ಅಕ್ಟೋಬರ್ ತಿಂಗಳ 2 ವಾರದಲ್ಲಿ ತನ್ನ ಜೊತೆ ಕೆಲಸಮಾಡುತ್ತಿದ್ದ ಅಮಿತ್ ಕುಮಾರ್ ರನು ತನ್ನ ಸ್ನೇಹಿತ ನ ಹುಟ್ಟುಹಬ್ಬ ದ ನೆಪಹೇಳಿ ಮಣಿಪಾಲ ದ ಹೋಟೆಲ್ ಗೆ ಕರೆದುಕೊಂಡು ಹೋಗಿ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿ ಮತ್ತು ಅವಳ ಪೋಟೋ ತೆಗೆದು, ಇದರ ಬಗ್ಗೆ ಯಾರಿಗಾದರು ದೂರು ನೀಡಿದರೆ ಈ ಪೋಟೋವನ್ನು ತಾನು ಕೆಲಸಮಾಡುವ ಕಂಪೆನಿ ಯಲ್ಲಿ ಎಲ್ಲರಿಗೂ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿ ನಂತರ ಮದುವೆಯಾಗುತ್ತೇನೆ ಎಂದು ನಂಬಿಸಿ, ಬಿಜೈ ನಲ್ಲಿ ಮನೆ ಮಾಡಿ ಅಲ್ಲಿ ಸಹ ಹಲವು ಬಾರಿ ನನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ನಡೆಸಿರುತ್ತಾನೆ ಮತ್ತು ಅದಲ್ಲದೆ ಒಂದು ಲಕ್ಷ ಹಣ ಪಡೆದು ಕೊಂಡು, ನಂತರದ ದಿನಗಳಲ್ಲಿ ಆರೋಪಿಯು ಮದುವೆಯಾಗಲು ನಿರಾಕರಿಸಿರಿರುತ್ತಾನೆ ಹಾಗು ಇದಕ್ಕೆ ಆರೋಪಿಯ ತಂದೆ ತಾಯಿ ಕುಮ್ಮಕ್ಕು ನೀಡಿರುತ್ತಾರೆ . ಈ ಎಲ್ಲಾ ವಿಷಯಗಳಿಂದ ಸಂತ್ರಸ್ತೆ ಯು ಬೇಸರಗೊಂಡು CITROGEN ಮಾತ್ರೆ ಸೇವಿಸಿ ಆತ್ಮಹತ್ಯೆ ಗೆ ಪ್ರಯತ್ನಿಸಿರುತ್ತಾಳೆ ಇದರ ಪ್ರಕಾರವಾಗಿ ಸಂತ್ರಸ್ತೆ ಯು ಮುಲ್ಕಿ ಠಾಣೆ ಯಲ್ಲಿ ಅಪರಾಧ ಸಂಖ್ಯೆ 192 /16 ರಲ್ಲಿ ಕಲಂ 417 ,376 ,506 ,306 r /w 34 I .P.C ಪ್ರಕರಣ ದಾಖಲಾಯಿತು .
ಈ ಪ್ರಕರಣದ ವಿಚಾರಣೆ ಕೈಗೊಂಡ ಮುಲ್ಕಿ ಠಾಣೆ ತನಿಖಾಧಿಕಾರಿಯು ತನಿಖೆ ನಡೆಸಿ ಮಾನ್ಯ 6 ನೇ ದ.ಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆರೋಪಿ ಮತ್ತು ಆರೋಪಿಯ ತಂದೆ ತಾಯಿ ಮೇಲೆ ದೋಷಾರೋಪಣಾ ಪಟ್ಟಿ ಯನ್ನು ಸಲ್ಲಿಸಿರುತ್ತಾರೆ .
ಆರೋಪಿಗಳು ತಮ್ಮ ಬಂಧನದ ಕುರಿತು ಜಾಮೀನು ಅರ್ಜಿ ಸಲ್ಲಿಸಿದ್ದು , ಆರೋಪಿಯ ತಂದೆ ತಾಯಿಗೆ ಮಂಗಳೂರು 6 ನೇ ದ.ಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿರುತ್ತದೆ
ಆರೋಪಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಕ್ರಿಮಿನಲ್ ಪಿಟಿಷನ್ ಸಂಖ್ಯೆ1946 / 2017 ರ ಪ್ರಕಾರ ನಿರೀಕ್ಷಣಾ ಜಾಮೀನು ನೀಡಿರುತ್ತದೆ .
