ಕರಾವಳಿ

ಈ ಖತರ್ನಾಕ್ ಓದಿದ್ದು ಬಿಎಸ್ಸಿ, ಮಾಡೋದು ಬೈಕ್ ಕಳ್ಳತನ.!

Pinterest LinkedIn Tumblr

ಉಡುಪಿ: ಕೀ ಸಮೇತವಾಗಿ ಬಿಟ್ಟು ಹೋಗುವ ಬೈಕ್‌ನ್ನು ಕಳ್ಳತನ ಮಾಡುವ ಆರೋಪಿಯನ್ನು ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳಗಾಂನ ಹುಕ್ಕೇರಿ ತಾಲೂಕಿನ ಶಿರಾಹಟ್ಟಿಯ ಸಾಗರ್ ಸುದೀರ್ ಹರ್ಗಾಪುರೆ (26) ಎಂದು ಗುರುತಿಸಲಾಗಿದೆ.

ಈತ ಫೆ. 24 ರಂದು ಅಜ್ಜರಕಾಡು ಭುಜಂಗ ಪಾರ್ಕ್ ಬಳಿ ಪಲ್ಸರ್ ಬೈಕ್ ಹಾಗೂ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್‌ಗಳನ್ನು ಕದ್ದಿದ್ದ. ಈತನ ಹಾಗೂ ಕಳವಾದ ಬೈಕ್ ಪತ್ತೆ ಮಾಡುವ ಬಗ್ಗೆ ಮೇಲಾಧಿಕಾರಿಯವರ ನಿರ್ದೇಶನದಂತೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಶಾಖೆಯ ಪೊಲೀಸ್ ಉಪ-ನಿರೀಕ್ಷಕರಾದ ವಾಸಪ್ಪ ನಾಯ್ಕ್, ಸಿಬ್ಬಂದಿಯವರಾದ ಮರಿಗೌಡ, ಜೀವನ್, ಸಂತೋಷ ರಾಠೋಡ್, ಮಾಲ್ತೇಶ್ ನಾಯ್ಕ ಇವರು ಕಾರ್ಯಾಚರಣೆ ನಡೆಸಿ, ಮಾ. 14ರಂದು ಉಡುಪಿಯ ಐರೋಡಿಕರ್ ಜಂಕ್ಷನ ಬಳಿ ಇರುವ ತಲ್ಲೂರು ವೈನ್ಸ್ ಎದುರು ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನಿಂದ 2 ಬೈಕ್ ವಶಕ್ಕೆ ಪಡೆದುಕೊಂಡಿದ್ದು , 1 ಬೈಕ್‌ನ್ನು ಆರೋಪಿತನು ಮೈಸೂರಿನ ಲಷ್ಕರ್ ಠಾಣಾ ಸರಹದ್ದಿನಲ್ಲಿ ಕಳವು ಮಾಡಿದ್ದೆಂದು ಹೇಳಿದ್ದು ಮೋಟಾರು ಸೈಕಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿ ಸಾಗರ್ ಸುಧೀರ್ ಬಿ.ಎಸ್.ಸಿ ಪದವಿಯಲ್ಲಿ ಅನುತ್ತೀರ್ಣನಾಗಿದ್ದು ಮಂಗಳೂರು ಮತ್ತು ಉಡುಪಿಯಲ್ಲಿ ಕೆಲವು ಖಾಸಗಿ ಮಾಲ್‌ಗಳಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ. ಉಡುಪಿಯಲ್ಲಿರುವ ಚಾರ್ವಿ ಪಿ.ಜಿಯಲ್ಲಿ ವಾಸವಾಗಿದ್ದು, ಕೀ ಸಮೇತವಾಗಿ ಬಿಟ್ಟು ಹೋಗುವ ಬೈಕ್‌ನ್ನು ಕಳ್ಳತನ ಮಾಡುವ ಪ್ರವೃತ್ತಿಯವನಾಗಿದ್ದ.

 

Comments are closed.