ಕರಾವಳಿ

ಕೋವಿಡ್ ನಿರ್ವಹಣೆಯಲ್ಲಿ ಅವ್ಯವಸ್ಥೆ : ಸರ್ಕಾರದ ವಿರುದ್ಧ ನಟಿ ಅನುಪ್ರಭಾಕರ್ ಕಿಡಿ

Pinterest LinkedIn Tumblr

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ಅವ್ಯವಸ್ಥೆ ಬಗ್ಗೆ ಚಿತ್ರ ನಟಿ ಅನು ಪ್ರಭಾಕರ್ ಅಸಮಾಧಾನ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ.

ಈಗಾಗಲೇ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಸ್ಯಾಂಡಲ್ ವುಡ್ ನಟಿ ಅನು ಪ್ರಭಾಕರ್ ನನಗೆ ಕೊರೊನಾ ಪಾಸಿಟಿವ್ ಬಂದು 6 ದಿನವಾಗಿದೆ. ಮನೆಯಲ್ಲಿಯೇ ಐಸೋಲೇಟ್ ಆಗಿದ್ದೇನೆ. ಆದರೆ ಬಿಬಿಎಂಪಿಯಿಂದ ಈವರೆಗೆ ಯಾವುದೇ ಫೋನ್ ಬಂದಿಲ್ಲ, ಕೋವಿಡ್ ರಿಪೋರ್ಟ್ ವೆಬ್ ಸೈಟ್ ನಲ್ಲಿಯೂ ಅಪ್ ಡೇಟ್ ಆಗಿಲ್ಲ. ಅಲ್ಲದೇ ನನಗೆ ಬಿಯು ನಂಬರ್ ಕೂಡ ಸಿಕ್ಕಿಲ್ಲ ಎಂದು ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಅನು ಪ್ರಭಾಕರ್ ಏಪ್ರಿಲ್ 17ರಿಂದ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, 6 ದಿನವಾದರೂ ಬಿಬಿಎಂಪಿಯಿಂದ ಈವರೆಗೆ ಯಾವುದೇ ಸ್ಪಂದನೆಯೂ ಸಿಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕಿಡಿಕಾರಿದ್ದಾರೆ. ಇದನ್ನು ಆರೋಗ್ಯ ಸಚಿವ ಸುಧಾಕರ್ ಅವರ ಗಮನಕ್ಕೆ ತರಲು ಬಯಸುವುದಾಗಿಯೂ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.

ಜೊತೆಗೆ ಈ ವಿಷಯದ ಬಗ್ಗೆ ಸಾಮಾಜಿಕ ಜಲತಾಣದಲ್ಲಿ ವಿಡೀಯೋ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

Comments are closed.