ಕರಾವಳಿ

ನಾಳೆ ಮಂಗಳೂರು ವಿ.ವಿಯ 39ನೇ ವಾರ್ಷಿಕ ಘಟಿಕೋತ್ಸವ :117 ಮಂದಿಗೆ ಪಿಎಚ್.ಡಿ -ಈ ಬಾರಿ ಗೌರವ ಡಾಕ್ಟರೇಟ್ ಇಲ್ಲ

Pinterest LinkedIn Tumblr

ಮಂಗಳೂರು, ಎಪ್ರಿಲ್ 09 : ಮಂಗಳೂರು ವಿಶ್ವವಿದ್ಯಾನಿಲಯದ 39ನೇ ವಾರ್ಷಿಕ ಘಟಿಕೋತ್ಸವ  ಎಪ್ರಿಲ್ 10 ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾನಿಲಯದ ಮಂಗಳ ಗಂಗೊತ್ರಿ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಇನ್ಫೋಸಿಸ್ ಫೌಂಡೇಶನ್‍ನ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಮುಖ್ಯ ಘಟಿಕೋತ್ಸವ ಭಾಷಣವನ್ನು ಆನ್ ಲೈನ್ ಮುಖಾಂತರ ಮಾಡಲಿರುವರು.

ಈ ಬಾರಿ ಯಾರಿಗೂ ಗೌರವ ಡಾಕ್ಟರೇಟ್ ಹಾಗೂ ಡಿ.ಲಿಟ್ ಇಲ್ಲ. 117 ಮಂದಿಗೆ ಪಿಎಚ್.ಡಿ, 10 ಚಿನ್ನದ ಪದಕ, 101 ನಗದು ಬಹುಮಾನ, 188 ಮಂದಿ ರ್ಯಾಂಕ್ ಪಡೆಯಲಿದ್ದಾರೆ. ಈ ಬಾರಿ 43,743 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 33,806 ಮಂದಿ ಉತ್ತೀರ್ಣರಾಗಿದ್ದಾರೆ.

ಕೋವಿಡ್ ಕಾರಣ ಸೀಮಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುವರು. ಪಿಎಚ್.ಡಿ ಪಡೆದವರಲ್ಲಿ 14 ಮಂದಿ ವಿದೇಶಿ ವಿದ್ಯಾರ್ಥಿ ಗಳು.

ಒಟ್ಟು 43,743 ವಿದ್ಯಾರ್ಥಿ ಗಳು ಪರೀಕ್ಷೆ ಗೆ ಹಾಜರಾಗಿದ್ದು 33.806 (77.289%) ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಇದರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ 6,657 ವಿದ್ಯಾರ್ಥಿಗಳು ಹಾಜರಾಗಿದ್ದು 6397 (96.09%) ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ಪದವಿ ಪರೀಕ್ಷೆಗೆ 36,940 ವಿದ್ಯಾರ್ಥಿಗಳು ಹಾಜರಾಗಿದ್ದು 27,263 (73.80%) ವಿದ್ಯಾರ್ಥಿಗಳು ಉತ್ತೀರ್ಣರಾ ಗಿರುತ್ತಾರೆ. ಉತ್ತೀರ್ಣರಾದ 33,806 ವಿದ್ಯಾರ್ಥಿ ಗಳಲ್ಲಿ 12,635 ಹುಡುಗರು (ಶೇ 68.65%) ಮತ್ತು 21,171 ಹುಡುಗಿಯರು. (83.55%) ಉತ್ತೀರ್ಣರಾ ಗಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ ವೇಳೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೋವಿಡ್ ಹಿನ್ನಲೆಯ ಕಾರಣದಿಂದ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ ಎಂದು ಕುಲಪತಿ ತಿಳಿಸಿದ್ದಾರೆ. ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್. ಧರ್ಮಾ ಉಪಸ್ಥಿತರಿದ್ದರು.

Comments are closed.