ಕರಾವಳಿ

ಸೂರ್ಯ ನಮಸ್ಕಾರ ಹಾಗೂ ಯೋಗಭ್ಯಾಸದ ಮೂಲಕ ವಿಶಿಷ್ಟ ರೀತಿಯಲ್ಲಿ ಯುಗಾದಿ ಆಚರಣೆ

Pinterest LinkedIn Tumblr

ಮಂಗಳೂರು : ಸಂಸ್ಕಾರ ಭಾರತಿ ಮಂಗಳೂರು , ಮತ್ತು ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ* ಜಂಟಿ ಆಶ್ರಯ ದಲ್ಲಿ ಬೊಕ್ಕಪಟ್ಣ ಅಕ್ಷಯ ಹಾಲ್ ನಲ್ಲಿ *ಯುಗಾದಿ ಉತ್ಸವವನ್ನು* ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಮನಪಾ ಸದ್ಯಸ ಜಗದೀಶ್ ಶೆಟ್ಟಿಯವರು ಉಪನ್ಯಾಸ ನೀಡಿದರು. ಈ ಬಾರಿಯ ಚಾ0ದ್ರಮಾನ ಸೌರಮಾನ ಮುಂದಿನ ದಿನ ಮತ್ತು ಮರು ದಿನವೇ ಬಂದಿರುವುದುವಿಶೇಷ ವಾಗಿದೆ.

ಸೃಷ್ಟಿಯ ಮೊದಲ ದಿನ ಸೂರ್ಯನ ಕಿರಣದ ಮೊದಲ ದಿನ ಹಸಿರು ಎಳೆಗಳು ಚಿಗುರೊಡೆಯುವ ದಿನ ಹಿಂದೂ ವರ್ಷಾರಂಭದ ಮೊದಲ ದಿನ ಹಳೇ ನೆನಪುಗಳು ಮಾಸಿಹೊಸ ಜೀವನ ಪ್ರಾರಂಭಿಸುವ ದಿನ
ಎಲ್ಲರಿಗೂ ಯುಗಾದಿ ಶುಭ ತರಲೆಂದು ಹೇಳಿ ಸಂಸ್ಕಾರ ಭಾರತಿಯ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ ಎಂದು ಜಗದೀಶ್ ಶೆಟ್ಟಿಯವರು ಹೇಳಿದರು.

ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಧನಂಜಯ ಕೊಟ್ಟಾರಿ, ಮಂಗಳೂರು ಸಂಸ್ಕಾರ ಭಾರತಿ ಅಧ್ಯಕ್ಷ ಪುರುಷೋತ್ತಮ ಭಂಡಾರಿ, ಪ್ರಾಂತ ಉಪಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಮಾಧವ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.ಪ್ರಾಂತ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾದ ನೃತ್ಯ ಗುರು ಶಾರದಾಮಣಿ ಶೇಖರ್, ಕೋಶಾಧಿಕಾರಿ ರಘುವೀರ್ ಗಟ್ಟಿ, ಶ್ರೀಲತಾ ನಾಗರಾಜ್, ಕೊಟ್ಟಾರಿ, ಗಣೇಶ್ ಕುಮಾರ್, ಧನಪಾಲ್ ಶೆಟ್ಟಿಗಾರ್, ಸುಜೀರ್ ವಿನೋದ್, ಶ್ರೀಮತಿ ಸುಖ ಲತಾ ಶೆಟ್ಟಿ ಸಹಕರಿಸಿದರು.

ಆರಂಭದಲ್ಲಿ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಸದಸ್ಯರಿಂದ ಸೂರ್ಯ ನಮಸ್ಕಾರ ಹಾಗೂ ಯೋಗ ಅಭ್ಯಾಸ ನಡೆಯಿತು.

Comments are closed.