ಕರಾವಳಿ

ಸಚಿವ ಕೋಟ ನೇತ್ರತ್ವದಲ್ಲಿ ತುರ್ತು ಸಭೆ: ಕೊರೊನಾ ನಿಯಂತ್ರಣಕ್ಕಾಗಿ ದ.ಕ.ಜಿಲ್ಲಾಡಳಿತದಿಂದ ಸಕಲ ಸಿದ್ದತೆ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಕೊರೊನಾ ನಿಯಂತ್ರಣ ಪರಿಶೀಲನಾ ತುರ್ತು ಸಭೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆಯಿತು.

ಜಿಲ್ಲಾಧಿಕಾರಿಡಾ| ರಾಜೇಂದ್ರ ಕೆ.ವಿ.ರವರು ಕೊರೊನಾ ಬಗ್ಗೆ ಮಾಹಿತಿ ಒದಗಿಸಿ ಜಿಲ್ಲೆಯಲ್ಲಿಒಟ್ಟು 680 ಸಕ್ರಿಯ ಪ್ರಕರಣಗಳಿದ್ದು, ಇವುಗಳಲ್ಲಿ 604 ಪ್ರಕರಣಗಳು ಹೋಂ ಕ್ವಾರಂಟೈನ್ ಆಗಿವೆ. ಉಳಿದ 76 ಪ್ರಕರಣ ಗಳಲ್ಲಿ 15 ಸೋಂಕಿತರಿಗೆ ಸರಕಾರಿ ಅಸ್ಪತ್ರೆ ಹಾಗೂ 69 ಜನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆಎಂದು ತಿಳಿಸಿದರು.

ಪ್ರತಿತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೇರಿದಂತೆ ಪೂರ್ಣಚಿಕಿತ್ಸೆ ಲಭ್ಯವಿರುವುದರಿಂದಜಿಲ್ಲಾಸ್ಪತ್ರೆಯ ಬದಲುತಾಲೂಕು ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಬೇಕುಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಆರೋಗ್ಯಾಧಿಕಾರಿ ಮಾತನಾಡಿ, ದ.ಕ. ಜಿಲ್ಲೆಯಲ್ಲಿ 60ವರ್ಷ ಮೇಲ್ಪಟ್ಟ ಹಿರಿಯರ ಸಂಖ್ಯೆ 2,01,629 ಇದ್ದು, ಇವರ ಪೈಕಿ 67,674 ಮಂದಿ ಹಿರಿಯರಿಗೆಅಂದರೆ ಪ್ರತಿಶತ 33ರಷ್ಟು ಹಿರಿಯ ನಾಗರಿಕರಿಗೆಕೊರೊನಾ ಪ್ರತಿರೋಧಕ ಲಸಿಕೆಗಳನ್ನು ನೀಡಲಾಗಿದೆ. 45ವರ್ಷ ಮೇಲ್ಪಟ್ಟವರ ಸಂಖ್ಯೆ 4,16,123ಇದ್ದು, ಇದೀಗ 24,603 ಮಂದಿಗೆ ಲಸಿಕೆ ನೀಡಲಾಗಿದೆಎಂದು ವಿವರಿಸಿದರು.

ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಪರಿಪೂರ್ಣ ಶ್ರಮವಹಿಸಬೇಕೆಂದು ಸಚಿವಕೋಟ ಸೂಚಿಸಿ ಎಲ್ಲಾ ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು ಸ್ವತಃ ಕೊರೋನಾ ನಿಯಂತ್ರಣ ಮತ್ತು ಲಸಿಕೆ ನೀಡಿಕೆಯ ಬಗ್ಗೆ ಗಮನ ಹರಿಸಬೇಕು ಎಂದರು.

Comments are closed.