ಕರಾವಳಿ

ಪೊ. ಎಂ.ಎ. ಹೆಗಡೆಯವರ ಅಗಲುವಿಕೆ ವಿದ್ವತ್ ವಲಯಕ್ಕೆ ನಷ್ಟ : ಕಲ್ಕೂರ

Pinterest LinkedIn Tumblr

ಮಂಗಳೂರು :  ಬಹುಶ್ರುತ ವಿದ್ವಾಂಸ, ಅರ್ಥಧಾರಿ ನಿವೃತ್ತ ಪ್ರಾಚಾರ್ಯ, ಯಕ್ಷಗಾನ ಪ್ರಸಂಗ ಕರ್ತ ಯಕ್ಷಗಾನ ಅಕಾಡೆಮಿಯ ಸಮರ್ಥ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆಯವರ ನಿಧನ ಕೇವಲ ಯಕ್ಷಗಾನ ಕ್ಷೇತ್ರಕ್ಕೆ ಮಾತ್ರವಲ್ಲ ಸಮಗ್ರ ವಿದ್ವತ್ ವಲಯಕ್ಕೆ ಭರಿಸಲಾರದ ನಷ್ಟ.

ಯಕ್ಷಗಾನ ಅಕಾಡೆಮಿಗೆ ಎರಡನೇ ಬಾರಿ ಅಧ್ಯಕ್ಷರಾದುದು ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಅವರು ತಮ್ಮ ವಿದ್ವತ್ಪೂರ್ಣ ಗ್ರಂಥಗಳಿಂದ ಮತ್ತು ಕಾರ್ಯ ವೈಖರಿಯಿಂದ ಸರಳ ನಿರಾಡಂಬರ ವ್ಯಕ್ತಿತ್ವದಿಂದ ಸದಾ ಸ್ಮರಣೀಯರು ಎಂಬುದಾಗಿ ಕಲ್ಕೂರ ಪ್ರತಿಷ್ಠಾನ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರರು, ಕಲ್ಕೂರ ಪ್ರತಿಷ್ಠಾನದಿಂದ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ದಿವಂಗತರ ಆತ್ಮಕ್ಕೆ ಸದ್ಗತಿ ಕೋರಿದರು.

ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರು ದಿ. ಹೆಗಡೆಯವರ ಮತ್ತು ತಮ್ಮ ಸುದೀರ್ಘ ಒಡನಾಟವನ್ನು ಸ್ಮರಿಸಿಕೊಂಡು ಹೆಗಡೆಯವರು ಘನ ವಿದ್ವಾಂಸರೆಂದು ಶ್ಲಾಘಿಸಿದರು.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಯಕ್ಷಗಾನ ಅಕಾಡೆಮಿಯ ಹಾಲಿ ಸದಸ್ಯ ಕದ್ರಿ ನವನೀತ ಶೆಟ್ಟಿಯವರು ನುಡಿನಮನ ಸಲ್ಲಿಸಿದರು.

ಪೊಳಲಿ ನಿತ್ಯಾನಂದ ಕಾರಂತ, ಪ್ರೊ. ಜಿ.ಕೆ. ಭಟ್ ಸೇರಾಜೆ, ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿಯವರು ಸಂದರ್ಭೋಚಿತವಾಗಿ ಮಾತಾಡಿದರು. ಜನಾರ್ಧನ ಹಂದೆ ವಂದಿಸಿದರು.

Comments are closed.