ಕರಾವಳಿ

ಮಂಗಳೂರು : ಅರ್ಹ ಫಲನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿದ ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು : ರಥಬೀದಿ ಪಂಚ ಮಹಾಶಕ್ತಿ ಶ್ರೀ ಗಾಯತ್ರಿ ದೇವಿ ದೇವಸ್ಥಾನದ ವತಿಯಿಂದ ಟೈಲರಿಂಗ್ ಅಸೋಸಿಯೇಶನ್ ಮೂಲಕ ಶಾಸಕ ವೇದವ್ಯಾಸ್ ಕಾಮತ್ ಅವರು 10 ಹೊಲಿಗೆ ಯಂತ್ರಗಳನ್ನು ಅರ್ಹರಿಗೆ ವಿತರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಕಾಮತ್, ಕಳೆದ ಬಾರಿ ಟೈಲರಿಂಗ್ ಅಸೋಸಿಯೇಶ್ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಸೋಸಿಯೇಷನ್ ಪ್ರಮುಖರು ಹೊಲಿಗೆ ಯಂತ್ರಕ್ಕಾಗಿ ಮನವಿ ಸಲ್ಲಿಸಿದ್ದರು. ಮೊದಲು ನನ್ನ ವೈಯಕ್ತಿಕ ನೆಲೆಯಲ್ಲಿ ಒಂದಷ್ಟು ಯಂತ್ರಗಳನ್ನು ನೀಡಿದ್ದೆ.

ಹೆಚ್ಚುವರಿ ಹೊಲಿಗೆ ಯಂತ್ರವನ್ನು ನೀಡಲು ರಥಬೀದಿಯ ಪಂಚ ಮಹಾಶಕ್ತಿ ಶ್ರೀ ಗಾಯತ್ರಿ ದೇವಿ ದೇವಸ್ಥಾನದ ಪ್ರಮುಖರು ಮುಂದೆ ಬಂದ ಹಿನ್ನೆಲೆಯಲ್ಲಿ 10 ಹೊಲಿಗೆ ಯಂತ್ರಗಳನ್ನು ಟೈಲರಿಂಗ್ ಅಸೋಸಿಯೇಷನ್ ಮೂಲಕ ಅರ್ಹರಿಗೆ ವಿತರಿಸಲಾಯಿತು ಎಂದರು.

ಅವಶ್ಯಕತೆ ಉಳ್ಳವರಿಗೆ ನೀಡುವ ಸಹಾಯವು ಭಗವಂತನಿಗೆ ನೈವೇದ್ಯ ಅರ್ಪಿಸಿದಂತೆ. ಆ ನಿಟ್ಟಿನಲ್ಲಿ ದೇವಸ್ಥಾನದ ಮುಖ್ಯಸ್ಥರು ನೀಡಿರುವ ಸಹಕಾರ ಅವಸ್ಮರಣೀಯ. ಹಾಗಾಗಿ ದೇವಸ್ಥಾನದ ಆಡಳಿತ ಸಮಿತಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರಭಾ ಮಾಲಿನಿ,ವಿಠಲ್ ಕುಡ್ವ, ಅಮರ್, ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಅರುಣ್ ಜಿ. ಶೇಟ್, ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮೇಶ್ ಕೃಷ್ಣ ಶೇಟ್, ಮೊಕ್ತೇಸರರಾದ ಎಸ್. ರಮಾನಂದ ಶೇಟ್, ಯು.ಮಂಜುನಾಥ ಶೇಟ್, ದೈವಜ್ಞ ಮಹಿಳಾ ಮಂಡಳಿಯ ಅದ್ಯಕ್ಷರಾದ ಪುಷ್ಪ ಕೃಷ್ಣಾನಂದ, ದೈವಜ್ಞ ಬ್ರಾಹ್ಮಣರ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅದ್ಯಕ್ಷರಾದ ಶ್ರೀಪಾದ ಬಿ. ರಾಯ್ಕರ್, ದಾನಿಗಳಾದ ವಿನೋದ ಎಸ್.ಶೇಟ್, ಪ್ರಭಾವತಿ ರಾವ್, ನಾಗರಾಜ್ ಶೇಟ್,ಟೈಲರಿಂಗ್ ಅಸೋಸಿಯೇಷನ್ ಪ್ರಮುಖರು ಮುಂತಾದವರು ಉಪಸ್ಥಿತರಿದ್ದರು.

Comments are closed.