ಅದಲ್ಲದೆ ಆರೋಪಿಯ ತಂದೆ ತಾಯಿ ಮೇಲೆ ಹಾಕಿದ್ದ ಪ್ರಥಮ ವರ್ತಮಾನ ವರದಿಯನ್ನು quash ಮಾಡಬೇಕೆಂದು ಆರೋಪಿಯ ಪರ ವಕೀಲರು ಉಚ್ಚ ನ್ಯಾಯಾಲಯ ಕ್ಕೆ ಅರ್ಜಿ ಸಲ್ಲಿಸಿದ್ದು ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ 11 -09 -2018 ಕ್ರಿಮಿನಲ್ ಪಿಟಿಷನ್ ಸಂಖ್ಯೆ 4728 /2018 ರಲ್ಲಿ ಇವರ ಮೇಲಿದ್ದ ಪ್ರಥಮ ವರ್ತಮಾನ ವರದಿಯನ್ನು quash ಮಾಡಿರುತ್ತದೆ ಹಾಗು ಆರೋಪಿಯ ತಂದೆ ತಾಯಿಯನ್ನು ಈ ಪ್ರಕರಣದಿಂದ ಖುಲಾಸೆ ಮಾಡಲಾಯಿತು .
ಪ್ರಕರಣದ ವಿಚಾರಣೆ ಯನ್ನು ಕೈಗೊಂಡ ಮಾನ್ಯ ನ್ಯಾಯಾಲವು, ಸಂತ್ರಸ್ತೆ ಪರವಾಗಿ ಸರಕಾರಿ ವಕೀಲರು ವಾದಿಸಿದ್ದು 13 ಸಾಕ್ಷಿ ವಿಚಾರಣೆ ಹಾಗು ಪಾಟೀ ವಿಚಾರಣೆ ಮಾಡಲಾಗಿ ನಿಪಿP 40 ದಾಖಲಾಗಲೆಗಳನ್ನು ಗುರುತಿಸಿದ್ದು ಹಾಗು ಆರೋಪಿ ಯ ತಾಯಿಯನ್ನು ಸಹ ವಿಚಾರಣೆ ಮಾಡಲಾಯಿತು ಮತ್ತು ಆರೋಪಿಯ ಪರವಾಗಿ ನಿಪಿ D 6 ದಾಖಲೆ ಯನ್ನು ಗುರುತಿಸಲಾಯಿತು .
ಮಾನ್ಯ ನ್ಯಾಯಾಲಯವು ವಾದ ಪ್ರತಿವಾದ ಆಳಿಸಿ ಆರೋಪಿಯ ವಿರುದ್ಧ ಸರಿಯಾದ ಸೂಕ್ತ ಸಾಕ್ಷಾಧಾರ ಕೊರತೆಯಿಂದ ಆರೋಪಿಯನ್ನು ಈ ಪ್ರಕರಣದಿಂದ ದಿನಾಂಕ 19 -04 -2021 ರಂದು ಮಾನ್ಯ 6 ನೇ ದ.ಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕೆ .ಎಂ ರಾಧಾಕೃಷ್ಣ ರವರು ಈ ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ ಎಂದು ತೀರ್ಪು ನೀಡಿರುತ್ತಾರೆ .
ಆರೋಪಿಯ ಪರವಾಗಿ ವೆರಿಟಾಸ್ ಲೆಗೀಸ್ ಅಸ್ಸೊಸಿಯೆಷನ್ ಮಂಗಳೂರಿನ ಖ್ಯಾತ ವಕೀಲರಾದ ಶ್ರೀ ರಾಘವೇಂದ್ರ ರಾವ್, ಶ್ರೀಮತಿ ಗೌರಿ ಶೆಣೈ , ಸುಪ್ರಿಯಾ ಆಚಾರ್ಯ ವಾದಿಸಿದ್ದರು .
Comments are closed.