ಕರಾವಳಿ

ಸಂಶೋಧಕ ಅರುಣ್ ಉಳ್ಳಾಲ್‌ರವರಿಗೆ ಡಾಕ್ಟರೇಟ್

Pinterest LinkedIn Tumblr

ಮಂಗಳೂರು / ಉಳ್ಳಾಲ : ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಅರುಣ್ ಉಳ್ಳಾಲ್ ‌ರವರು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗಪ್ಪ ಗೌಡ ಆರ್. ಇವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ‘ಭಗವತಿ ಆರಾಧನೆ- ಸಾಂಸ್ಕೃತಿಕ ಅಧ್ಯಯನ’ ಎಂಬ ಪಿಹೆಚ್ ಡಿ. ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಉನ್ನತ ‘ಡಾಕ್ಟರೇಟ್’ ಪದವಿ ನೀಡಿ ಗೌರವಿಸಿದೆ.

ತೊಕ್ಕೊಟ್ಟಿನ ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ನಾಗೇಶ್ ತೊಕ್ಕೊಟ್ಟು ಮತ್ತು ದಿವ್ಯಾ ನಾಗೇಶ್ ದಂಪತಿಗಳ ಪುತ್ರರಾಗಿರುವ ಇವರು ಸದ್ಯ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಿರೂಪಣೆ, ಉಪನ್ಯಾಸ, ಬರವಣಿಗೆ ಸೇರಿದಂತೆ ಬಹುಮುಖ ಸಂಸ್ಕೃತಿಪರ ಕೆಲಸಗಳಿಂದ ಈಗಾಗಲೇ ಜನಮಾತಾಗಿರುವ ಅರುಣ್‌‌ರವರು ಜಿಲ್ಲೆಯಲ್ಲೇ ಮೊದಲ ಬಾರಿಗೆ ಧರ್ಮಸಂಸ್ಕಾರ ಶಿಕ್ಷಣದ ಪರಿಕಲ್ಪನೆ ಯನ್ನು ಪರಿಚಯಿಸಿ 400 ಕ್ಕೂ ಅಧಿಕ ವಿದ್ಯಾರ್ಥಿ ಮತ್ತು ಯುವಪೀಳಿಗೆಗೆ ಉಚಿತ ಧರ್ಮಶಿಕ್ಷಣ ನೀಡುತ್ತಿದ್ದಾರೆ.

Comments are closed.