
ಮಂಗಳೂರು, ಎಪ್ರಿಲ್.24 : ಸುರತ್ಕಲ್ ಸಮೀಪದ ಕಳವಾರ ಎಂಬಲ್ಲಿರುವ ಕೆಮಿಕಲ್ ಪ್ಯಾಕ್ಟರಿ ಯಲ್ಲಿ ಬಾರೀ ಸ್ಪೋಟದೊಂದಿಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಬಜಪೆ ವ್ಯಾಪ್ತಿಯ ಸುರತ್ಕಲ್ ಸಮೀಪದ ಎಸ್‌ಇಝಡ್‌ನಲ್ಲಿರುವ ಕ್ಯಾಟಸಿಂತ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಹೊಸದಾಗಿ ನಿರ್ಮಾಣಗೊಂಡ ಕಂಪೆನಿ ಇದಾಗಿದ್ದು, ಇಲ್ಲಿನ ಕೆಮಿಕಲ್ಸ್ ಗಳಿಗೆ ಮಧ್ಯಾಹ್ನ 1:30ರ ಸಮಾರಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕ್ಯಾಟಸೆಂತ್ ಫ್ಯಾಕ್ಟರಿಯ 4 ನೇ ಪ್ಲ್ಯಾಂಟ್ ನ 2 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಲ್ಲಿ ವೆಲ್ಡಿಂಗ್ ಕಾರ್ಯ ನಡೆಯುತಿತ್ತು ಎನ್ನಲಾಗಿದೆ. ಬೆಂಕಿ ಅವಘಡದಿಂದ ಸುರತ್ಕಲ್ ಭಾಗದ ಸುತ್ತಮುತ್ತ ದಟ್ಟವಾದ ಹೊಗೆ ಆವರಿಸಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಬಹುತೇಕ ನೌಕರರು ಗೈರು ಹಾಜರಾಗಿದ್ದರು. ಹಾಗೂ ಕಂಪೆನಿಯ ಸಿಬ್ಬಂದಿಗಳ ಊಟದ ಸಮಯದಲ್ಲಿ ಸ್ಪೋಟ ಸಂಭವಿಸಿದ ಹಿನ್ನೆಲೆ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಎಂ ಆರ್ ಪಿ ಎಲ್, ,ಕದ್ರಿ ಅಗ್ನಿಶಾಮಕ ದಳ, ಎಚ್‌ಪಿಸಿಎಲ್, ಎನ್ಎಂಪಿಟಿ ಸಿಬ್ಬಂದಿಗಳು ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅವಘಡದಿಂದ ಎಷ್ಟು ನಷ್ಟ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಬಜಪೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
Comments are closed.