ಕರಾವಳಿ

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಬೋಟ್‌ಗೆ ಹಡಗು ಢಿಕ್ಕಿ – ಮೂವರು ಮೃತ್ಯು-ಆರು ಮಂದಿ ನಾಪತ್ತೆ

Pinterest LinkedIn Tumblr

ಸಾಂದರ್ಭಿಕ ಚಿತ್ರ

ಮಂಗಳೂರು, ಎಪ್ರಿಲ್13: ಮಂಗಳೂರಿನ ಎನ್‌ಎಂಪಿಟಿಯಿಂದ ಸುಮಾರು 43 ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರಿಕಾ ಬೋಟ್ ಅಪಘಾತವಾಗಿ ಮೂವರು ಸಾವನ್ನಪ್ಪಿ, ಆರು ಮಂದಿ ಮೀನುಗಾರರು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ಐವರು ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಅರಬ್ಬೀ ಸಮುದ್ರದಲ್ಲಿ ಹಡಗೊಂದು ಬೋಟ್‌ಗೆ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಬವಿಸಿದೆ ಎನ್ನಲಾಗಿದೆ.

ಸೋಮವಾರ ತಡರಾತ್ರಿ ಸುರಿದ ಭಾರೀ ಗಾಳಿ-ಮಳೆಗೆ ಹಡಗೊಂದು ಬೋಟಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಬೋಟ್‌ನಲ್ಲಿ ಒಟ್ಟು 14 ಮಂದಿ ಮೀನುಗಾರಿದ್ದರು ಎಂದು ಹೇಳಲಾಗಿದೆ.

ನವ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದ್ದು ಇದರಲ್ಲಿ 14 ಮೀನುಗಾರರು ಇದ್ದರು. ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗು ಮತ್ತು ಏರ್​ಕ್ರಾಪ್ಟ್ ಮೂಲಕ ಶೋಧ ಕಾರ್ಯ ನಡೆಸುತ್ತಿದ್ದಾರೆ. 14 ಜನರಲ್ಲಿ ಇಬ್ಬರನ್ನು ಪತ್ತೆ ಹಚ್ಚಲಾಗಿದ್ದು ಉಳಿದವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

ಹಡಗಿನ ಹೊಡೆತಕ್ಕೆ ಸಿಲುಕಿ ಅವಘಡ:

ರಬ್ಹಾ ಎಂಬ ಹೆಸರಿನ ಬೋಟ್ ಹಡಗಿನ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾಗಿವೆ. ಕರಾವಳಿ ಕಾವಲು ಪಡೆಯ ಅಧಿಕಾರಿ, ಸಿಬ್ಬಂದಿ ವರ್ಗವು ಕಾರ್ಯಾಚರಣೆಗೆ ಇಳಿದಿದೆ. ಮೃತಪಟ್ಟವರ ಸಹಿತ ಬೋಟ್‌ನಲ್ಲಿದ್ದವರು ಯಾರು, ಎಲ್ಲಿಯವರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಈವರೆಗೆ ಲಭಿಸಿಲ್ಲ. ಹೊರ ರಾಜ್ಯ ಮೂಲದವರು ಎಂದು ಹೇಳಲಾಗುತ್ತಿದೆ.

Comments are closed.