ಕರಾವಳಿ

ಕಟೀಲು : ಪಾರ್ಕಿಂಗ್ ಸ್ಥಳ, ಫುಟ್ ಪಾತ್,ತುಳು ಲಿಪಿಯ ಫಲಕ ಮತ್ತು ನೂತನ ಬಸ್ ತಂಗುದಾಣ ಉದ್ಘಾಟನೆ

Pinterest LinkedIn Tumblr

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸುಮಾರು 92 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಪಾರ್ಕಿಂಗ್ ಸ್ಥಳ, ಕಟೀಲಿನ ಲಕ್ಷ್ಮೀನಾರಾಯಣ ಮಂದಿರದಿಂದ ಕಟೀಲಿನ ವರೆಗೆ ಸುಮಾರು 37 ಲಕ್ಷ ರೂಗಳ ನಿರ್ಮಿಸಿದ ಫುಟ್ ಪಾತ್ ಹಾಗೂ ತುಳು ಲಿಪಿಯ ಫಲಕ ಮತ್ತು ನೂತನ ಬಸ್ ತಂಗುದಾಣವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಟೀಲು ದೇಗುಲದ ಮೊಕ್ತೇಸರರು, ಅರ್ಚಕರು ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Comments are closed.